ಮೇಷ ರಾಶಿ: ನಿಮ್ಮ ನಡೆ-ನುಡಿ ಬೇರೆಯವರ ಮೇಲೆ ಪ್ರಭಾವ ಬೀರಲಿದೆ. ಮಾತು ಮಿತಿಯಲ್ಲಿದ್ದರೆ ಉತ್ತಮ. ಕೆಲಸದ ಕಡೆ ಹೆಚ್ಚಿನ ಗಮನ ಅಗತ್ಯ.
ವೃಷಭ ರಾಶಿ: ಹೊಸ ಚಿಂತನೆಗಳು ನಿಮ್ಮ ದೃಷ್ಠಿಕೋನವನ್ನು ಬದಲಿಸುತ್ತದೆ. ಗೊಂದಲಗಳಿAದ ದೂರವಿರಿ. ಆಪ್ತರ ಸಲಹೆ ನಿಮಗೆ ಒಳಿತು ಮಾಡಲಿದೆ.
ಮಿಥುನ ರಾಶಿ: ಕೊಪ ನಿಮಗೆ ಒಳ್ಳೆಯದಲ್ಲ. ಶಾಂತಿಯಿoದ ವ್ಯವಹರಿಸುವುದು ಮುಖ್ಯ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ.
ಕರ್ಕ ರಾಶಿ: ಶಾಂತಿ ಹಾಗೂ ಸಹನೆಯಿಂದ ವರ್ತಿಸಿದರೆ ನಿಮ್ಮ ಅರ್ದ ಸಮಸ್ಯೆ ಬಗೆಹರಿಯುತ್ತದೆ. ಜೀವನದಲ್ಲಿ ಬರುವ ಕಷ್ಟಗಳು ಶಾಶ್ವತವಲ್ಲ. ಧೈರ್ಯದಿಂದ ಮುನ್ನಡೆಯುವುದು ಮುಖ್ಯ.
ಸಿಂಹ ರಾಶಿ: ನಿಮ್ಮೊಳಗಿನ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಕೆಲಸ ಮಾಡಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಎದುರಾಗಬಹುದು.
ಕನ್ಯಾ ರಾಶಿ: ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಎದುರಿಸಿ. ಆಯಾ ದಿನದ ಕೆಲಸವನ್ನು ಅದೇ ದಿನ ಮುಗಿಸುವುದು ಉತ್ತಮ. ಮನಸ್ಸಿನ ನೆಮ್ಮದಿಗೆ ಧ್ಯಾನ ಮಾಡಿ.
ತುಲಾ ರಾಶಿ: ಗಂಭೀರ ವಿಷಯಗಳ ಬಗ್ಗೆ ಈ ದಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಸ್ನೇಹಿತರ ಜೊತೆ ಕಾಲ ಕಳೆದರೆ ಮನಸ್ಸು ಶಾಂತವಾಗಿರಲಿದೆ. ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯ.
ವೃಶ್ಚಿಕ ರಾಶಿ: ಅನಿರೀಕ್ಷಿತ ವರ್ತನೆಗಳಿಂದ ಭಾವೋದ್ವೇಗಕ್ಕೆ ಒಳಗಾಗಬೇಡಿ. ಎದುರಾಳಿಗಳನ್ನು ಶಾಂತ ರೀತಿಯಲ್ಲಿ ಎದುರಿಸಿ. ನಿಮ್ಮ ಮಾತುಗಳು ಗಂಭೀರತೆಯಿoದ ಕೂಡಿರಲಿ.
ಧನು ರಾಶಿ: ನಿಮಗೆ ಬರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಕಲಿಕೆಗೆ ಉತ್ತಮ ಸಮಯ. ಬೇರೆಯವರ ಬಗ್ಗೆ ಮಾತನಾಡುವಾಗ ಎಚ್ಚರಿಕೆವಹಿಸಿ.
ಮಕರ ರಾಶಿ: ಕೆಲಸದಲ್ಲಿ ಒತ್ತಡ ಬಂದಾಗ ಶಾಂತಿಯಿAದ ವರ್ತಿಸಿ. ನಿಮ್ಮೊಳಗಿನ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಿ. ಸ್ನೇಹಿತರ ಸಹಕಾರದಿಂದಲೂ ಯಶ್ಸು ಸಾಧ್ಯವಿದೆ.
ಕುಂಭ ರಾಶಿ: ಮಾತನಾಡುವ ಕಲೆ ನಿಮ್ಮ ಮುಖ್ಯ ಆಸ್ತಿ ಎಂದು ನೆನಪಿಡಿ. ನೀವು ಎದುರಿಸುವ ಸಮಸ್ಯೆಗಳಿಗೆ ನಿಮ್ಮ ಯೋಚನೆಯಲ್ಲಿಯೇ ಪರಿಹಾರವಿದೆ. ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.
ಮೀನ ರಾಶಿ: ಸಣ್ಣ ಸಣ್ಣ ವಿಘ್ನಗಳು ಎದುರಾಗಲಿದ್ದು, ಅದನ್ನು ಧೈರ್ಯದಿಂದ ಎದುರಿಸಿ. ಕುಟುಂಬದವರ ಜೊತೆ ಕಾಲ ಕಳೆಯಿರಿ. ಒತ್ತಡದ ಕೆಲಸ ಮಾಡಬೇಡಿ.
Discussion about this post