ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದ ಡಾ ಶ್ರೀಶೈಲ್ ಮಾದಣ್ಣವರ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮೇಲಧಿಕಾರಿಗಳ ಕಿರುಕುಳದಿಂದ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಹಳಿಯಾಳಕ್ಕೆ ಲೋಕಾಯುಕ್ತರು ಆಗಮಿಸಿದ್ದರು. ಸರ್ಕಾರಿ ಕೆಲಸದ ಬಗ್ಗೆ ಲೋಕಾಯುಕ್ತರು ವಿಚಾರಿಸಿದ್ದರು. ಎರಡು ತಿಂಗಳಿನಿಂದ ಸಂಬಳ ಆಗದ ಬಗ್ಗೆ ಡಾ ಶ್ರೀಶೈಲ್ ಮಾದಣ್ಣವರ ದೂರಿದ್ದರು. ಇದರಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜಕುಮಾರ ಅವರು ಬೇಸರಿಸಿಕೊಂಡಿರುವ ಬಗ್ಗೆ ಡಾ ಶೈಲೇಶ್ ಅವರು ಆಪ್ತರಲ್ಲಿ ಹೇಳಿದ್ದಾರೆ.
ಸಂಬಳ ಕೇಳಿದ ಕಾರಣ ಅನಗತ್ಯ ಸಮಸ್ಯೆ ಮಾಡಿರುವುದರಿಂದ ಮನಸ್ಸಿಗೆ ನೋವಾಗಿದೆ ಎಂದು ಡಾ ಶೈಲೇಶ್ ಹೇಳಿದ್ದಾರೆ. ಡಾಶ್ರೀಶೈಲ್ ಮಾದಣ್ಣವರ ಅವರು ಮೃದು ಭಾಷಿಯಾಗಿದ್ದು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಜನ ಜಾಗೃತಿಗಾಗಿಯೂ ಅವರು ಕಥೆ-ಕವನ ಬರೆದು ಜನರಿಗೆ ಹತ್ತಿರವಾಗಿದ್ದಾರೆ.
ಅವರ ರಾಜೀನಾಮೆ ವಿಷಯದ ಬಗ್ಗೆ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ರಾಜೀನಾಮೆ ನೀಡದಂತೆ ಜನರು ಒತ್ತಾಯಿಸಿದ್ದಾರೆ.
Discussion about this post