ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿಗರು ಯಲ್ಲಾಪುರದಲ್ಲಿ ಶ್ರಮದಾನ ಮಾಡಿದ್ದಾರೆ. ಗ್ರಾಮದೇವಿ ದೇವಸ್ಥಾನ ಆವರಣವನ್ನು ಬಿಜೆಪಿ ಕಾರ್ಯಕರ್ತರು ಸ್ವಚ್ಚಗೊಳಿಸಿದರು.
50ಕ್ಕೂ ಅಧಿಕ ಕಾರ್ಯಕರ್ತರು ದೇಗುಲ ಆವರಣ ಸ್ವಚ್ಚ ಮಾಡಿದರು. ನವರಾತ್ರಿ ಉತ್ಸವ ಹಿನ್ನಲೆ ಗ್ರಾಮದೇವಿ ದೇವಾಲಯದ ಸುತ್ತಲಿನ ಪ್ರದೇಶದಲ್ಲಿದ್ದ ತ್ಯಾಜ್ಯಗಳನ್ನು ಆರಿಸಿದರು. ಜೊತೆಗೆ ನರೇಂದ್ರ ಮೋದಿ ಅವರು ಆಯಸ್ಸು ಹಾಗೂ ಶ್ರೇಯಸ್ಸು ವೃದ್ಧಿಗೆ ದೇವರಲ್ಲಿ ಪ್ರಾರ್ಥಿಸಿದರು.
ಮೋದಿ ಜನ್ಮದಿನದ ಅಂಗವಾಗಿ ಮಂಚಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವೂ ನಡೆಯಿತು. ಈ ಎರಡು ಕಾರ್ಯಕ್ರಮದಲ್ಲಿ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಿದ್ದರು.
Discussion about this post