ತುರ್ತಾಗಿ 50 ಸಾವಿರ ರೂ ಹಣ ನೀಡುವಂತೆ ಚಿತ್ರನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಅವರು ಅಭಿಮಾನಿಗಳ ಮುಂದೆ ಭಿಕ್ಷೆ ಬೇಡಿದ್ದಾರೆ. ಉಪೇಂದ್ರ ಅವರ ಆಪ್ತರು ಮೊಬೈಲ್ ಸಂದೇಶ ನೋಡಿ ಹಣ ವರ್ಗಾಯಿಸಿದ್ದಾರೆ. ಆದರೆ, ಸೈಬರ್ ವಂಚಕರ ಕರಾಮತ್ತಿನಿಂದ ಆ ಹಣ ಉಪೇಂದ್ರ ಅವರ ಕುಟುಂಬಕ್ಕೆ ಸಿಕ್ಕಿಲ್ಲ!
ಪ್ರಿಯಾಂಕ ಅವರು ಆನ್ಲೈನ್ ಮೂಲಕ ಕೆಲ ವಸ್ತುಗಳನ್ನು ಆರ್ಡರ್ ಮಾಡಿದ್ದರು. ವ್ಯಕ್ತಿಯೊಬ್ಬರು ಫೋನ್ ಮಾಡಿ ಆರ್ಡರ್ ಡಿಲೇವರಿಗೆ ವಿಳಾಸ ಕೇಳಿದ್ದರು. ಫೋನ್ ಮಾಡಿದ ಡಿಲೆವರಿ ಬಾಯ್ ಒಂದು ಸಂಖ್ಯೆ ನೀಡಿದ್ದು, ಅದಕ್ಕೆ ಡೈಲ್ ಮಾಡಿದರೆ ಡಿಲೆವರಿ ಕೊಡುವೆ ಎಂದಿದ್ದರು. ಅದಕ್ಕಾಗಿ ಪ್ರಿಯಾಂಕ ಅವರು *# ಟ್ಯಾಗ್ ಹೊಂದಿದ ಸಂಖ್ಯೆಯೊoದಕ್ಕೆ ಡೈಲ್ ಮಾಡಿದ್ದರು. ಅದಾದ ನಂತರ ಪ್ರಿಯಾಂಕ ಅವರ ಮೊಬೈಲ್ ಕೆಲಸ ಮಾಡುವುದನ್ನು ನಿಲ್ಲಿಸಿತು. ತಮ್ಮ ಮೊಬೈಲ್ ಹಾಳಾಗಿರಬಹುದು ಎಂದು ಪ್ರಿಯಾಂಕ ಭಾವಿಸಿದ್ದರು. ಹೀಗಾಗಿ ಅವರು ಉಪೇಂದ್ರ ಅವರ ಮೊಬೈಲಿನಲ್ಲಿಯೂ ಆ ಸಂಖ್ಯೆ ಡೈಲ್ ಮಾಡಿದರು. ಉಪೇಂದ್ರ ಅವರ ಮೊಬೈಲ್ ಸಹ ಆಗ ಕೆಲಸ ಮಾಡುವುದನ್ನು ನಿಲ್ಲಿಸಿತು!
ಅದಾದ ನಂತರ ಪ್ರಿಯಾಂಕ ಉಪೇಂದ್ರ ಅವರ ಮೊಬೈಲಿನಿಂದ ಅನೇಕರಿಗೆ ತುರ್ತು ಹಣ ಅಗತ್ಯವಿರುವ ಬಗ್ಗೆ ಮೆಸೆಜ್ ಹೋಯಿತು. ಅದಾದ ನಂತರ ಉಪೇಂದ್ರ ಅವರ ಮೊಬೈಲಿನಿಂದಲೂ ಹಣದ ಅನಿವಾರ್ಯದ ಬಗ್ಗೆ ಮೆಸೆಜ್ ರವಾನೆಯಾಯಿತು. ತುರ್ತು ಸಂದೇಶ ರವಾನಿಸಿದ ಉಪೇಂದ್ರ ಸ್ನೇಹಿತರು ಹಿಂದೆ-ಮುAದೆ ಯೋಚಿಸದೇ ಹಣ ವರ್ಗಾಯಿಸಿದರು. ಹಣ ವರ್ಗಾವಣೆ ಬಗ್ಗೆ ಉಪೇಂದ್ರ ಅವರಿಗೆ ಆಪ್ತರು ಹೇಳಿದಾಗಲೇ ಮೊಬೈಲ್ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿತು!
ಉಪೇAದ್ರ ಅವರ ಜೊತೆ ಅವರ ಪತ್ನಿ ಪ್ರಿಯಾಂಕ ಅವರು ಐಫೋನ್ ಬಳಕೆ ಮಾಡುತ್ತಿದ್ದಾರೆ. ಲಕ್ಷ ರೂ ಬೆಲೆಯ ಐಫೋನ್’ಅನ್ನು ಬಿಡದೇ ವಂಚಕರು ಹ್ಯಾಕ್ ಮಾಡಿದರು. ಎಲ್ಲರೂ ಐಫೋನ್ ಅತ್ಯಂತ ಸುರಕ್ಷಿತ ಎಂದು ಭಾವಿಸಿದ್ದು, ಅಂಥ ಐಫೋನ್’ನ್ನು ವಂಚಕರು ಹ್ಯಾಕ್ ಮಾಡಿದ್ದರು. ಆ ಪ್ರಮಾಣದಲ್ಲಿ ಭದ್ರತೆ ಹೊಂದಿರುವ ಐಫೋನ್ ಸಹ ಹ್ಯಾಕ್ ಆಗಿರುವುದು ಇದೀಗ ಸಂಚಲನ ಮೂಡಿಸಿದೆ. ಅದರಲ್ಲಿಯೂ ಸ್ಟಾರ್ ನಟ-ನಟಿಯರ ಫೋನ್ ಹ್ಯಾಕ್ ಆಗಿ, ಅವರು ಜನರ ಮುಂದೆ ಭಿಕ್ಷೆ ಬೇಡುತ್ತಿರುವುದು ಸೈಬರ್ ವಂಚಕರ ಕರಾಳತೆಗೆ ನಿದರ್ಶನ ಎಂಬAತಿದೆ.
ಉಪೇAದ್ರ ದಂಪತಿ ಮೊಬೈಲಿನಿಂದ ಮೊದಲು ಇಂಥ ಮೆಸೆಜ್ ಬಂದಾಗ `ಅಭಿಮಾನಿಗಳು ಸಹ ಉಪೇಂದ್ರ ಅವರಿಗೆ ಇಂಥ ಪರಿಸ್ಥಿತಿ ಬರಬಾರದು’ ಎಂದು ಮರುಕವ್ಯಕ್ತಪಡಿಸಿದ್ದರು. ಆಪ್ತರು ಸಹ ಹಣ ಹಾಕಿದ ತರುವಾಯ ಉಪೇಂದ್ರ ಅವರಿಗೆ ಫೋನ್ ಮಾಡಿ ಹಣ ಕಳುಹಿಸದ ವಿಷಯ ತಲುಪಿಸಿದ್ದರು. ಅದಾದ ನಂತರವೇ ಉಪೇಂದ್ರ ದಂಪತಿಗೆ ಮೊಬೈಲ್ ಹ್ಯಾಕ್ ಆದ ವಿಷಯ ಗೊತ್ತಾಗಿದೆ. ತಕ್ಷಣ ಅವರು ಮಾಧ್ಯಮದವರ ನೆರವುಪಡೆದು `ಯಾರೂ ಹಣ ಹಾಕಬೇಡಿ’ ಎಂದಿದ್ದಾರೆ. ತಮ್ಮ ಮೊಬೈಲ್ ಹ್ಯಾಕ್ ಆದ ಬಗ್ಗೆ ಉಪೇಂದ್ರ ದಂಪತಿ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
