ಭಾರೀ ಗಾತ್ರದ ಕಂಟೇನರ್ ಒಳಗಡೆ ಜಾನುವಾರುಗಳನ್ನು ತುಂಬಿ ಅದನ್ನು ಹಿಂಸಾತ್ಮಕವಾಗಿ ಭಟ್ಕಳಕ್ಕೆ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಕಂಟೇನರ್ ಒಳಗೆ ಹುಲ್ಲು-ನೀರು ಇಲ್ಲದೇ ಹೋರಾಡುತ್ತಿದ್ದ 10 ಜಾನುವಾರುಗಳನ್ನು ವಶಕ್ಕೆಪಡೆದಿದ್ದಾರೆ
ಶುಕ್ರವಾರ ಕೇರಳದಿಂದ ಭಟ್ಕಳಕ್ಕೆ ಕಂಟೇನರ್ ಮೂಲಕ ಜಾನುವರು ಸಾಗಾಟ ನಡೆದಿರುವ ಬಗ್ಗೆ ಭಟ್ಕಳ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಭಟ್ಕಳ ಹನೀಫಾಬಾದ್ ಕಡೆಗೆ ಸಾಗಿಸುತ್ತಿದ್ದ ಅಶೋಕ್ ಲೈಲೆಂಡ್ ವಾಹನವನ್ನು ಪೊಲೀಸರು ಹನೀಫಾಬಾದ್ ಪಿ ಬಿ. ಇಬ್ರಾಹಿಂ ಪೆಟ್ರೋಲ್ ಬಂಕ್ ಬಳಿ ತಡೆದರು.
ಆಗ, ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳು ಅಲ್ಲಿದ್ದವು. ಮದಿನಾ ಕಾಲನಿಯ ಅಬುಬಕ್ಕರ್ ಗಂಗಾವಳಿ, ಕೇರಳದ ಕಾಸರಗೋಡಿನ ಹಮೀದ, ಉತ್ತರ ಪ್ರದೇಶದ ಆಸಿಪ್, ಹೈದರಾಬಾದನ ಶಾಹುಲ್ ಹಮೀದ ಕೆ ಅಕ್ರಮ ಸಾಗಾಟದ ವೇಳೆ ಸಿಕ್ಕಿಬಿದ್ದರು. ಎಲ್ಲಾ ಜಾನುವಾರುಗಳನ್ನು ಬಿಡುಗಡೆ ಮಾಡಿ ವಾಹನವನ್ನು ಪೊಲೀಸರು ವಶಕ್ಕೆಪಡೆದರು. ಸಿಪಿಐ ಮಂಜುನಾಥ ಅಂಗಾರೆಡ್ಡಿ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
