ಶಿರಸಿಯ ಗೋಣ್ಸರ ಹಳ್ಳಿಬೈಲ್ ಬಳಿ ತೋಟಕ್ಕೆ ಹೋಗಿದ್ದ ವೃದ್ಧರೊಬ್ಬರು ಅಲ್ಲಿನ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ.
ಗೋಣ್ಸರ ಹಳ್ಳಿಬೈಲ್’ನ ಸುಬ್ಬಾ ಗೌಡ (80) ಅವರು ಕೃಷಿ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದರು. ಈಚೆಗೆ ಅವರು ಪಾರ್ಶವಾಯು ಪೀಡಿತರಾಗಿದ್ದು, ಬಲಭಾಗದ ಸ್ವಾಧೀನ ಕಳೆದುಕೊಂಡಿದ್ದರು. ಅದಾಗಿಯೂ ಅವರು ಆಗಾಗ ತೋಟಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದರು.
ಅದರಂತೆ ಸೆಪ್ಟೆಂಬರ್ 15ರಂದು ಅವರು ತಮ್ಮ ಮನೆ ಬಳಿಯಿರುವ ತೋಟಕ್ಕೆ ಹೋಗಿದ್ದರು. ತೋಟದ ಅಂಚಿನ ಕಾಲುದಾರಿಯಲ್ಲಿ ಸಾಗುತ್ತಿದ್ದರು. ಕಾಲು ಜಾರಿ ಬಾವಿಗೆ ಬಿದ್ದ ಸುಬ್ಬಾ ಗೌಡ ಅವರಿಗೆ ಮೇಲೆಳಲು ಸಾಧ್ಯವಾಗಲಿಲ್ಲ. ನೀರಿನಲ್ಲಿ ಮುಳುಗಿ ಅವರು ಸಾವನಪ್ಪಿದರು.
ತಂದೆಯ ಸಾವಿನ ಬಗ್ಗೆ ಅನಂತ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು.
