2025ರ ಸೆಪ್ಟೆಂಬರ್ 7ರ ರಾತ್ರಿ 8.57ರಿಂದ ಸೆಪ್ಟೆಂಬರ್ 8ರ ನಸುಕಿನ 2.25ರವರೆಗೆ ಭಾರತದಲ್ಲಿ ಚಂದ್ರಗ್ರಹಣ ಕಾಣಲಿದ್ದು, ಗ್ರಹಣದ ಅವಧಿಯಲ್ಲಿ ಚಂದ್ರನ ಬಣ್ಣ ಕೆಂಪಾಗಲಿದೆ.
ಕೆಲ ವರ್ಷಗಳ ಹಿಂದೆ ನೀಲಿ ಬಣ್ಣದ ಗ್ರಹಣ ಚಂದ್ರನನ್ನು ಆವರಿಸಿತ್ತು. ಅದರಂತೆ ಈ ದಿನ ಕೆಂಪು ಬಣ್ಣ ಚಂದ್ರನನ್ನು ಆವರಿಸಲಿದೆ. ಭಾರತದಲ್ಲಿ 5.27 ತಾಸುಗಳ ಕಾಲ ಈ ಗ್ರಹಣ ಕಾಣಲಿದೆ. ಅನೇಕ ವರ್ಷಗಳ ನಂತರ ಕೆಂಪು ಚಂದ್ರ ಗ್ರಹಣ ಕಾಣುತ್ತಿದ್ದು, ಚಂದ್ರನ ಬಣ್ಣ ಕೆಂಪಾಗುತ್ತಿರುವುದು ವಿಶೇಷದಲ್ಲಿಯೇ ವಿಶೇಷ!
`ಸೂರ್ಯ ಭೂಮಿ ಚಂದ್ರನ ನಡುವಿನ ನೆರಳಿನ ಬೆಳಕಿನ ಆಟ. ಇದು ವಿಶೇಷವಾಗಿ ಪೂರ್ಣ ಕತ್ತಲೆಯನ್ನು ಒಳಗೊಂಡಿರದ ಹಾಗೂ ವಿಶಿಷ್ಟವಾಗಿ ಕೆಂಪು ಬಣ್ಣದ ಛಾಯೆಯನ್ನ ಆವರಿಸಿರುವಂತಹ ಗ್ರಹಣ. ಯಾವುದೇ ಒಂದು ವಸ್ತುವನ್ನು ಸಂಪೂರ್ಣವಾಗಿ ಬೆಳಕನ್ನು ಬೀಳದೆ ಇರುವಂತೆ ಮಾಡಿದಾಗ ಅದರ ಮೇಲೆ ಕಪ್ಪನೆಯ ನೆರಳು ಬೀಳುತ್ತದೆ. ಆದರೆ ನೆರಳು ಬೀಳುವ ಭಾಗ ಕೆಲವೊಮ್ಮೆ ಭಾಗಶ ಕಪ್ಪು ಇಲ್ಲವೇ ಸಂಪೂರ್ಣವಾಗಿ ಕಪ್ಪಾಗಿ ತೋರುತ್ತದೆ. ಆದರೆ ಇಂದಿನ ಗ್ರಹಣ ಇದಕ್ಕೂ ವಿಭಿನ್ನಗಿದ್ದು, ಸೂರ್ಯನ ಬೆಳಕಿನ ವಿಶಿಷ್ಟವಾದ ಒಂದು ಗುಣವೇ ಕೆಂಪು ಬಣ್ಣದ ಚಂದ್ರ ಗ್ರಹಣಕ್ಕೆ ಕಾರಣ’ ಎಂಬುದು ವಿಜ್ಞಾನ ಶಿಕ್ಷಕ ಹಾಗೂ ವಿಶ್ಲೇಷಕ ಎಂ ರಾಜಶೇಖರ ಅವರ ಅಭಿಮತ.
`ಸೂರ್ಯನ ಬೆಳಕು ಏಳು ಬಣ್ಣಗಳ ಒಂದು ಮಿಶ್ರಣ. ಅವುಗಳಲ್ಲಿ ಒಂದಾದ ಕೆಂಪು ಬಣ್ಣ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಹೆಚ್ಚು ಬಾಗುವ ಪ್ರವರ್ತಿಯನ್ನು ಅಂದರೆ ವಕ್ರೀಭವನ ಹೊಂದುವ ಗುಣವನ್ನು ಪ್ರದರ್ಶಿಸುತ್ತದೆ. ಇದಕ್ಕೆ ಕಾರಣ ಅವುಗಳ ಭಿನ್ನ ಆವೃತ್ತಿಯಾಗಿರುತ್ತದೆ. ಈ ಆವೃತ್ತಿಯಲ್ಲಿಯ ಪರಿಣಾಮದಿಂದ ಭೂಮಿಯ ವಾತಾವರಣದಲ್ಲಿ ಪ್ರವೇಶಿಸಿರುವ ಸೂರ್ಯನ ಬೆಳಕು ಅದರಲ್ಲಿರುವ ಕೆಂಪು ಬಣ್ಣ ಭೂಮಿಯನ್ನು ದಾಟಿ ಭಾಗಿ ಚಂದ್ರನ ಮೇಲೆ ಬೀಳುತ್ತದೆ’ ಎಂದವರು ವಿವರಿಸುತ್ತಾರೆ.
`ಪ್ರಮುಖವಾಗಿ ಕೆಂಪು ಬಣ್ಣದ ಅತಿ ಹೆಚ್ಚು ಬಾಗುವಿಕೆಯ ಗುಣ ಕಾರಣ. ಈ ವಿದ್ಯಮಾನವನ್ನು ನಾವು ಸೂರ್ಯಸ್ತ ಮತ್ತು ಸೂರ್ಯ ಹುಟ್ಟುವ ಸಂದರ್ಭದಲ್ಲಿ ಆಕಾಶದಲ್ಲಿ ಕೆಂಪು ಬಣ್ಣವನ್ನು ಸೂರ್ಯ ಮುಳುಗಿದಾಗಲೂ ಹಾಗು ಉದಯವಾಗುವ ಸಹ ಸ್ವಲ್ಪ ಹೊತ್ತಿನವರೆಗೆ ಬೆಳಕು ಕಾಣುತ್ತೇವೆ. ಈ ವಿದ್ಯಮಾನ ನಡೆಯುವುದರಿಂದ ಗ್ರಹಣದ ಛಾಯೆ ಕೆಂಪು ಮಿಶ್ರಿತ ಬಣ್ಣದ್ದಾಗಿರಲಿದೆ. ಹೀಗಾಗಿ ರಾತ್ರಿ 11 ಗಂಟೆಯಿoದ 1.22ರವರೆಗೆ ಗೃಹಣ ಕೆಂಪು ಬಣ್ಣದಿಂದ ಕಾಡುತ್ತದೆ’ ಎಂದವರು ವೈಜ್ಞಾನಿಕ ಮಾಹಿತಿ ಹಂಚಿಕೊoಡಿದ್ದಾರೆ.
Discussion about this post