ಶಿರಸಿಯ ಶಿವರಾಜ ಮಾಸೂರು ಹಾಗೂ ನರೇಂದ್ರ ಚನ್ನಯ್ಯ ಅವರು ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಬನವಾಸಿ ಪೊಲೀಸರು ಅವರಿಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ.
ಶಿರಸಿಯ ಬನವಾಸಿ ಸಂತೆಪೇಟೆಯಲ್ಲಿ ಶಿವರಾಜ ಮಾಸೂರು (23) ಅವರು ವಾಸವಾಗಿದ್ದಾರೆ. ವಿದ್ಯಾವಂತರಾಗಿರುವ ಅವರು ರೊಬೊಟೆಕ್ ಇಂಜಿನಿಯರ್ ಆಗಿ ದುಡಿಯುತ್ತಿದ್ದಾರೆ. ಆದರೆ, ದುಶ್ಚಟಗಳ ಸಹವಾಸಕ್ಕೆ ಅವರು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಸಣ್ಣ ವಯಸ್ಸಿನಲ್ಲಿಯೇ ಗಾಂಜಾ ಸೇವನೆಯನ್ನು ರೂಢಿಸಿಕೊಂಡಿದ್ದಾರೆ.
ಸೆಪ್ಟೆ0ಬರ್ 11ರ ಸಂಜೆ ಸೊರಬಾ-ಬನವಾಸಿ ರಸ್ತೆಯ ಯಡೂರಬೈಲ್ ಬಸ್ ನಿಲ್ದಾಣದ ಬಳಿ ಶಿವರಾಜ ಮಾಸೂರು ಅವರು ಗಾಂಜಾ ಸೇದಿ ಹೊಗೆ ಬಿಡುತ್ತಿದ್ದರು. ಈ ವೇಳೆಯಲ್ಲಿ ಬನವಾಸಿಯ ಪಿಎಸ್ಐ ರವೀಂದ್ರ ಬೀರಾದರ್ ಅವರು ಆ ಭಾಗಕ್ಕೆ ತೆರಳಿದ್ದು, ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದವರನ್ನು ವಿಚಾರಣೆಗೆ ಒಳಪಡಿಸಿದರು. ಆಗ, ಶಿವರಾಜ ಮಾಸೂರು ಅವರು ಸಿಕ್ಕಿ ಬಿದ್ದರು. ಪೊಲೀಸರ ಜೊತೆ ಮಾತನಾಡಲು ಶಿವಾರ ಮಾಸೂರು ಅನುಮಾನ ಮಾಡಿದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಿದಾಗ ಮಾದಕ ವ್ಯಸನ ಸೇವನೆ ದೃಢವಾಯಿತು.
ದೊಡ್ಡಕೇರಿಯಲ್ಲಿ ಗೌಂಡಿ ಕೆಲಸ ಮಾಡುವ ನರೇಂದ್ರ ಚೆನ್ನಯ್ಯ ಸಹ ಗಾಂಜಾ ಸೇವನೆ ಮಾಡಿದ್ದರು. ಬನವಾಸಿಯ ಪಿಎಸ್ಐ ಮಹಾತಪ್ಪ ಕುಂಬಾರ್ ಅವರು ನರೇಂದ್ರ ಚೆನ್ನಯ್ಯ ಅವರ ವಿಚಾರಣೆ ನಡೆಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಕಟ್ಟಡ ಕಾರ್ಮಿಕ ನರೇಂದ್ರ ಚೆನ್ನಯ್ಯ ಸಹ ಸಿಕ್ಕಿ ಬಿದ್ದರು. ಈ ಹಿನ್ನಲೆ ಪೊಲೀಸರು ರೊಬೊಟೆಕ್ ಇಂಜಿನಿಯರ್ ಶಿವರಾಜ ಮಾಸೂರು ಹಾಗೂ ಕಟ್ಟಡ ಕಾಂಇðಕ ನರೇಂದ್ರ ಚೆನ್ನಯ್ಯ ವಿರುದ್ಧ ಪ್ರಕರಣ ದಾಖಲಿಸಿದರು.
`ಮಾದಕ ವ್ಯಸನ ಆರೋಗ್ಯಕ್ಕೆ ಹಾನಿಕರ’
