ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಪುನರ್ ಪರಿಶೀಲಿಸದೇ ರಾಜ್ಯದಲ್ಲಿ 2.60 ಲಕ್ಷ ಅರ್ಜಿ ತಿರಸ್ಕಾರವಾಗಿದ್ದರಿಂದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ.
ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ 34ನೇ ವರ್ಷ ಪ್ರವೇಶಿಸಿದ ಸನ್ನಿವೇಶದಲ್ಲಿ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ‘ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಮಿತಿ ಅಸ್ಥಿತ್ವವಿಲ್ಲದ ಅವಧಿಯಲ್ಲಿ ಅರ್ಜಿ ತಿರಸ್ಕಾರದ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ. ಈ ಪ್ರಕ್ರಿಯೆ ನಿಯನಬಾಹಿರ’ ಎಂದವರು ತಿಳಿಸಿದರು.
‘ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಈ ಕೆಲಸದಿಂದ ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿ ಇದ್ದರೂ ಅತಿಕ್ರಮಣದಾರರು ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕಾನೂನಾತ್ಮಕ ಹೋರಾಟ ಅನಿವಾರ್ಯ’ ಎಂದರು. ‘ಅರಣ್ಯವಾಸಿಗಳಿಗೆ ಸಾಮಾಜಿಕ ಬದ್ಧತೆ ಮತ್ತು ಕಾನೂನಾತ್ಮಕ ಸಭಲೀಕರಣಮಾಡುವ ಉದ್ದೇಶದಿಂದ ಮುಂದಿನ ೬೦ ದಿನ ರಾಜ್ಯಾದ್ಯಂತ ಅರಣ್ಯವಾಸಿಗಳ ಜಾಗೃತಿ ಜಾಥಾ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
Discussion about this post