ಹೊನ್ನಾವರದಲ್ಲಿ ಅಕ್ರಮ ಮರಳು ಸಾಗಾಟ ಮುಂದುವರೆದಿದ್ದು, ಪೊಲೀಸರು ನಿರಂತರ ಕಾರ್ಯಾಚರಣೆ ಮಾಡುತ್ತಿದ್ದಾರೆ. ಹೊಸಪಟ್ಟಣದ ಧರ್ಮಾ ಸುಬ್ರಾಯ ಗೌಡ ಅವರು ಅಕ್ರಮ ಮರಳು ಸಾಗಾಟಗಾರರ ಪಟ್ಟಿ ಸೇರಿದ್ದಾರೆ.
ಹೊನ್ನಾವರ ಹೊಸಪಟ್ಟಣದ ಧರ್ಮಾ ಗೌಡ ಅವರು ಬುಲೇರೋ ವಾಹನ ಹೊಂದಿದ್ದು, ಅದಕ್ಕೆ ಮೊದಲಿನ ಹಾಗೇ ಬಾಡಿಗೆ ಬರುತ್ತಿರಲಿಲ್ಲ. ಹೀಗಾಗಿ ಬೇಗ ದುಡ್ಡು ಮಾಡಬೇಕು ಎಂದು ನಿರ್ಧರಿಸಿದ ಅವರು ಮರಳು ಕದಿಯುವ ಕೆಲಸ ಶುರು ಮಾಡಿದ್ದರು. ಪರಿಸರಕ್ಕೆ ಹಾನಿ ಮಾಡಿ ಮರಳು ಕದ್ದು ಸಾಗಿಸುತ್ತಿದ್ದ ಅವರನ್ನು ಸೆ 14ರಂದು ಪೊಲೀಸರು ಹಿಡಿದರು.
ಹೊನ್ನಾವರ ಹೆದ್ದಾರಿಯಲ್ಲಿ ಧರ್ಮ ಗೌಡ ಅವರು ಮರಳು ಸಾಗಿಸುತ್ತಿದ್ದಾಗ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಬುಲೆರೋ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ಪೊಲೀಸರನ್ನು ನೋಡಿ ಬೆದರಿದ ಧರ್ಮಾ ಗೌಡ ಅವರು ಮರಳಿನ ವಾಹನವನ್ನು ರಸ್ತೆ ಅಂಚಿಗೆ ನಿಲ್ಲಿಸಿ ಓಡಿ ಪರಾರಿಯಾದರು. ವಾಹನ ಹಾಗೂ ಮರಳು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post