ಮೇಷ ರಾಶಿ: ಸಕಾರಾತ್ಮಕ ಚಿಂತನೆ ನಿಮ್ಮ ಶಕ್ತಿ ಹೆಚ್ಚಿಸಲಿದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.
ವೃಷಭ ರಾಶಿ: ಸರಿಯಾಗಿ ಕೆಲಸ ಮಾಡಿದರೆ ನಿಮ್ಮ ಆದಾಯ ದ್ವಿಗುಣವಾಗಲಿದೆ. ಈ ದಿನ ಯಾರಿಗೂ ಸಾಲ ಕೊಡಬೇಡಿ. ವಿರೋಧಿಗಳ ಬಗ್ಗೆ ಎಚ್ಚರಿಕೆ ಅಗತ್ಯ.
ಮಿಥುನ ರಾಶಿ: ದೂರದ ಊರಿನ ಪ್ರವಾಸ ಯೋಗವಿದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸೌಲಭ್ಯಗಳು ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ಕಾಣಬಹುದು.
ಕರ್ಕ ರಾಶಿ: ನಿಮ್ಮ ಹೂಡಿಕೆಯ ಯೋಜನೆಗಳು ಉತ್ತಮವಾಗಿ ಬೆಳೆಯಲಿದೆ. ಆಸ್ತಿ, ವಾಹನ ಖರೀದಿಗೂ ಯೋಗ್ಯ ದಿನ. ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸಿ.
ಸಿಂಹ ರಾಶಿ: ನಿಮ್ಮ ಉದ್ಯೋಗ ಉತ್ತಮವಾಗಿರಲಿದೆ. ಆದಾಯ ಕಡಿಮೆ ಆಗಿ ಖರ್ಚು ಜಾಸ್ತಿ ಆಗುವ ಸಾಧ್ಯತೆಯಿದೆ.
ಕನ್ಯಾ ರಾಶಿ: ನೀವು ಮಾಡುವ ಉದ್ಯೋಗದಲ್ಲಿ ಗೌರವ ಸಿಗಲಿದೆ. ಹೊಸ ಯೋಜನೆಗಳಿಗೂ ಈ ದಿನ ಉತ್ತಮವಾಗಿದೆ.
ತುಲಾ ರಾಶಿ: ನಿಮ್ಮ ಶತ್ರುಗಳು ನಿಮ್ಮನ್ನು ಸೋಲಿಸುವ ಪ್ರಯತ್ನ ಮಾಡುತ್ತಿದ್ದು, ನೀವು ಅವರನ್ನು ಗೆಲ್ಲಲು ಶ್ರಮ ಅಗತ್ಯ. ಯೋಗ್ಯ ಕಡೆ ಹಣ ಹೂಡಿಕೆ ಮಾಡಿದರೆ ಲಾಭವಿದೆ.
ವೃಶ್ಚಿಕ ರಾಶಿ: ರೈತರು ಹಾಗೂ ಶ್ರಮಿಕರಿಗೆ ಈ ದಿನ ಉತ್ತಮವಾಗಿದೆ. ನಿಮಗೆ ಕಾಡುತ್ತಿರುವ ಸಮಸ್ಯೆಗಳು ದೂರವಾಗಲಿದೆ.
ಧನು ರಾಶಿ: ನಿಮ್ಮ ಮನಸ್ಸಿನಲ್ಲಿರುವ ಕಾರ್ಯ ಸರಾಗವಾಗಿ ಸಾಗಲಿದೆ. ಸ್ನೇಹಿತರ ಸಲಹೆಪಡೆದು ಕಾರ್ಯ ಶುರು ಮಾಡಿ.
ಮಕರ ರಾಶಿ: ನಿಮ್ಮ ಕುಟುಂಬದವರು ಸದಾ ಜೊತೆಗಿರುತ್ತಾರೆ. ಸುರಕ್ಷಿತ ಹೂಡಿಕೆ ಕಡೆ ಗಮನಕೊಡಿ.
ಕುಂಭ ರಾಶಿ: ಧ್ಯಾನ ಮಾಡುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ. ಸಹಚರರ ಬೆಂಬಲದಿAದ ಉದ್ಯೋಗದಲ್ಲಿ ಗೆಲುವು ಸಾಧ್ಯ.
ಮೀನ ರಾಶಿ: ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಬೇರೆಯವರ ಸಲಹೆ ಪಡೆಯಬೇಡಿ. ನಿಮ್ಮ ನಿರ್ಧಾರಗಳನ್ನು ನೀವೇ ಪ್ರಕಟಿಸಿ. ನಂಬಿಕೆದ್ರೋಹವಾಗುವ ಸಾಧ್ಯತೆಗಳಿವೆ.
Discussion about this post