ಮದ್ಯ ಸೇವನೆಯ ಪರಿಣಾಮ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಶಿರಸಿಯ ಸುಬ್ರಾಯ ಪೂಜಾರಿ ಅವರು ಸೊಪ್ಪಿನ ಬೆಟ್ಟಕ್ಕೆ ತೆರಳಿ ಕ್ರಿಮಿನಾಶಕ ಸೇವಿಸಿದ್ದಾರೆ. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಶಿರಸಿ ಬರೂರು ಬಳಿಯ ಗಣೇಶ ನಗರ ನೇಗಾರಿನ ಬಳಿ ಸುಬ್ರಾಯ ಪೂಜಾರಿ (54) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಸರಾಯಿ ಸೇವನೆಯ ಚಟ ಹೊಂದಿದ್ದರು. ಈಚೆಗೆ ಅವರ ಸರಾಯಿ ಸೇವನೆ ಚಟ ಮಿತಿಮೀರಿತ್ತು.
ಮದ್ಯ ವ್ಯಸನದಿಂದಲೇ ಮಾನಸಿಕವಾಗಿ ಕುಗ್ಗಿದ್ದ ಸುಬ್ರಾಯ ಪೂಜಾರಿ ಅವರು ಆಗಾಗ ಸಾಯುವ ಬಗ್ಗೆ ಮಾತನಾಡುತ್ತಿದ್ದರು. ಸೆಪ್ಟೆಂಬರ್ 6ರಂದು ಶಿರಸಿಗೆ ಬಂದು ಕ್ರಿಮಿನಾಶಕ ಬಾಟಲಿ ಖರೀದಿ ಮಾಡಿದ್ದರು. ಸೆಪ್ಟೆಂಬರ್ 7ರಂದು ಮನೆ ಬಳಿಯ ಸೊಪ್ಪಿನ ಬೆಟ್ಟದಲ್ಲಿ ಸುಬ್ರಾಯ ಪೂಜಾರಿ ಅವರು ಶವವಾಗಿದ್ದರು.
ಟಿಎಸ್ಎಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಸುಬ್ರಾಯ ಪೂಜಾರಿ ಅವರ ಪುತ್ರ ರವೀಶ ಪೂಜಾರಿ ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು.
