ಮೇಷ ರಾಶಿ: ನಿಮ್ಮ ಮಾತಿಗೆ ಬೆಲೆ ಬರಲಿದೆ. ನಿರೀಕ್ಷಿಸಿದ ಸ್ಥಾನ ಸಿಗಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ.
ವೃಷಭ ರಾಶಿ: ಕುಟುಂಬದಲ್ಲಿ ಆತಂಕ ಹೆಚ್ಚಾಗಲಿದೆ. ಮಾನಸಿಕ ಒತ್ತಡದಿಂದ ಹೊರಬನ್ನಿ. ಹಣಕಾಸು ವಿಷಯದಲ್ಲಿ ತೊಂದರೆ ಕಾಡಲಿದೆ.
ಮಿಥುನ ರಾಶಿ: ಈ ದಿನ ನೀವು ಮಾಡಿದ ತಪ್ಪು ಜೀವನಪೂರ್ತಿ ಕಷ್ಟ ಕೊಡುವ ಸಾಧ್ಯತೆಯಿದೆ. ಆಕಸ್ಮಿಕ ಲಾಭ ಸಿಗಲಿದೆ. ವಿದ್ಯಾರ್ಥಿಗಳ ಸಾಧನೆಗೆ ಉತ್ತಮ ಅವಕಾಶವಿದೆ.
ಕರ್ಕ ರಾಶಿ: ಕುಟುಂಬದಲ್ಲಿ ಕಲಹವಾಗುವ ಲಕ್ಷಣವಿದೆ. ಹಿರಿಯರ ಒತ್ತಡ ಸಹಿಸಿಕೊಳ್ಳುವುದು ಅನಿವಾರ್ಯ. ಅವಮಾನಗಳನ್ನು ಎದುರಿಸಿದರೆ ಜೀವನದಲ್ಲಿ ಮುನ್ನಡೆ ಸಾಧ್ಯ.
ಸಿಂಹ ರಾಶಿ: ನಿಮ್ಮ ಕ್ಷೇತ್ರದಲ್ಲಿ ನಿಮಗೆ ಗೌರವ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಅಸಮಧಾನ, ಸಿಡಿಮಿಡಿ ನಿಮಗೆ ಒಳ್ಳೆಯದಲ್ಲ.
ಕನ್ಯಾ ರಾಶಿ: ನಿಮ್ಮ ಮಾತಿನ ಮೇಲೆ ನಿಮಗೆ ಹಿಡಿತ ಮುಖ್ಯ. ಬೇರೆಯವರ ಮಾತು ಸಂಕಟ ತಂದರೂ ತಾಳ್ಮೆ ಕಳೆದುಕೊಳ್ಳಬೇಡಿ. ದಾನ-ಧರ್ಮ ಮಾಡುವುದರಿಂದ ನಿಮಗೆ ಒಳ್ಳೆಯದಾಗಲಿದೆ.
ತುಲಾ ರಾಶಿ: ದುಷ್ಟರಿಂದ ದೂರವಿರುವುದು ನಿಮಗೆ ಒಳ್ಳೆಯದು. ಬೇರೆಯವರು ಮಾಡಿದ ತಪ್ಪಿಗೆ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆಗಳಿವೆ. ಕುಟುಂಬದ ಜೊತೆ ಕಾಲ ಕಳೆಯುವುದು ಸೂಕ್ತ.
ವೃಶ್ಚಿಕ ರಾಶಿ: ಮನಸ್ಸಿನ ನೆಮ್ಮದಿಗಾಗಿ ಧ್ಯಾನ ಮಾಡಿ. ದಾಂಪತ್ಯದಲ್ಲಿ ವೈಮನಸ್ಸು ಮಾಡಿಕೊಳ್ಳದಿರಿ. ಹೊಸ ವಸ್ತು ಖರೀದಿಗೆ ಅನಗತ್ಯ ವೆಚ್ಚ ಮಾಡಬೇಡಿ.
ಧನು ರಾಶಿ: ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಆಗಲಿದೆ. ಪ್ರೀತಿ-ಪ್ರೇಮ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮ ಗುರಿ ಸಾಧನೆಗೆ ಮಾತ್ರ ಗಮನಕೊಡಿ.
ಮಕರ ರಾಶಿ: ಕೆಲದ ವಿಷಯದಲ್ಲಿ ತೊಂದರೆ ಸಹಜ. ನಿಮ್ಮ ಜಾಣ್ಮೆ ನಿಮಗೆ ಶ್ರೀರಕ್ಷೆ ಆಗಲಿದೆ. ದೇವಾಲಯಗಳ ಭೇಟಿ ಮಾಡುವುದು ಉತ್ತಮ.
ಕುಂಭ ರಾಶಿ: ವಸ್ತು ಲಾಭವಾಗುವ ಸಾಧ್ಯತೆಗಳಿವೆ. ಮಕ್ಕಳ ಶಿಕ್ಷಣದ ಬಗ್ಗೆ ಯೋಚಿಸಿ. ವಾಹನ ಖರೀದಿಗೆ ಬೆಂಬಲ ಸಿಗಲಿದೆ. ಮೇಲಧಿಕಾರಿಗಳ ಮೆಚ್ಚುಗೆ ಬರಲಿದೆ.
ಮೀನ ರಾಶಿ: ನ್ಯಾಯಾಲಯದ ವಿಷಯದಲ್ಲಿ ನಿಮಗೆ ಜಯ ಸಿಗಲಿದೆ. ಆಸ್ತಿ ಖರೀದಿ ಪ್ರಯತ್ನ ಸಫಲ ಆಗಲಿದೆ. ಹಳೆಯ ನೆನಪುಗಳು ನಿಮ್ಮನ್ನು ಕಾಡಲಿದೆ.
Discussion about this post