ಯಲ್ಲಾಪುರದ ಕಿರವತ್ತಿ ಬಳಿಯ ಡೊಮಗೇರಿಯಲ್ಲಿ ಮರ ಬಿದ್ದು ಸಾವನಪ್ಪಿದ ಸಾವಿತ್ರಿ ಖರಾತ್ ಅವರ ಮನೆಗೆ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯ ರಾಜ್ಯಾಧ್ಯಕ್ಷ ಸಂತೋಷ್ ವರಕ್ ಅವರು ಭೇಟಿ ನೀಡಿದರು.
ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು ಆರ್ಥಿಕ ನೆರವು ನೀಡಿದರು. ಅವಘಡದಲ್ಲಿ ಸಾವಿತ್ರಿ ಖರಾತ್ ಅವರ ಎರಡನೇ ಮಗಳ ಎರಡು ಕಾಲು ಮುರಿದಿದ್ದು, ಅದನ್ನು ನೋಡಿ ಸಂಘಟನೆ ಸದಸ್ಯರು ಮರುಕವ್ಯಕ್ತಪಡಿಸಿದರು. ಸಂಘಟನೆಯ ಪ್ರಮುಖರಾದ ಬಮ್ಮು ಫೋಂಡೆ, ಲಕ್ಷ್ಮಣ ಕೋಕರೆ ಇತರರು ಇದ್ದರು.
ಹೊಂಡದಿoದ ಕೂಡಿದ ರಸ್ತೆ: ಬಿಜೆಪಿ ಎಚ್ಚರಿಕೆ
ಯಲ್ಲಾಪುರದ ಚಂದ್ಗುಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ವಿವಿಧ ರಸ್ತೆ ಮಾರ್ಗಗಳು ಹಾಳಾಗಿದ್ದು, ಅದನ್ನು ಸರಿಪಡಿಸದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಚಂದ್ಗುಳಿ ಬಿಜೆಪಿ ಘಟಕ ಎಚ್ಚರಿಸಿದೆ.
ಈ ಬಗ್ಗೆ ಬಿಜೆಪಿ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಪತ್ರವನ್ನು ನೀಡಿದ್ದಾರೆ. `ರಸ್ತೆ ಹಾಳಾಗಿದ್ದರಿಂದ ವಾಹನ ಓಡಾಟಕ್ಕೆ ಕಷ್ಟವಾಗಿದೆ. ಪದೇ ಪದೇ ಈ ಭಾಗದಲ್ಲಿ ಅಪಘಾತವೂ ಆಗುತ್ತಿದೆ. ತಕ್ಷಣ ಹೊಂಡ ಮುಚ್ಚಿ ನಂತರ ಡಾಂಬರೀಕರಣ ನಡೆಸಬೇಕು’ ಎಂದು ಅಲ್ಲಿನವರು ಆಗ್ರಹಿಸಿದ್ದಾರೆ. ಎಪಿಎಂಸಿ ಗುಂಡ್ಕಲ್, ಮಳಲಗಾಂವ್ ಹಾಗೂ ಚಂದ್ಗುಳಿ ರಸ್ತೆ ಮಾರ್ಗದಲ್ಲಿ ಹೊಂಡ ಬಿದ್ದಿರುವುದನ್ನು ಉಲ್ಲೇಖಿಸಿದ್ದಾರೆ. ನಾಗರಾಜ ಕವಡಿಕೆರೆ, ಸುಬ್ರಹ್ಮಣ್ಯ ಉದ್ದಾಬೈಲ್, ಅಪ್ಪು ಆಚಾರಿ, ನಾರಾಯಣ ಭಟ್ಟ ಶಿರವಳ್ಳಿ, ಬಾಲಚಂದ್ರ ಭಟ್ಟ ಇತರರು ಇದ್ದರು.
Discussion about this post