ಶಿರಸಿಯ ಕೆರೆಕೊಪ್ಪದಲ್ಲಿನ ಬಾವಿಗೆ ಭಾನುವಾರ ಚಿರತೆ ಬಿದ್ದಿದೆ. ಈ ಸುದ್ದಿ ಕೇಳಿ ಊರಿನವರು ಆಗಮಿಸಿದ್ದು, ಅಲ್ಲಿನ ಬೊಬ್ಬೆಗೆ ಚಿರತೆ ಕಂಗಾಲಾಗಿದೆ.
ಆಹಾರ ಅರೆಸಿ ಊರಿಗೆ ಬಂದ ಚಿರತೆ ಶಿರಸಿ ಕೆರೆಕೊಪ್ಪ ಗ್ರಾಮ ಪ್ರವೇಶಿಸಿತು. ಅಲ್ಲಿನ ಸುರೇಶ ಹೆಗಡೆ ಅವರ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದಿತು. ಬೆಳಗ್ಗೆ ಗುರ್.. ಗುರ್.. ಎಂಬ ಸದ್ದು ಕೇಳಿದ ಹಿನ್ನಲೆ ಸುರೇಶ ಹೆಗಡೆ ಕುಟುಂಬದವರು ಬಾವಿ ಬಳಿ ಹೋಗಿದ್ದರು. ಆಗ, ಅಲ್ಲಿ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿತು.
ಬಾವಿಗೆ ಬಿದ್ದ ಚಿರತೆ ನೋಡಲು ನೂರಾರು ಜನ ಬಂದರು. ಅಲ್ಲಿದ್ದ ಒಬ್ಬರು ಅರಣ್ಯ ಇಲಾಖೆಗೂ ಫೋನ್ ಮಾಡಿದರು. ಬಾವಿಯ ಒಳಗಿದ್ದ ಚಿರತೆ ಮೇಲೆ ಬರಲಾರದೇ ಒದ್ದಾಡುತ್ತಿತ್ತು. ಅಲ್ಲಿದ್ದ ನೀರನ್ನು ಸಂಪೂರ್ಣವಾಗಿ ರಾಡಿ ಮಾಡಿತ್ತು. ಅರಣ್ಯ ಸಿಬ್ಬಂದಿ ತಾಸುಗಳ ಕಾಲ ಚಿರತೆ ಮೇಲೆತ್ತುವ ಕಾರ್ಯಾಚರಣೆ ಮಾಡಿದರು. ಕೊನೆಗೂ ಚಿರತೆ ಮೇಲೆ ಬಂದಿದ್ದು, ಅಲ್ಲಿದ್ದ ಜನ ದಾರಿ ಬಿಟ್ಟುಕೊಟ್ಟರು. ಬಂದ ದಾರಿಯಲ್ಲಿಯೇ ಚಿರತೆ ಕಾಡು ಸೇರಿತು.
ಚಾನಲ್ ವಿಡಿ ಪ್ರಸಾರ ಮಾಡಿದ ಬಾವಿಯಲ್ಲಿ ಹೊರಳಾಟ ನಡೆಸಿದ ಚಿರತೆಯ ವಿಡಿಯೋ ಇಲ್ಲಿ ನೋಡಿ..
Discussion about this post