ಕಾರವಾರದ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಟೈಪಿಂಗ್ ಮತ್ತು ಶಾರ್ಟಹೆಂಡ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
2025ರ ಜುಲೈ ತಿಂಗಳಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಾಣಿಜ್ಯ (ಟೈಪಿಂಗ್ ಮತ್ತು ಶಾರ್ಟಹೆಂಡ್) ಪರೀಕ್ಷೆ ನಡೆಸಿತ್ತು. ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಆ ಪರೀಕ್ಷೆ ಎದುರಿಸಿದ್ದರು.
ಅದರಲ್ಲಿ ಅಭಿಶೇಕ ದಯಾನಂದ ನಾಯ್ಕ, ಅಂಕಿತಾ ಬಾಬು ಗೌಡಾ, ಜಾಸ್ಮಿನಿ ದತ್ತಾ ಗೌಡಾ, ಸಾನಿದ್ಯಾ ಗಣೇಶ ಪಡಿಯಾರ, ನಾವಿನ್ಯಾ ನವೀನ ಶೇಟ, ಅನ್ವೇಶ ಉದಯ ನಾಯ್ಕ, ನಾಗರತ್ನಾ ಮಾರುತಿ ನಾಯ್ಕ, ಜತಿನ ಜಯರಾಮ ನಾಯ್ಕ ಅವರು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಇದರೊಂದಿಗೆ ಈ ಸಂಸ್ಥೆಯ 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಜೊತೆಗೆ 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಚಾರ್ಯ ಪ್ರಸನ್ನ ತೆಂಡೂಲ್ಕರ ಅವರು ಅಭಿನಂದಿಸಿದರು.
Discussion about this post