ಯಲ್ಲಾಪುರ-ಅಂಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ಸೇತುವೆ ಪುನರ್ ನಿರ್ಮಾಣಕ್ಕಾಗಿ ಸರ್ಕಾರದಿಂದ 35 ಕೋಟಿ ರೂ ಅನುದಾನ ಮಂಜೂರಿಯಾಗಿದೆ. ಈ ಅನುದಾನ ಮಂಜೂರಿ ಮಾಡಿಸುವಲ್ಲಿ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರ ಕೊಡುಗೆ ಅಪಾರವಾಗಿದ್ದು, ಈ ಕೊಡುಗೆ ಸ್ಮರಿಸಿ ಹೆಗ್ಗಾರಿನ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯವರು ಆರ್ ವಿ ದೇಶಪಾಂಡೆ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
`ಬರಬಳ್ಳಿ, ಕೊಡಸಳ್ಳಿ ಭಾಗದ ಜನ ಹೆಗ್ಗಾರ್, ಕೋನಾಳ ಪ್ರದೇಶದಲ್ಲಿ ಪುನರ್ವಸತಿ ಕಂಡುಕೊAಡಿದ್ದಾರೆ. ಬರಬಳ್ಳಿ, ಕೊಡಸಳ್ಳಿ ಭಾಗದಲ್ಲಿರುವಾಗಲೂ ಆರ್ ವಿ ದೇಶಪಾಂಡೆ ಅವರು ತಮ್ಮ ನೆರವಿಗೆ ಬಂದಿದ್ದಾರೆ. ಪುನರ್ವಸತಿ ಪ್ರದೇಶವಾಗ ಹೆಗ್ಗಾರ್ ಭಾಗದಲ್ಲಿ ಸಮಸ್ಯೆ ಆದಾಗಲೂ ಆರ್ ವಿ ದೇಶಪಾಂಡೆ ಅವರು ಸ್ಪಂದಿಸುತ್ತಿದ್ದಾರೆ’ ಎಂದು ಸಮಿತಿಯವರು ಹೇಳಿದರು.
`ನಾಲ್ಕು ವರ್ಷಗಳ ಹಿಂದೆ ಸೇತುವೆ ಕುಸಿದು ಬಿದ್ದಾಗ ಜನ ಸಮಸ್ಯೆಗೆ ಸಿಲುಕಿದ್ದರು. ಆಗ ಊರಿನವರೆಲ್ಲ ಸೇರಿ ಆರ್ ವಿ ದೇಶಪಾಂಡೆ ಅವರ ಬಳಿ ಸಮಸ್ಯೆ ಹೇಳಿಕೊಂಡಿದ್ದು, ಅವರು ಊರಿನವರ ಸಮಸ್ಯೆಗೆ ಸ್ಪಂದಿಸಿದರು. ಪುನರ್ ವಸತಿ ಕೇಂದ್ರದ ಹಳ್ಳಿಗಳ ಅಭಿವೃದ್ಧಿಗೆ ನಾಯಕರ ಕೊಡುಗೆ ಅಪಾರವಾಗಿದೆ. ಆರ್ ವಿ ದೇಶಪಾಂಡೆ ಹಾಗೂ ಮಂಕಾಳು ವೈದ್ಯ ಅವರಿಗೆ ಊರಿನವರು ಸೇತುವೆ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಾಗಿತ್ತು’ ಎಂದು ಸಮಿತಿಯವರು ಸ್ಮರಿಸಿದರು.
`ಸಮಿತಿಯವರು ಪ್ರತಿ ಹಂತದಲ್ಲಿಯೂ ಹೋರಾಟ ನಡೆಸಿ ಸೇತುವೆಗೆ ಅನುದಾನ ಮಂಜೂರಿ ಆಗುವಂತೆ ಮಾಡಿದ್ದಾರೆ. ಆರ್ ವಿ ದೇಶಪಾಂಡೆ ಅವರ ಜೊತೆ ಮಂಕಾಳು ವೈದ್ಯ, ಸತೀಶ್ ಸೈಲ್, ಶಿವರಾಮ ಹೆಬ್ಬಾರ್ ಹಾಗೂ ಸಂತೋಷ್ ಲಾಡ್ ಅವರು ಸೇತುವೆ ವಿಷಯದ ಹೋರಾಟಕ್ಕೆ ಸಹಕಾರ ನೀಡಿದ್ದಾರೆ’ ಎಂದು ತಿಳಿಸಿದರು. ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ನಾರಾಯಣ ಭಟ್ಟ, ಪ್ರಮುಖರಾದ ಪ್ರಭಾಕರ ಕಲಗಾರೆ, ಜೆಪಿ ಹೆಗ್ಗಾರ್, ರಮೇಶ ಗಾಂವ್ಕರ್, ಜಿವಿ ಭಟ್ಟ ಯಲ್ಲಾಪುರ ಮೊದಲಾದವರು ಆರ್ ವಿ ದೇಶಪಾಂಡೆ ಅವರನ್ನು ಭೇಟಿಯಾಗಿ ಸನ್ಮಾನಿಸಿದರು.
Discussion about this post