ಮೇಷ ರಾಶಿ: ಹೊಸ ಹೊಸ ಅವಕಾಶಗಳು ಬರಲಿದೆ. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆಯಾಗಲಿದೆ. ಆರೋಗ್ಯ ಸುಧಾರಣೆ ಸಾಧ್ಯವಿದೆ.
ವೃಷಭ ರಾಶಿ: ಕೆಲಸದ ವಿಷಯದಲ್ಲಿ ಯಶಸ್ಸು ಸಿಗಲಿದೆ. ಶತ್ರುಗಳ ಬಗ್ಗೆ ಎಚ್ಚರಿಕೆವಹಿಸಿ. ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳಾಗಲಿವೆ. ಒತ್ತಡಗಳನ್ನು ಸಹಿಸುವ ಶಕ್ತಿ ಬೆಳಸಿಕೊಳ್ಳಿ.
ಮಿಥುನ ರಾಶಿ: ಪ್ರವಾಸದ ವಿಷಯವಾಗಿ ನೀವು ಹಾಕಿದ ಯೋಜನೆಗಳು ಮುಂದೂಡಲ್ಪಟುವ ಸಾಧ್ಯತೆಯಿದೆ. ಉದ್ಯೋಗದ ವಿಷಯದಲ್ಲಿ ಹೆಚ್ಚುವರಿ ಹೊಣೆ ಬರಲಿದೆ. ಮಾತನಾಡುವಾಗ ತಾಳ್ಮೆವಹಿಸಿ.
ಕರ್ಕ ರಾಶಿ: ಹಣಕಾಸು ವಿಷಯದಲ್ಲಿ ಪ್ರಗತಿ ಆಗಲಿದೆ. ಖರ್ಚುಗಳು ಹೆಚ್ಚಾಗಲಿದೆ. ಕುಟುಂಬದಲ್ಲಿ ಕಲಹ ಆಗದಂತೆ ಎಚ್ಚರವಹಿಸುವುದು ಅಗತ್ಯ.
ಸಿಂಹ ರಾಶಿ: ಪ್ರೀತಿ-ಪ್ರೇಮದ ವಿಷಯಗಳು ಸರಳವಾಗಿರುವುದಿಲ್ಲ. ಹಣಕಾಸು ವಿಷಯದಲ್ಲಿ ಹಿನ್ನಡೆ ಆಗಲಿದೆ. ಕುಟುಂಬದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರವಾಸ ಮಾಡುವುದರಿಂದ ನೆಮ್ಮದಿ ಸಿಗಲಿದೆ.
ಕನ್ಯಾ ರಾಶಿ: ಸೋಮಾರಿತನ ನಿಮಗೆ ಒಳ್ಳೆಯದಲ್ಲ. ಕೆಲಸದ ವಿಷಯದಲ್ಲಿ ಸ್ಪಷ್ಠ ನಿರ್ಧಾರ ಅಗತ್ಯ. ಸ್ನೇಹಿತರಿಂದ ಸಹಾಯ ಸಿಗಲಿದೆ.
ತುಲಾ ರಾಶಿ: ಖರೀದಿ ಯೋಜನೆಗಳು ಉತ್ತಮವಾಗಿರಲಿದೆ. ಉದ್ಯೋಗದಲ್ಲಿಯೂ ಪ್ರಗತಿ ಸಾಧ್ಯವಿದೆ. ಆತ್ಮ ವಿಶ್ವಾಸದಿಂದ ಕೆಲಸ ಮಾಡುವುದು ಮುಖ್ಯ.
ವೃಶ್ಚಿಕ ರಾಶಿ: ಹೊಸ ಹೂಡಿಕೆಗಳು ನಿಮಗೆ ಲಾಭ ಕೊಡಲಿದೆ. ಮನೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಬಹುದು. ಸೃಜನಶೀಲ ವಿಚಾರಗಳ ಬಗ್ಗೆ ಗಮನಹರಿಸಿ.
ಧನು ರಾಶಿ: ವೃತ್ತಿಯಲ್ಲಿ ಪ್ರಗತಿ ಆಗಲಿದೆ. ಉತ್ಸಾಹದಿಂದ ಕೆಲಸ ಮಾಡುವಿರಿ. ಆರೋಗ್ಯ ಚನ್ನಾಗಿರುತ್ತದೆ. ಬಂಧು-ಮಿತ್ರರ ಜೊತೆ ಕಾಲ ಕಳೆಯುವಿರಿ.
ಮಕರ ರಾಶಿ: ಉದ್ಯೋಗದಲ್ಲಿ ಉತ್ತಮ ಬದಲಾವಣೆ ಆಗಲಿದೆ. ಕುಟುಂಬದವರ ಆಸಕ್ತಿಗೆ ಅನುಗುಣವಾಗಿ ಸ್ಪಂದಿಸುವುದು ಅಗತ್ಯ. ಸ್ಪಷ್ಟ ನಿರ್ಧಾರಗಳಿಗೆ ಸೂಕ್ತ ಸಮಯ.
ಕುಂಭ ರಾಶಿ: ನಿಮ್ಮ ಕೆಲಸಗಳನ್ನು ಬೇರೆಯವರು ಗಮನಿಸುವರು. ಕುಟುಂಬದ ಸಮಸ್ಯೆಗಳಿಗೆ ನಿಮ್ಮೊಳಗೆ ಪರಿಹಾರವಿದ್ದು, ಅದನ್ನು ಹುಡುಕಿ. ಹಣಕಾಸಿನ ವಿಷಯದಲ್ಲಿ ಆತುರ ಬೇಡ.
ಮೀನ ರಾಶಿ: ಉದ್ಯೋಗದಲ್ಲಿ ಇನ್ನಷ್ಟು ಅವಕಾಶಗಳು ಅರೆಸಿ ಬರಲಿದೆ. ಆರೋಗ್ಯದಲ್ಲಿ ಕೊಂಚ ಸಮಸ್ಯೆ ಆಗಬಹುದು. ಆತ್ಮಶಕ್ತಿಯಿಂದ ಬದುಕುವುದು ಮುಖ್ಯ.
Discussion about this post