ಶಿರಸಿ ನಿರ್ನಳ್ಳಿಯ ಮಹೇಶ ಹೆಗಡೆ ಹಾಗೂ ಗಣೇಶ ನಗರದ ಸಂತೋಷ ಬೋವಿವಡ್ಡರ್ ಬಳಿಯಿದ್ದ ಬಾಲ್ ಪೆನ್ನುಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಆ ಬಾಲ್ ಪೆನ್ ಜೊತೆ ಅವರಿಬ್ಬರು ಮಟ್ಕಾ ಬರೆಯುತ್ತಿದ್ದ ಚೀಟಿ, ಹಣವನ್ನು ಜಪ್ತು ಮಾಡಿದ್ದಾರೆ.
ಶಿರಸಿ ಪೊಲೀಸರಿಂದ ಮಟ್ಕಾ ವಿರುದ್ಧ ಹೋರಾಟ ಮುಂದುವರೆದಿದೆ. ಅದರ ಭಾಗವಾಗಿ ಸೆಪ್ಟೆಂಬರ್ 9ರಂದು ಝೂ ಸರ್ಕಲ್ ಬಳಿ ಮಟ್ಕಾ ಆಟ ಆಡಿಸುತ್ತಿದ್ದ ಮಹೇಶ ಹೆಗಡೆ ವಿರುದ್ಧ ಕಾನೂನು ಕ್ರಮವಾಗಿದೆ. ನಿರ್ನಳ್ಳಿ ಇಟಗುಳಿಯ ಮಹೇಶ ಹೆಗಡೆ ಅವರು 1ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ಜನರಿಂದ 850ರೂ ವಸೂಲಿ ಮಾಡಿದ್ದರು. ಪಿಎಸ್‌ಐ ನಾಗಪ್ಪ ಬಿ ಅದನ್ನು ಪತ್ತೆ ಮಾಡಿ ಆ ಹಣವನ್ನು ವಶಕ್ಕೆಪಡೆದರು. ಜೊತೆಗೆ ಬಾಲ್ ಪೆನ್ನು, ಮಟ್ಕಾ ಚೀಟಿ ಹಾಗೂ ಇನ್ನಿತರ ಪರಿಕ್ಕರಗಳನ್ನು ಜಪ್ತು ಮಾಡಿದರು.
ಇಂದಿರಾ ನಗರ ಸ್ಮಶಾನ ರಸ್ತೆಯಲ್ಲಿ ಗಣೇಶನಗರದ ಸಂತೋಷ ಬೋವಿವಡ್ಡರ್ ಸಹ ಮಟ್ಕಾ ಆಡಿಸುವಲ್ಲಿ ನಿರತರಾಗಿದ್ದರು. ಅವರು ಸಹ 1ರೂಪಾಯಿಗೆ 80ರೂ ಕೊಡುವುದಾಗಿ ತಿಳಿಸಿ ಜನರಿಂದ ಹಣ ಒಟ್ಟು ಮಾಡುತ್ತಿದ್ದರು. ಇದನ್ನು ಅರಿತ ಪಿಎಸ್‌ಐ ರತ್ನಾ ಕುರಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿದರು. ಸಂತೋಷ ಬೋವಿವಡ್ಡರ್ ಅವರು ಜನರಿಂದ ಸಂಗ್ರಹಿಸಿದ್ದ 720ರೂ ಹಣವನ್ನು ವಶಕ್ಕೆಪಡೆದರು. ಮಟ್ಕಾ ಚೀಟಿ, ಬಾಲ್ ಪೆನ್ ಜೊತೆ ಇನ್ನಿತರ ಸಾಮಗ್ರಿಗಳನ್ನು ಸಾಕ್ಷಿಗಾಗಿ ಜಪ್ತು ಮಾಡಿದರು. ಈ ಎರಡು ಆರೋಪಿತರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
Discussion about this post