ಮೇಷ ರಾಶಿ: ಉದ್ಯೋಗ, ವ್ಯಾಪಾರ ಹಾಗೂ ಯೋಜನೆಗಳ ವಿಷಯದಲ್ಲಿ ನಿಮ್ಮ ಪ್ರಯತ್ನ ನಿರಂತರವಾಗಿರಲಿ. ಧನ ಆಗಮನದ ಸಾಧ್ಯತೆಗಳಿವೆ. ಕಲಹಗಳಿಂದ ದೂರವಿರಿ.
ವೃಷಭ ರಾಶಿ: ವ್ಯವಹಾರಗಳಲ್ಲಿ ಲಾಭ ಆಗಲಿದೆ. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರಲ್ಲಿ ಚರ್ಚಿಸಿ. ಸಾಮಾಜಿಕ ಮನ್ನಣೆ ಸಿಗಲಿದೆ.
ಮಿಥುನ ರಾಶಿ: ಕೆಲಸ ಕಾರ್ಯಗಳು ಸರಾಗವಾಗಿ ಸಾಗಲಿದೆ. ವಿರೋಧಿಗಳು ತೊಂದರೆ ನೀಡಿದರೂ ಅದನ್ನು ಸಮರ್ಥವಾಗಿ ಎದುರಿಸಿ. ವಿದ್ಯಾರ್ಥಿಗಳ ಸಾಧನೆಗೆ ಸೂಕ್ತ ಸಮಯ.
ಕರ್ಕ ರಾಶಿ: ಸಣ್ಣ ಸಣ್ಣ ಕಷ್ಟಗಳು ನಿಮ್ಮನ್ನು ಆವರಿಸಲಿದೆ. ಆರ್ಥಿಕ ನಷ್ಟಕ್ಕೆ ಸ್ನೇಹಿತರ ಸಹಾಯ ಸಿಗಲಿದೆ. ಏಕಾಗೃತೆ ಹಾಗೂ ನಿರಂತರ ಪ್ರಯತ್ನದಿಂದ ನಿಮಗೆ ಲಾಭವಿದೆ.
ಸಿಂಹ ರಾಶಿ: ಊಟದ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆ ಅಗತ್ಯ. ಕೆಲಸ ಕಾರ್ಯಗಳಲ್ಲಿ ಈ ದಿನ ಅಡೆತಡೆ ಸಾಮಾನ್ಯ. ಆರೋಗ್ಯದ ಬಗ್ಗೆಯೂ ಕಾಳಜಿ ಬೇಕು.
ಕನ್ಯಾ ರಾಶಿ: ಉದ್ಯೋಗ, ಮುಂಬಡ್ತಿ ವಿಷಯದಲ್ಲಿ ಸಮಸ್ಯೆ ಆಗಲಿದೆ. ವಿವಾಹ ಮಾತುಕತೆ ವಿಷಯದಲ್ಲಿ ಆತುರ ಬೇಡ. ಸೃಜನಾತ್ಮಕ ವಿಷಯಗಳ ಬಗ್ಗೆ ಹೆಚ್ಚಿನ ಗಮನಕೊಡಿ.
ತುಲಾ ರಾಶಿ: ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಕೋಪ ನಿಮಗೆ ಒಳ್ಳೆಯದಲ್ಲ. ಮಾತನಾಡುವಾಗ ಸಹನೆಯಿರಲಿ.
ವೃಶ್ಚಿಕ: ಕುಟುಂಬ ಸದಸ್ಯರಿಂದ ಸಣ್ಣಪುಟ್ಟ ಸಮಸ್ಯೆ ಆಗುವ ಸಾಧ್ಯತೆಗಳಿದೆ. ಪ್ರಭಾವಿಗಳ ಪರಿಚಯ-ಸ್ನೇಹ ನಿಮಗೆ ಸಹಾಯ ಮಾಡಲಿದೆ. ಮನೆಯಲ್ಲಿ ಭಿನ್ನಮತ ಆಗದಂತೆ ವರ್ತಿಸುವುದು ಉತ್ತಮ.
ಧನು ರಾಶಿ: ಹೆಣ್ಣು ಮಕ್ಕಳಿಗೆ ಈ ದಿನ ಶುಭ ತರಲಿದೆ. ಹಣಕಾಸಿನ ಯೋಗ ಬರಲಿದೆ. ಕುಟುಂಬದಲ್ಲಿ ಶಾಂತಿ ನೆಲಸಲಿದೆ.
ಮಕರ ರಾಶಿ: ವಾಹನ ಯೋಗ ಪ್ರಾಪ್ತಿ ಆಗಲಿದೆ. ವಿವಾದಗಳಿಂದ ದೂರ ಇದ್ದಷ್ಟು ನಿಮಗೆ ಒಳಿತು.
ಕುಂಭ ರಾಶಿ: ನಿಮ್ಮ ವೃತ್ತಿ ಜೀವನ ಬೇರೆಯವರಿಗೆ ಪ್ರೇರಣೆ ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸ್ನೇಹಿತರ ಸಹಾಯ ಸಿಗಲಿದೆ.
ಮೀನ ರಾಶಿ: ಹೊಸ ಆದಾಯಕ್ಕೆ ದಾರಿ ಕಾಣಲಿದೆ. ಪ್ರೀತಿ ವಿಷಯದಲ್ಲಿ ಬೆಂಬಲ ಸಿಗಲಿದೆ. ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡುವುದು ಮುಖ್ಯ.
Discussion about this post