ರಾತ್ರಿ ಪೇಟೆ ತಿರುಗಾಟ ನಡೆಸಿ ಮನೆಗೆ ಬಂದ ಬನವಾಸಿಯ ನಾಗರಾಜ ಜೋಗಿ ಅವರು ಮನೆಯ ಮೊದಲ ಮಹಡಿ ಸೇರಿದ್ದು ಊಟ-ತಿಂಡಿಗೂ ಅಡಿಗೆ ಕೋಣೆಗೆ ಬಂದಿರಲಿಲ್ಲ. ಹೀಗಾಗಿ ಅವರ ತಾಯಿ ತಿಂಡಿ ಕೊಡಲು ಮೆಟ್ಟಿಲು ಏರಿ ಹೋದಾಗ ನಾಗರಾಜ ಜೋಗಿ ಅಲ್ಲಿ ಶವವಾಗಿದ್ದರು.
ಶಿರಸಿಯ ಬನವಾಸಿಯ ನಾಗರಾಜ ಸೋಗಿ (56) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿನ ರಥಬೀದಿಯಲ್ಲಿ ತಾಯಿ ಜೊತೆ ಅವರು ವಾಸವಾಗಿದ್ದರು. ಅವರ ತಮ್ಮ ಪ್ರಕಾಶ ಸೋಗಿ ಅವರು ಕಿರಾಣಿ ಅಂಗಡಿ ನಡೆಸಿಕೊಂಡಿದ್ದು, ಅವರು ಪ್ರತ್ಯೇಕವಾಗಿದ್ದರು.
ಹೀಗಿರುವಾಗ ನಾಗರಾಜ ಸೋಗಿ ಅವರು ವ್ಯಸನಕ್ಕೆ ಸಿಲುಕಿದರು. ದುಡಿದ ಹಣವನ್ನು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ಸಾಕಷ್ಟು ತಿಳಿಸಿದರೂ ನಾಗರಾಜ ಸೋಗಿ ಅವರ ಕುಡಿತದ ಚಟ ಕಡಿಮೆ ಮಾಡಲು ಆಗಲಿಲ್ಲ. ದಿನದಿಂದ ದಿನಕ್ಕೆ ಅವರ ವ್ಯಸನ ಇನ್ನಷ್ಟು ಹೆಚ್ಚಾಗಿದ್ದು, ಮಾನಸಿಕವಾಗಿ ಕುಗ್ಗಿದ್ದರು.
ಸೆ 13ರ ರಾತ್ರಿ ಪೇಟೆಗೆ ಹೋಗಿ ಬಂದ ನಾಗರಾಜ ಸೋಗಿ ಅವರು ಮನೆ ಮೊದಲ ಮಹಡಿ ಹತ್ತಿದರು. ರಾತ್ರಿ ಊಟಕ್ಕೆ ಕರೆದರೂ ಅವರು ಬರಲಿಲ್ಲ. ಸೆ 14ರ ಬೆಳಗ್ಗೆ ಅವರ ತಾಯಿ ತಿಂಡಿ ತಿನ್ನುವಂತೆ ಕೂಗಿದರು. ಆದರೂ, ಮಾತನಾಡಲಿಲ್ಲ. ಹೀಗಾಗಿ ತಟ್ಟೆಯಲ್ಲಿ ತಿಂಡಿ ಹಾಕಿದ ತಾಯಿ ಮೆಟ್ಟಿಲು ಹತ್ತಿ ಹೋದರು.
ಆಗ, ನಾಗರಾಜ ಸೋಗಿ ಅವರು ಅಲ್ಲಿ ನೇಣು ಹಾಕಿಕೊಂಡು ನೇತಾಡುತ್ತಿದ್ದರು. ಕೂಡಲೇ ಪ್ರಕಾಶ ಸೋಗಿ ಅವರಿಗೆ ಈ ವಿಷಯ ತಿಳಿಸಿದ್ದು, ಪ್ರಕಾಶ ಸೋಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post