`ವಿದ್ಯುನ್ಮಾನ ಮತ ಯಂತ್ರದ ಮೂಲಕ ಮತ ಚಲಾವಣೆ ಪದ್ಧತಿ ತಂದ ಕಾಂಗ್ರೆಸ್ಸಿಗರೇ ಇದೀಗ ಆ ಯಂತ್ರ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ಯಂತ್ರದ ಲೋಪಗಳ ಬಗ್ಗೆ ತಜ್ಞರು ಮಾತನಾಡಬೇಕೇ ವಿನ: ಕಾಂಗ್ರೆಸ್ಸಿಗರಲ್ಲ’ ಎಂದು ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಹೇಳಿದ್ದಾರೆ.
1970ರಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಇವಿಎಂ ಪರಿಚಯಿಸಲಾಯಿತು.ಆಗಿನ ಪ್ರಧಾನಿ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಅವರು ಇದನ್ನು ಪರಿಚಯಿಸಿದ್ದು, 1982ರಲ್ಲಿ ಕೇರಳ ರಾಜ್ಯದ ಪೆರುಮಾರ ಕ್ಷೇತ್ರದ ಉಪಚುನಾವಣೆಯ ಅವಧಿಯಲ್ಲಿ ಮೊದಲ ಬಾರಿ ಇವಿಎಂ ಯಂತ್ರದ ಪ್ರಾಯೋಗಿಕ ಬಳಕೆ ಮಾಡಲಾಯಿತು 1988 ರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಈ ಮತಯಂತ್ರದ ಬಳಕೆಗೆ ಲೋಕಸಭೆಯಲ್ಲಿ ಅಧಿಕೃತವಾಗಿ ಕಾನೂನು ಮಾನ್ಯತೆ ನೀಡಲಾಯಿತು’ ಎಂದವರು ವಿವರಿಸಿದರು.
`ಆಗ ರಾಜೀವ ಗಾಂಧಿ ಅವರು ಪ್ರಧಾನಿ ಆಗಿದ್ದರು. 1992ರಲ್ಲಿ ಭಾರತದ ಚುನಾವಣಾ ಅಧಿನಿಯಮಕ್ಕೆ ಬದಲಾವಣೆ ತಂದು ಅಧಿಕೃತವಾಗಿ ದೇಶದಲ್ಲಿ ಇವಿಎಂ ಮತ ಪದ್ದತಿಯನ್ನು ಜಾರಿಗೆ ತರಲಾಯಿತು. ಆಗಲೂ ಕಾಂಗ್ರೆಸ್ಸಿನ ಪಿ ವಿ ನರಸಿಂಹರಾವ್ ಪ್ರಧಾನಿ ಆಗಿದ್ದರು’ ಎಂಬ ವಿಷಯವನ್ನು ಸ್ಮರಿಸಿದರು. `ಲೋಕಸಭೆಯಲ್ಲಿ ಅಂಗೀಕೃತಗೊAಡ ನಂತರ 1998 ರಲ್ಲಿ ಮೊದಲ ಬಾರಿ ಈ ಮತಯಂತ್ರಗಳನ್ನು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಯಿತು. ಆಗಲೂ ಕಾಂಗ್ರೆಸ್ಸಿನ ಐ ಕೆ ಗುಜ್ರಾಲ ಅವರು ಪ್ರಧಾನಿ ಆಗಿದ್ದರು’ ಎಂದು ನೆನಪಿಸಿದರು.
`2004ರಿಂದ 2014ವರೆಗೆ 10 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ದೇಶದ ಸ್ಥಳೀಯ ಸಂಸ್ಥೆಗಳಿAದ ಹಿಡಿದು ವಿಧಾನಸಭೆ, ಲೋಕಸಭೆವರೆಗೆ ಎಲ್ಲ ಚುನಾವಣೆಗಳಲ್ಲೂ ಇವಿಯಂ ಮತಯಂತ್ರಗಳನ್ನು ಯಥೇಚ್ಛವಾಗಿ ಬಳಕೆ ಮಾಡಲಾಗಿದೆ. ಆ ವೇಳೆ ಅತಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಕೇವಲ ಎರಡು ವರ್ಷಗಳ ಹಿಂದೆ, ಮೋದಿ ಆಡಳಿತದಲ್ಲಿ ನಡೆದ ಕರ್ನಾಟಕ ಹಾಗೂ ತೇಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದವರೂ ಇದೇ ಕಾಂಗ್ರೆಸ್ಸಿಗರು, ಅಲ್ಲಿ ರೇವಂತ ರೆಡ್ಡಿ, ಇಲ್ಲಿ ಸಿದ್ದರಾಮಯ್ಯ. ಅಷ್ಟೇ ಅಲ್ಲ, ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಹಿಂದಿನ ಬಾರಿಗಿಂತ 8 ಸ್ಥಾನ ಹೆಚ್ಚು ಗೆದ್ದುಕೊಂಡಿತು. `2004ರಲ್ಲಿ ತಮಿಳುನಾಡು, ಕೇರಳ, ಪುದುಚೇರಿ, ಪ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಈ ಯಂತ್ರ ಬಳಕೆ ನಡೆದಿದೆ. ಕಾಂಗ್ರೆಸ್ ಆರೋಪಿಸಿದಂತೆ ಬಿಜೆಪಿಗರು ಈ ಯಂತ್ರದಲ್ಲಿ ಕೈ ಆಡಿಸುತ್ತಿಲ್ಲ’ ಎಂದವರು ಸ್ಪಷ್ಟಪಡಿಸಿದರು.
