ಕಾರವಾರದ ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಓಡಾಟ ಜೋರಾಗಿದೆ. ಯಲ್ಲಾಪುರ ತಾಲೂಕಿನ ಬಾರೆ ಘಟ್ಟದ ಪ್ರದೇಶದಲ್ಲಿ ಪಟ್ಟೆ ಹುಲಿ ಓಡಾಡಿದ ದೃಶ್ಯ ವೈರಲ್ ಆಗಿದೆ.
ಸೆಪ್ಟೆಂಬರ್ 12ರಂದು ಜಿಕೆ ರಾಮ್ ಕಂಪನಿಯ ವಾಹನ ಚಾಲಕ ಸೈನಾಥ ನಾಯಕ ಅವರು ಈ ಮಾರ್ಗದಲ್ಲಿ ವಾಹನ ಓಡಿಸಿಕೊಂಡು ಹೋಗುತ್ತಿದ್ದರು. ಅವರ ಜೊತೆ ಶ್ರೀಕಾಂತ ಹಾಗೂ ಎಸ್ ಜೆ ಟಿ ಸ್ವಾಮಿ ಅವರು ಆ ವಾಹನದಲ್ಲಿದ್ದರು. ಮಧ್ಯಾಹ್ನ 3ಗಂಟೆಗೆ ಬಾರೆ ಘಟ್ಟ ಪ್ರದೇಶದಲ್ಲಿ ಹುಲಿ ಕಾಣಿಸಿತು. ಸುಮಾರು 20 ನಿಮಿಷಗಳ ಕಾಲ ಆ ಹುಲಿ ರಸ್ತೆಯ ಮೇಲೆ ಓಡಾಟ ನಡೆಸಿತು.
ಕಾರಿನಲ್ಲಿದ್ದವರು ನಿಧಾನವಾಗಿ ಹುಲಿಯನ್ನು ಹಿಂಬಾಲಿಸಿದರು. ಸೈನಾಥ ನಾಯಕ ಅವರು ತಮ್ಮ ಮೊಬೈಲಿನಲ್ಲಿ ಹುಲಿಯ ಚಲನ-ವಲನ ಸೆರೆ ಹಿಡಿದರು. ಆ ವಿಡಿಯೋ ಇದೀಗ ವೈರಲ್ ಆಗಿದೆ.
ವೈರಲ್ ಆದ ವಿಡಿಯೋ ಇಲ್ಲಿ ನೋಡಿ👇
Discussion about this post