ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವ ಕಾರವಾರದ ಗುತ್ತಿಗೆದಾರರ ಜೊತೆ ಕೈಗಾ ಅಣು ವಿದ್ಯುತ್ ಘಟಕ ಇಂಜಿನಿಯರ್ ಬಸವರಾಜ ಹುಗ್ಗಿ ಅವರು ಇಂಜಿನಿರ‍್ಸ ದಿನವನ್ನು ಆಚರಿಸಿದ್ದಾರೆ.
ಈ ವೇಳೆ ಎಲ್ಲರೂ ಪರಸ್ಪರ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ `ನಾವೇಲ್ಲರೂ ಸಹೋದರರು’ ಎಂಬ ಸಂದೇಶ ರವಾನಿಸಿದ್ದಾರೆ. `ಪರಸ್ಪರ ಸಹಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಬಸವರಾಜ ಹುಗ್ಗಿ ಅವರು ಈ ವೇಳೆ ಪ್ರತಿಪಾದಿಸಿದರು.
ಕೈಗಾ ಅಣು ವಿದ್ಯುತ್ ಘಟಕದಲ್ಲಿ ಅತ್ಯಂತ ಪಾರದರ್ಶಕವಾಗಿ ಗುತ್ತಿಗೆದಾರರಿಗೆ ಕೆಲಸ ಕೊಡಲಾಗುತ್ತದೆ. ಈವರೆಗೂ ಗುತ್ತಿಗೆದಾರರು ಕೆಲಸದ ವಿಷಯದಲ್ಲಿ ಅಸಮಧಾನವ್ಯಕ್ತಪಡಿಸಿಲ್ಲ. ಅಣು ವಿದ್ಯುತ್ ಉತ್ಪಾದನಾ ವಿಷಯದಲ್ಲಿ ಗುತ್ತಿಗೆದಾರರ ಪಾತ್ರವೂ ಅಪಾರವಾಗಿದೆ’ ಎಂದು ಅಣು ವಿದ್ಯುತ್ ಘಟಕ ಇಂಜಿನಿಯರ್ ಬಸವರಾಜ ಹುಗ್ಗಿ ಅವರು ಹೇಳಿದರು.
`ಕೈಗಾ ಅಣು ಘಟಕ ನಮ್ಮ ನೆಲದ ಹೆಮ್ಮೆಯಾಗಿದೆ. ದೇಶಕ್ಕೆ ವಿದ್ಯುತ್ ಪೂರೈಕೆ ಮಾಡುವ ಜೊತೆ ಸ್ಥಳೀಯರಿಗೂ ಈ ಘಟಕ ಉದ್ಯೋಗ ಅವಕಾಶಗಳನ್ನು ನೀಡಿದೆ. ಈ ಘಟಕದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರ ಬದುಕು ನಡೆಯುತ್ತಿದ್ದು, ಗುತ್ತಿಗೆದಾರರು ಸಹ ಫಲಾನುಭವಿಗಳಾಗಿದ್ದಾರೆ’ ಎಂದು ಸೌಹಾರ್ದ ಕೂಟದಲ್ಲಿ ಭಾಗವಹಿಸಿದವರು ಮಾತನಾಡಿದರು.
`ನಮ್ಮ ನಿಮ್ಮ ಬಾಂಧವ್ಯ ಹೀಗೆ ಮುಂದುವರೆಯಲಿ. ನಾವೆಲ್ಲರೂ ಸಹೋದರರ ಹಾಗೇ ಜೀವಿಸೋಣ’ ಎಂದು ಇಂಜಿನಿಯರ್ ಹಾಗೂ ಗುತ್ತಿಗೆದಾರರು ಸಾಮಾಜಿಕ ಸಂದೇಶ ಸಾರಿದರು. ಗುತ್ತಿಗೆದಾರಾದ ರವಿಕುಮಾರ, ತಂಗವೆಲು, ವಾಸು, ಮರುಗನ್, ಗೋಪಿ, ಜಿಮ್ಮಿ, ಸಂತೋಷ್ ಬಾಂಡ್ಕರ್, ಅಭಿಲಾಶ್, ಸಿದ್ಧಾರ್ಥ, ಮಾಧವ ನಾಯಕ, ಜಯಪ್ರಕಾಶ್ ಪಿಳ್ಳೆ, ನಾಗರಾಜ್ ಜೋಶಿ, ಪ್ರಕಾಶ್ ಗೌನ್ಸ್, ಕೆ ಬಾಬು, ಮಲತೇಶ್ ಹಾಗೂ ಇಂಜಿನಿಯರ್ ಚಂದನ್ ನಾಯ್ಕ್ ಇದ್ದರು.
Discussion about this post