ಕಾರಿನಲ್ಲಿ ಬರುವ ಅಪರಿಚಿತರು ಮುಖಕ್ಕೆ ಮಾಸ್ಕ್ ಧರಿಸಿ ಹಸು ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಪ್ರಕರಣದ ಬೆನ್ನು ಬಿದ್ದ ಹೊನ್ನಾವರ ಪೊಲೀಸರು ಗೋ ಕಳ್ಳರ ಮುಖವಾಡ ಕಳಚಿದ್ದಾರೆ.
ಸೆಪ್ಟೆಂಬರ್ 4ರ ರಾತ್ರಿ ಹೊನ್ನಾವರದಲ್ಲಿ ಗೋ ಕಳ್ಳತನ ನಡೆದಿತ್ತು. ಕಾರಿನಲ್ಲಿ ಬಂದ ಕಳ್ಳರು ಮುಖಕ್ಕೆ ಮಾಸ್ಕ ಧರಸಿದ್ದು, ರಸ್ತೆ ಅಂಚಿನಲ್ಲಿ ಮಲಗಿದ್ದ ಹಸುಗಳನ್ನು ಅಪಹರಿಸಿದ್ದರು. ಸಿಸಿ ಕ್ಯಾಮರಾ ದೃಶ್ಯವಳಿಗಳನ್ನು ಪೊಲೀಸ್ ಸಿಬ್ಬಂದಿ ರವಿ ನಾಯ್ಕ ಅವರು ಗಮನಿಸಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಾಕ್ಷಿ ಸಂಗ್ರಹ ನಡೆಸಿದರು.
ಭಟ್ಕಳ ತಾಲೂಕಿನ ಮುಗ್ದಂ ಕಾಲೂನಿಯ ಮೊಹಮ್ಮದ್ ಜಾಪರ್ ಸಾಧಿಕ್ ಜಕ್ವಾನ್ (24) ಹಾಗೂ ಕುಂದಾಪುರ ಮೂಲದ ಜುಮ್ಮಾ ಮಸೀದಿಯ ಸಬೀಲ್ ಬೆಟ್ಟಿ ಹುಸೇನ್ ಸಾಹೇಬ (31) ಎಂಬಾತರು ಅನುಮಾನಾಸ್ಪದ ರೀತಿಯಲ್ಲಿ ಎದುರಾದರು. ಪೊಲೀಸರು ಅವರ ವಿಚಾರಣೆ ನಡೆಸಿದಾಗ ಗೋ ಕಳ್ಳತನವನ್ನು ಒಪ್ಪಿಕೊಂಡರು. ಅವರ ಜೊತೆ ಇನ್ನಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅವರ ಹೆಸರನ್ನು ಸಿಕ್ಕಿಬಿದ್ದವರು ಬಾಯ್ಬಿಟ್ಟರು. ಸದ್ಯ ತಲೆಮರೆಸಿಕೊಂಡ ಭಟ್ಕಳ ಮೂಲದ ಜಿಸ್ಸಾನ ಮತ್ತು ಮರ್ದಾನ್ ಅವರ ಹುಡುಕಾಟ ನಡೆಯುತ್ತಿದೆ.
ಸಿಕ್ಕಿ ಬಿದ್ದ ಇಬ್ಬರಿಂದ ಪೊಲೀಸರು 4 ಲಕ್ಷ ರೂ ಮೌಲ್ಯದ ಕಾರು ವಶಕ್ಕೆಪಡೆದಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ತಮ್ಮ ಚಾಣಾಕ್ಷತನದಿಂದ ಈ ಕಳ್ಳರನ್ನು ಪತ್ತೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಎಂ ಜಗದೀಶ, ಡಿವೈಎಸ್ಪಿ ಮಹೇಶ ಕೆ, ಪಿಐ ಸಿದ್ದರಾಮೇಶ್ವರ ಅವರು ಕಾರ್ಯತಂತ್ರ ರೂಪಿಸಿದ್ದರು. ಪಿಎಸ್‌ಐ ರಾಜಶೇಖರ ವಂದಲಿ ಅವರ ಜೊತೆ ಪೊಲೀಸ್ ಸಿಬ್ಬಂದಿ ಗಜಾನನ ನಾಯ್ಕ, ವಿಠಲ ಗೌಡ, ಮನೋಜ ಡಿ, ಚಂದ್ರಶೇಖರ ನಾಯ್ಕ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ ಕಾರ್ಯಚರಣೆಯಲ್ಲಿದ್ದರು.
Discussion about this post