ಶಿರಸಿಯ ಹುಲೆಕಲ್ ಬಳಿಯ ಹೆಂಚರ್ಟಾ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಬಾಗಿಲು ಮುರಿದ ಕಳ್ಳರು ಆಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ.
ಶಿರಸಿ ದೇವಿಕೆರೆ ರಸ್ತೆಯ ಭೂತಪ್ಪನಕಟ್ಟೆ ವಾಸವಾಗಿರುವ ವ್ಯಾಪಾರಿ ಪರಶುರಾಮ ಶೆಟ್ಟಿ ಅವರು ಈ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವರ ಕುಟುಂಬಕ್ಕೆ ಸೇರಿದ ದೇಗುಲ ಇದಾಗಿದ್ದು, ಆ ಕುಟುಂಬದವರೆಲ್ಲರೂ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಪರಶುರಾಮ ಶೆಟ್ಟಿ ಮನೆತನದವರು ದೇವರ ಮೈಮೇಲೆ ವಿವಿಧ ಬಗೆಯ ಆಭರಣ ಹಾಕಿಸಿದ್ದರು. ದುಷ್ಟರು ಅದರ ಮೇಲೆಯೂ ಕಣ್ಣು ಹಾಕಿದರು.
ಸೆಪ್ಟೆಂಬರ್ 10ರ ರಾತ್ರಿ 1ಗಂಟೆ ವೇಳೆಗೆ ಕಳ್ಳರು ದೇವಾಲಯದ ಸ್ಟೀಲ್ ಬಾಗಿಲು ಮುರಿದರು. ಒಳಗೆ ಪ್ರವೇಶಿಸಿ ಕಾಣಿಕೆ ಹುಂಡಿಯಲ್ಲಿದ್ದ 80 ಸಾವಿರ ರೂ ಎಗರಿಸಿದರು. ಅದಾದ ನಂತರ 2.31 ಲಕ್ಷ ರೂ ಮೌಲ್ಯದ ದೇವರ ಆಭರಣವನ್ನು ಕದ್ದು ಪರಾರಿಯಾದರು. ಕಳ್ಳರ ಬಗ್ಗೆ ಹುಡುಕಾಟ ನಡೆಸಿದ ಶೆಟ್ಟರು ಕಳ್ಳರ ಸುಳಿವು ಸಿಗದಿದ್ದಾಗ ಅವರ ಅಣ್ಣನ ಬಳಿ ಚರ್ಚೆ ನಡೆಸಿದರು. ಅಣ್ಣನ ಸಲಹೆ ಮೇರೆಗೆ ಕಳ್ಳತನದ ವಿಷಯವನ್ನು ಪೊಲೀಸರಿಗೆ ಹೇಳಿದರು.
ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ದೇವರ ದುಡ್ಡು ಕದ್ದವರ ಹುಡುಕಾಟ ನಡೆಸಿದ್ದಾರೆ.
Discussion about this post