ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಪೈಪೋಟಿ ನೀಡುತ್ತಿರುವ ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿಯ ಅಧ್ಯಕ್ಷೆ ಸರಸ್ವತಿ ಎನ್ ರವಿ ಅವರು ಸೋಂದಾ ಸೀಮೆಗೆ ಭೇಟಿ ನೀಡಿದ್ದಾರೆ. ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿಯವರ ದರ್ಶನಪಡೆದು ಅವರು ತಮ್ಮ ಚುನಾವಣಾ ಓಡಾಟ ಮುಂದುವರೆಸಿದ್ದಾರೆ.
ಕೆಡಿಸಿಸಿ ಬ್ಯಾಂಕಿನ 105 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಸರಸ್ವತಿ ಎನ್ ರವಿ ಅವರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತ ಕ್ಷೇತ್ರದಿಂದ ನಿರ್ದೇಶಕ ಮಂಡಳಿಗೆ ಅವರು ಆಸಕ್ತರಾಗಿದ್ದಾರೆ. ಈ ಹಿನ್ನಲೆ ಜಿಲ್ಲೆಯ ಎಲ್ಲಾ ಕಡೆ ಓಡಾಟ ನಡೆಸಿ ಅವರು ತಮ್ಮ ಪರ ಪ್ರಚಾರ ಮಾಡುತ್ತಿದ್ದಾರೆ. ಈವರೆಗೂ ಯಾವ ಬಣದಲ್ಲಿಯೂ ಗುರುತಿಸಿಕೊಳ್ಳದೇ ಅವರು ಸ್ವತಂತ್ರವಾಗಿ ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ.
ಸ್ನಾತಕೋತರ ಪದವಿಧರೆಯಾಗಿರುವ ಸರಸ್ವತಿ ಎನ್ ರವಿ ಅವರು ಶ್ರೀಗಳ ಮಂತ್ರಾಕ್ಷತೆಪಡೆದು ತಮ್ಮ ಪ್ರಚಾರ ಕಾರ್ಯ ಶುರು ಮಾಡಿದ್ದು, ದಾಂಡೇಲಿ, ಹಳಿಯಾಳ ಹಾಗೂ ಯಲ್ಲಾಪುರ ಭಾಗದಲ್ಲಿ ಮೊದಲ ಹಂತದ ಪ್ರವಾಸ ಮುಗಿಸಿದ್ದಾರೆ. ಪ್ರಚಾರದ ಅವಧಿಯಲ್ಲಿ ಅವರು 2017ರಿಂದ 2022ರವರೆಗೆ ಕರ್ನಾಟಕ ರಾಜ್ಯ ಸೌಹಾರ್ದ ಸಯುಕ್ತ ಸಹಕಾರಿಯ ನಿರ್ದೇಶಕಿಯಾಗಿ ಮಾಡಿದ ಕೆಲಸಗಳ ಬಗ್ಗೆ ವಿವರಿಸುತ್ತಿದ್ದಾರೆ. ಸಹಕಾರಿ ರಂಗದಲ್ಲಿ ಮಹಿಳಾ ಸಾಧಕಿಯ ಸಾಧನೆ ನೋಡಿ ಮತದಾರರು ಮೆಚ್ಚುಗೆವ್ಯಕ್ತಪಡಿಸಿದರು.
ಸರಸ್ವತಿ ಎನ್ ರವಿ ಅವರು ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿ ಸಂಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದನ್ನು ಮತದಾರರು ಸ್ಮರಿಸಿದರು. 10ಕ್ಕೂ ಅಧಿಕ ವಿವಿಧ ಸಂಘಟನೆಗಳನ್ನು ಕಟ್ಟಿದ ಅವರ ಕಾರ್ಯವನ್ನು ಗಮನಿಸಿ, ಮತದಾನದ ಭರವಸೆ ನೀಡಿದರು. ಕೆಡಿಸಿಸಿ ಬ್ಯಾಂಕಿನಲ್ಲಿ ಈವರೆಗೆ ಮಹಿಳೆಯರಿಗೆ ಅವಕಾಶ ಸಿಗದ ಬಗ್ಗೆ ಮತದಾರರಿಗೂ ಮನವರಿಕೆಯಾಗಿದ್ದು,, `ಈ ಬಾರಿಯಾದರೂ ಮಹಿಳೆಯರಿಗೆ ಮತ ನೀಡೋಣ’ ಎಂದು ಮಾತನಾಡಿದರು. ಹಳಿಯಾಳ, ಯಲ್ಲಾಪುರ ಹಾಗೂ ದಾಂಡೇಲಿ ಪ್ರವಾಸದ ಅವಧಿಯಲ್ಲಿ ಸರಸ್ವತಿ ಎನ್ ರವಿ ಅವರಿಗೆ ಉತ್ತಮ ಸ್ಪಂದನೆ ಸಿಕ್ಕಿದೆ.
Discussion about this post