`ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ ಅವರ ಕೊಡುಗೆ ದೊಡ್ಡದು’ ಎಂದು ಯಲ್ಲಾಪುರದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸಂಜೀವ್ ಅವರು ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸೋಮವಾರ ಇಂಜನಿಯರ್ ದಿನ ಆಚರಣೆ ನಡೆದಿದ್ದು, ಈ ಅವಧಿಯಲ್ಲಿ ಅವರು ಇಂಜಿನಿಯರ್ ಅವರ ಸೇವೆಯನ್ನು ಸ್ಮರಿಸಿದರು. `ಗುತ್ತಿಗೆದಾರರು ಸಹ ಇಂಜಿನಿಯರ್ ಅವರಂತೆ ದುಡಿಯುತ್ತಾರೆ. ಅಭಿವೃದ್ಧಿ ವಿಷಯದಲ್ಲಿ ಇಂಜಿನಿಯರ್ ಹಾಗೂ ಗುತ್ತಿಗೆದಾರರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ’ ಎಂದವರು ಹೇಳಿದರು.
ಕಚೇರಿ ಆವರಣದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಈ ವೇಳೆ ನೆರೆದಿದ್ದವು ಮಾಲಾರ್ಪಣೆ ಮಾಡಿದರು. ಅದಾದ ನಂತರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ನಾಡಿಗೆ ವಿಶ್ವೇಶ್ವರಯ್ಯ ಅವರು ನೀಡಿದ ಕೊಡುಗೆಯನ್ನು ಈ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜನಿಯರ್ ಪ್ರಶಾಂತ್ ರವಿ, ಗುತ್ತಿಗೆದಾರರಾದ ಅಶೋಕ ನಾಯ್ಕ ಇಡಗುಂದಿ, ಎಸ್ ವಿ ಭಟ್ಟ, ಮಾರುತಿ ಬೋವಿವಡ್ಡರ್, ಸುರೇಶ, ವಿನಯ ಹೆಗಡೆ, ಸುಬ್ರಾಯ ಇತರರು ಇದ್ದರು.
Discussion about this post