ಶಿರಸಿಯ ವಾನಳ್ಳಿಯಲ್ಲಿ ಅಂದರ್ ಬಾಹರ್ ಆಟಗಾರರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಎಂಟು ಜೂಜುಕೋರರು ಸಿಕ್ಕಿ ಬಿದ್ದಿದ್ದು, ಅವರೆಲ್ಲರ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಸೆಪ್ಟೆಂಬರ್ 15ರ ರಾತ್ರಿ ವಾನಳ್ಳಿ ಬಿಲ್ಲುಗದ್ದೆಯ ಟಾಕ್ರು ಮರಾಠಿ ಮನೆ ಬಳಿ ಅಂದರ್ ಬಾಹರ್ ಆಟ ನಡೆಯುತ್ತಿತ್ತು. ರಾತ್ರಿ 11.30ಕ್ಕೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತು. ಶಿರಸಿ ಗ್ರಾಮೀಣ ಠಾಣೆಯ ಪಿಎಸ್ಐ ಅಶೋಕ ರಾಥೋಡ್ ಅವರು ತಮ್ಮ ತಂಡದ ಜೊತೆ ಟಾಕ್ರು ಮರಾಠಿ ಅವರ ಮನೆ ಹತ್ತಿರ ಹೋದರು.
ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಬಿಲ್ಲುಗದ್ದೆಯ ಗಣಪತಿ ಮರಾಠಿ, ದಿವಾಕರ ಮರಾಠಿ, ಹರಿಯಪ್ಪ ಮರಾಠಿ, ಪರಮೇಶ್ವರಿ ಮರಾಠಿ, ಸಂತೋಷ ಮರಾಠಿ, ಗೋಪಾಲ ಮರಾಠಿ ಚಾಪೆ ಹಾಸಿಕೊಂಡು ಕೂತಿದ್ದರು. ಕೋಳಿಗಾರ ಮಾಣೆಮನೆಯ ಲಕ್ಷö್ಮಣ ಗೌಡ ಹಾಗೂ ಅರಸಾಪುರ ಮಲ್ಲೆನಳ್ಳಿಯ ಸಂತೋಷ ಗೌಡ ಸಹ ಅಲ್ಲಿದ್ದರು. ಈ ಎಲ್ಲರೂ ಸೇರಿ ಇಸ್ಪಿಟ್ ಎಲೆಗಳನ್ನು ಹರಡಿಕೊಂಡು ಅಲ್ಲಿ ಹಣ ಹೂಡಿದ್ದರು. ಜೂಜುಕೋರರು ಆಟವಾಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿ ಸಿಕ್ಕ 3 ಸಾವಿರ ರೂ ಹಣವನ್ನು ವಶಕ್ಕೆಪಡೆದರು. ಪಿಎಸ್ಐ ಅಶೋಕ ರಾಥೋಡ್ ಜೂಜುಕೋರರನ್ನು ಹಿಡಿದು ಪ್ರಕರಣ ದಾಖಲಿಸಿದರು.
