ಯಲ್ಲಾಪುರದ ಸಣ್ಣಿ ಸಿದ್ದಿ ಅವರು ತಮ್ಮ 70ನೇ ವಯಸ್ಸಿನಲ್ಲಿ ವಿಷ ಸೇವಿಸಿ ಸಾವನಪ್ಪಿದ್ದಾರೆ. ಜೀವಮಾನವಿಡೀ ಕೂಲಿ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಕಂಡಿಕೊoಡಿದ್ದ ಅವರು ವೃದ್ದಾಪ್ಯದ ಅವಧಿಯಲ್ಲಿ ದುಡುಕಿನ ನಿರ್ಧಾರ ಮಾಡಿದ್ದಾರೆ.
ಯಲ್ಲಾಪುರದ ಅರಬೈಲ್ ಬಳಿಯ ಡಬ್ಗುಳಿಯಲ್ಲಿ ಸಣ್ಣಿ ಬಾಬು ಸಿದ್ದಿ ಅವರು ವಾಸವಾಗಿದ್ದರು. ಜೀವನಾಧಾರಕ್ಕೆ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಜೀವನದಲ್ಲಿ ಕಷ್ಟಗಳಿದ್ದರೂ ಸಣ್ಣಿ ಅವರು ಸಂತೋಷದಿoದಲೇ ಬದುಕಿದ್ದರು. ತಾವು ಕೂಡಿಟ್ಟ ಹಣ ಖರ್ಚು ಮಾಡಿ, ಎರಡು ಹೆಣ್ಣು ಮಕ್ಕಳಿಗೆ ಮದುವೆಯನ್ನು ಮಾಡಿಸಿದ್ದರು.
ಮಕ್ಕಳ ಮದುವೆ ನಂತರ ಸಣ್ಣಿ ಸಿದ್ದಿ ಅವರು ಒಂಟಿಯಾದರು. ವಯಸ್ಸು ಆಗಿರುವುದರಿಂದ ಮಾನಸಿಕವಾಗಿ ನೋವು ಅನುಭವಿಸಿದರು. ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದ ಅವರು ಈಚೆಗೆ ಸದಾ ಬೇಸರದಲ್ಲಿರುತ್ತಿದ್ದರು. ಸೆಪ್ಟೆಂಬರ್ 4ರ ಸಂಜೆ ಅವರು ವಿಷ ಸೇವಿಸಿದರು. ಅಲ್ಲಿಯೇ ಸಾವನಪ್ಪಿದರು. ಮಾದೇವಿ ಸಿದ್ದಿ ಅವರು ನೀಡಿದ ಮಾಹಿತಿ ಪ್ರಕಾರ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post