ಹೊನ್ನಾವರದ ಗುತ್ತಿಗೆದಾರ ಪ್ರವೀಣ ಕಿಣಿ ಅವರಿಗೆ ಗೌಥಮ ಆಚಾರ್ಯ ಎಂಬಾತರು ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ. ಅದಕ್ಕೂ ಮುನ್ನ ಪ್ರವೀಣ ಕಿಣಿ ಅವರ ಕೆನ್ನೆಗೂ ಬಾರಿಸಿ ಬೈದಿದ್ದಾರೆ.
ಕಬ್ಬಿಣದ ರಾಡಿನಿಂದ ಹೊಡೆಸಿಕೊಂಡ ಪ್ರವೀಣ ಕಿಣಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದಲೇ ಅವರು ತಮ್ಮ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಪ್ರವಿಣ ಕಿಣಿ ಅವರ ಸ್ನೇಹಿತ ಅವಿನಾಶ ಮೂಡಂಗಿ ಅವರ ಕಾರನ್ನು ಸೀಜರ್ ಜಪ್ತು ಮಾಡಿದ ವಿಷಯವಾಗಿ ಈ ಹೊಡೆದಾಟ ನಡೆದಿದೆ.
ಹೊನ್ನಾವರದ ರಾಯಲಕೇರಿಯ ಗಣಪತಿ ಮಂದಿರದ ಎದುರು ಪ್ರವೀಣ ಕಿಣಿ ಅವರು ಮನೆ ಮಾಡಿಕೊಂಡಿದ್ದಾರೆ. ಸೆ 13ರಂದು ಅವಿನಾಶ ಮೂಡಂಗಿ ಅವರು ಪ್ರವೀಣ ಕಿಣಿ ಅವರಿಗೆ ಫೋನ್ ಮಾಡಿ ಹಣಕಾಸಿನ ಸಹಾಯ ಯಾಚಿಸಿದ್ದರು. `ಹಣ ಏಕೆ?’ ಎಂದು ಕೇಳಿದಾಗ `ತಮ್ಮ ಕಾರು ಸೀಜರ್ ಜಪ್ತು ಮಾಡುತ್ತಿದ್ದಾರೆ’ ಎಂದು ಅವಿನಾಶ ಮೂಡಂಗಿ ವಿವರಿಸಿದ್ದರು. `ತನ್ನಲ್ಲಿ ಹಣ ಇಲ್ಲ. ಬೇಕಾದರೆ ಸೀಜರ್ ಬಳಿ ಮಾತನಾಡುವೆ’ ಎಂದು ಪ್ರವೀಣ ಕಿಣಿ ಭರವಸೆ ನೀಡಿದ್ದರು. ಅದರಂತೆ ಅವಿನಾಶ ಮೂಡಂಗಿ ಅವರು ನೀಡಿದ ಸೀಜರ್ ಮೊಬೈಲ್ ಸಂಖ್ಯೆಗೆ ಪ್ರವೀಣ ಕಿಣಿ ಫೋನ್ ಮಾಡಿದ್ದರು.
ಆಗ, ಸೀಜರ್ ತಮ್ಮ ಹೆಸರು ಹೇಳಲಿಲ್ಲ. ಬದಲಾಗಿ ಫೋನ್ ಮಾಡಿದ ಪ್ರವೀಣ ಕಿಣಿ ಅವರಿಗೆ ಬೈಯಲು ಶುರು ಮಾಡಿದರು. ಸೆ 14ರಂದು ಅವಿನಾಶ ಮೂಡಂಗಿ ಬಳಿ ಸೀಜರ್ ಬಗ್ಗೆ ಪ್ರವೀಣ ಕಿಣಿ ಮಾಹಿತಿಪಡೆದರು. ತಮ್ಮ ಪರಿಚಯದವರೇ ಆದ ಲಕ್ಷಿö್ಮÃನಾರಾಯಣ ನಗರದ ಗೌಥಮ ಆಚಾರ್ಯ ಸೀಜರ್ ಆಗಿರುವ ಬಗ್ಗೆ ಅರಿತು ಮತ್ತೆ ಫೋನ್ ಮಾಡಿದರು. `ನಿನ್ನೆ ಫೋನ್ ಮಾಡಿದಾಗ ನೀ ಯಾರು ಎಂದು ಏಕೆ ಹೇಳಲಿಲ್ಲ?’ ಎಂದು ಪ್ರಶ್ನಿಸಿದರು. ಆಗ, ಗೌಥಮ ಆಚಾರ್ಯ ಅವರು ತಮ್ಮ ಟಿವಿ ರಿಪೇರಿ ಅಂಗಡಿಗೆ ಬರುವಂತೆ ಆಹ್ವಾನ ನೀಡಿದರು. ಹೊನ್ನಾವರ ಕೋರ್ಟಿನಿಂದ ಬಸ್ ನಿಲ್ದಾಣ ರಸ್ತೆಯ ಮಾರ್ಗದಲ್ಲಿರುವ ಗೌಥಮ ಆಚಾರ್ಯ ಅವರ ಅಂಗಡಿಗೆ ಪ್ರವೀಣ ಕಿಣಿ ಹೋಗಿದ್ದು, ಆ ವೇಳೆಯಲ್ಲಿಯೂ ಜಗಳ ಶುರುವಾಯಿತು.
`ನನ್ನ ಜೊತೆ ನಿನ್ನ ವ್ಯವಹಾರ ಇಲ್ಲ. ನಿಮಗೆಲ್ಲ ದುಡ್ಡು ಕಟ್ಟುವ ಯೋಗ್ಯತೆ ಇಲ್ಲ’ ಎಂದು ಗೌಥಮ ಆಚಾರ್ಯ ನಿಂದಿಸಿದರು. ಜೊತೆಗೆ ಪ್ರವೀಣ ಕಿಣಿ ಅವರ ಕೆನ್ನೆಗೆ ಬಾರಿಸಿದರು. ಅದಾದ ಮೇಲೆ ಅಲ್ಲಿದ್ದ ಕಬ್ಬಿಣದ ರಾಡಿನಿಂದ ಹೊಡೆದರು. ಪರಿಚಯಸ್ಥ ಮನೋಜ ನಾಯ್ಕ ಅವರ ಸಹಾಯಪಡೆದು ಕಿರಣ ಕಿಣಿ ಆಸ್ಪತ್ರೆ ಸೇರಿದರು. ಅಲ್ಲಿಂದಲೇ ಪೊಲೀಸರಿಗೆ ಮಾಹಿತಿ ನೀಡಿ, ಗೌಥಮ ಆಚಾರ್ಯ ವಿರುದ್ಧ ಪ್ರಕರಣ ದಾಖಲಿಸಿದರು.
Discussion about this post