ದಾoಡೇಲಿ ಅಂಬಿಕಾನಗರದಲ್ಲಿರುವ ಕೆಪಿಸಿ ಅಧಿಕಾರಿ ಮಂಜು ನಾಯ್ಕ ಅವರಿಗೆ ಅವರ ಪತ್ನಿಯೇ ಕಂಟಕವಾಗಿ ಪರಿಣಮಿಸಿದ್ದಾರೆ. ಪರ ಪುರುಷನ ಜೊತೆಗಿನ ಸಂಬoಧ ಪ್ರಶ್ನಿಸಿದ ಕಾರಣ ಅವರ ಪತ್ನಿಯೇ ಹುಡುಗರನ್ನು ಬಿಟ್ಟು ಮಂಜು ನಾಯ್ಕ ಅವರಿಗೆ ಹೊಡೆಸಿದ್ದಾರೆ!
ವಿಜಯ ನಗರದ ಮಂಜು ನಾಯ್ಕ ಅವರು ಉದ್ಯೋಗದ ವಿಷಯವಾಗಿ ದಾಂಡೇಲಿಯ ಅಂಬಿಕಾ ನಗರದಲ್ಲಿ ವಾಸವಾಗಿದ್ದಾರೆ. ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸ ಮಾಡುವ ಅವರು ಕೆಪಿಸಿ ಕಾಲೋನಿಯಲ್ಲಿ ಉಳಿದು ಉದ್ಯೋಗ ಮಾಡುತ್ತಿದ್ದಾರೆ. ಮಂಜು ನಾಯ್ಕ ಅವರ ತಾಯಿ ಸಣ್ಣಬಾಯಿ ನಾಯ್ಕ ಹಾಗೂ ಮಂಜು ನಾಯ್ಕ ಅವರ ಪತ್ನಿ ಅಂಜಲಿ ಸಹ ಅಲ್ಲಿಯೇ ವಾಸವಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಚಂದ್ರಶೇಖರ ನಾಯ್ಕ ಎಂಬಾತರ ಮೂಲಕ ಮಂಜು ನಾಯ್ಕ ಅವರಿಗೆ ಅಂಜಲಿ ಅವರ ಪರಿಚಯವಾಗಿತ್ತು. ಮದುವೆ ನಿಶ್ಚಯವಾದ ಹೊಸತರಲ್ಲಿಯೇ ಅಂಜಲಿ ಅವರು ಕುಶಲ್ ಎಂಬಾತರ ಜೊತೆ ಆಪ್ತವಾಗಿರುವುದು ಮಂಜು ನಾಯ್ಕ ಅವರ ಅರಿವಿಗೆ ಬಂದಿತ್ತು. ಈ ಬಗ್ಗೆ ಮಂಜು ನಾಯ್ಕ ಅವರು ಚಂದ್ರಶೇಖರ ನಾಯ್ಕ ಅವರಿಗೆ ಫೋನ್ ಮಾಡಿ ಹೇಳಿದ್ದರು. ಆದರೆ, ಚಂದ್ರಶೇಖರ ನಾಯ್ಕ ಅವರು ಅದಕ್ಕೆ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. `ನನಗೆ ಎಲ್ಲಾ ಗೊತ್ತಿದೆ. ಆಕೆಯನ್ನು ಸುಮ್ಮನೆ ಮದುವೆ ಆಗು’ ಎಂದು ಚಂದ್ರಶೇಖರ ನಾಯ್ಕ ಅವರು ದಬಾಯಿಸಿ, ಸಲಹೆ ನೀಡಿದ್ದರು.
`ಮದುವೆ ಆದ ನಂತರ ಆಕೆ ಸರಿ ಹೋಗುತ್ತಾಳೆ’ ಎಂದು ಗುರು-ಹಿರಿಯರು ಸಲಹೆ ನೀಡಿದ ಕಾರಣ ಮಂಜು ನಾಯ್ಕ ಅವರು ಮದುವೆಗೆ ಒಪ್ಪಿದ್ದರು. ಅದರ ಪ್ರಕಾರ ಮಂಜು ನಾಯ್ಕ ಹಾಗೂ ಅಂಜಲಿ ಅವರ ನಡುವೆ ನಡೆಯಿತು. ಆದರೆ, ಮದುವೆ ಆದ ನಂತರವೂ ಅಂಜಲಿ ಅವರು ಕುಶಲ್ ಅವರ ಜೊತೆ ಫೋನ್ ಸಂಪರ್ಕದಲ್ಲಿದ್ದರು. ಈ ಬಗ್ಗೆ ಮಂಜು ನಾಯ್ಕ ಅವರು ಅಂಜಲಿ ಅವರನ್ನು ಪ್ರಶ್ನಿಸಿದಾಗ ಜಗಳ ಮಾಡಿದ್ದರು.
2024ರಲ್ಲಿ ಈ ನಡುವೆ ಮಂಜು ನಾಯ್ಕ ಅವರು ರಜೆ ಅವಧಿಯಲ್ಲಿ ಊರಿಗೆ ಹೋದಾಗ ಕಿಶೋರ್ ಅವರು ಕೆಪಿಸಿ ಕಾಲೋನಿಗೆ ಬಂದಿದ್ದರು. ಅಂಜಲಿ ಅವರನ್ನು ಭೇಟಿ ಮಾಡಿದ್ದರು. ಆ ವೇಳೆ ಕಿಶೋರ್ ಅವರ ಜೊತೆ ಚಂದ್ರಶೇಖರ ನಾಯ್ಕ, ಕೃಷ್ಣ, ಲಕ್ಷಿಬಾಯಿ ಸಹ ಮಂಜು ನಾಯ್ಕ ಅವರು ಕೆಲಸ ಮಾಡುವ ಕೆಪಿಸಿ ಕಚೇರಿಗೆ ಹೋಗಿದ್ದರು. ಅಂಜಲಿ ಅವರನ್ನು ಅಲ್ಲಿಗೆ ಕರೆದೊಯ್ದು ಮಂಜು ನಾಯ್ಕ ಅವರ ಮೇಲಧಿಕಾರಿಗಳ ಬಳಿ ಮಾತನಾಡಿದ್ದರು. `ಮಂಜು ನಾಯ್ಕ ಅವರು ಊರಿಗೆ ಹೋಗಿದ್ದಾರೆ’ ಎಂದು ಮೇಲಧಿಕಾರಿಗಳು ಹೇಳಿದ್ದು, ಆಗ ಅಂಜಲಿ ಜೊತೆ ಬಂದವರೆಲ್ಲರೂ ಕಚೇರಿಯೊಳಗೆ ಗಲಾಟೆ ಮಾಡಿದ್ದರು. ಮೇಲಧಿಕಾರಿಗಳು ಈ ವಿಷಯವನ್ನು ಮಂಜು ನಾಯ್ಕ ಅವರಿಗೆ ಫೋನ್ ಮಾಡಿ ತಿಳಿಸಿದ್ದರು.
2024ರ ಡಿಸೆಂಬರ್ 21ರಂದು ಅರುಣ ಎಂಬಾತರು ದಾಂಡೇಲಿಗೆ ಬಂದಿದ್ದು, ಅವರು ಕೆಪಿಸಿ ಕಾಲೋನಿಗೆ ನುಗ್ಗಿದ್ದರು. ಮಂಜು ನಾಯ್ಕ ಅವರು ಮನೆಯಲ್ಲಿದ್ದಾಗ ಏಕಾಏಕಿ ಅರುಣ ಅವರು ದಾಳಿ ನಡೆಸಿದ್ದರು. ಕಾಡು ಜಾತಿಯ ಕಟ್ಟಿಗೆಯಿಂದ ಮಂಜು ನಾಯ್ಕ ಅವರನ್ನು ಥಳಿಸಿದ್ದರು. ಬಿಡಿಸಲು ಹೋದ ಸಣ್ಣಬಾಯಿ ನಾಯ್ಕ ಅವರ ಬಟ್ಟೆ ಹರಿದು ಅವಮಾನ ಮಾಡಿದ್ದರು. ಅದಾದ ನಂತರವೂ ಚಂದ್ರಶೇಖರ ನಾಯ್ಕ, ಅಂಜಲಿ ಹಾಗೂ ಅವರ ಸಹಚರರೆಲ್ಲರೂ ಪದೇ ಪದೇ ಮಂಜು ನಾಯ್ಕ ಹಾಗೂ ಅವರ ತಾಯಿಗೆ ತೊಂದರೆ ಕೊಡುತ್ತಿದ್ದರು.
ಈ ಎಲ್ಲಾ ವಿದ್ಯಮಾನಗಳ ಹಿನ್ನಲೆ ಸಣ್ಣಬಾಯಿ ನಾಯ್ಕ ಅವರು ಅಂಬಿಕಾ ನಗರ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಸಮಸ್ಯೆ ವಿವರಿಸಿದರು. ತಮಗೆ ಬೆದರಿಕೆಯಿರುವ ಬಗ್ಗೆಯೂ ತಿಳಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದರು.
Discussion about this post