ಶಿರಸಿಯ ಡಾ ರಶ್ಮಿ ಹೆಗಡೆ ಅವರು ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಗೆ ಕ್ಯಾಪ್ಟನ್ ಆಗಿ ನೇಮಕವಾಗಿದ್ದಾರೆ. ಡಾ ರಶ್ಮಿ ಅವರಿಗೆ ಸದ್ಯ ಆಂಧ್ರ ಪ್ರದೇಶದ ಸಿಕಂದರಾಬಾದಿನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ.
ಡಾ ರಶ್ಮಿ ಹೆಗಡೆ ಅವರು ಬೊಪ್ಪನಳ್ಳಿಯ ರೋಹಿಣಿ ಮತ್ತು ಲಕ್ಷ್ಮೀನಾರಾಯಣ ಹೆಗಡೆ ಅವರ ಪುತ್ರಿ. ಲಕ್ಷ್ಮೀನಾರಾಯಣ ಹೆಗಡೆ ಅವರು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ ಆಗಿದ್ದರು. ವೈದ್ಯಕೀಯ ಸೇವೆಗೆ ತಮ್ಮ ಕುಟುಂಬದಿAದ ಕೊಡುಗೆ ನೀಡಬೇಕು ಎಂದು ಅವರು ಮಗಳಿಗೆ ಎಂಬಿಬಿಎಸ್ ಓದಿಸಿದ್ದರು.
ಡಾ ರಶ್ಮಿ ಹೆಗಡೆ ಅವರು ತಮ್ಮ ಪ್ರಾಥಮಿಕ ಅಭ್ಯಾಸವನ್ನು ಗೋಕಾಕಿನ ಕೆ ಎಲ್ ಇ ಸಂಸ್ಥೆಯಲ್ಲಿ ಮುಗಿಸಿದ್ದಾರೆ. ಶಿರಸಿಯ ಚೈತನ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ ಕಲಿತಿದ್ದಾರೆ. 2015ರಲ್ಲಿ ಪಿಯುಸಿ ಬೋರ್ಡ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ 4ನೇ ಸ್ಥಾನಪಡೆದಿದ್ದರು. ಅದಾದ ನಂತರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸಿದ ಅವರು ಕಳೆದ ಜನೆವರಿ ತಿಂಗಳಿನಲ್ಲಿ ಕೆಎಂಸಿ ಹುಬ್ಬಳ್ಳಿಯಿಂದ ತಮ್ಮ ಎಂಡಿ ಪದವಿ ಸ್ವೀಕರಿಸಿದ್ದರು.
`ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಕ್ಯಾಪ್ಟನ್ ಆಗಿ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ದೇಶ ಕಾಯುವ ಸೈನಿಕರ ಮತ್ತು ಅವರ ಕುಟುಂಬದವರ ವೈದ್ಯಕೀಯ ಸೇವೆಗೆ ಅವಕಾಶ ಸಿಕ್ಕಿರುವುದಕ್ಕಾಗಿ ಹೆಮ್ಮೆಯಾಗುತ್ತಿದೆ’ ಎಂದು ಡಾ ರಶ್ಮಿ ಹೆಗಡೆ ಅವರು ಪ್ರತಿಕ್ರಿಯಿಸಿದ್ದಾರೆ.
Discussion about this post