ಕವಳಕ್ಕೆ ವೀಳ್ಯದೆಲೆ ತರಲು ಹೋಗಿದ್ದ ಯಲ್ಲಾಪುರದ ಗಣಪತಿ ಗಾಂವ್ಕರ್ ಅವರು ಏಣಿ ಅಡಿಭಾಗದ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಹೀಗಾಗಿ 96 ವರ್ಷದ ಅವರ ಜೀವನ ಈ ದಿನ ಅಂತ್ಯವಾಗಿದೆ.
ಯಲ್ಲಾಪುರದ ವಾಗಳ್ಳಿಯಲ್ಲಿ ಗಣಪತಿ ಗಾಂವ್ಕರ್ ಅವರು ವಾಸವಾಗಿದ್ದರು. ಉತ್ತಮ ಕೃಷಿಕರಾಗಿದ್ದ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಅಲ್ಪ-ಸ್ವಲ್ಪ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 18ರಂದು ವೀಳ್ಯದ ಎಲೆ ತರಲು ಅವರು ತಮ್ಮ ತೋಟಕ್ಕೆ ಹೋಗಿದ್ದರು.
ಬೆಳಗ್ಗೆ 6.30ಕ್ಕೆ ತೋಟಕ್ಕೆ ಹೋದ ಅವರು ಬಾವಿ ಪಕ್ಕದಲ್ಲಿರುವ ಅಡಿಕೆ ಮರಕ್ಕೆ ಎಣಿ ಹಾಕಿದರು. ವೀಳ್ಯದ ಎಲೆ ಕೊಯ್ಯುವಾಗ ಏಣಿಯಿಂದ ಕಾಲು ಜಾರಿ ಬಿದ್ದರು. ಅವರು ನೇರವಾಗಿ ಬಾವಿಯೊಳಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಉಸಿರುಕಟ್ಟಿತು. ಅಲ್ಲಿಯೇ ಅವರು ಕೊನೆಯುಸಿರೆಳೆದರು.
ಬೆಳಗ್ಗೆ 8.30ರ ವೇಳೆಗೆ ಗಣಪತಿ ಗಾಂವ್ಕರ್ ಅವರ ಮಗ ಚಂದ್ರಶೇಖರ ಗಾಂವ್ಕರ್ ಅವರು ತಂದೆಯನ್ನು ಹುಡುಕುತ್ತ ತೋಟದ ಕಡೆ ಹೋಗಿದ್ದರು. ಆಗ, ಬಾವಿಯಲ್ಲಿ ಗಣಪತಿ ಗಾಂವ್ಕರ್ ಅವರು ತೇಲುತ್ತಿರುವುದು ಕಾಣಿಸಿತು. ಅಡಿಕೆ ಮರಕ್ಕೆ ಹಾಕಿದ ಏಣಿ ಜಾರಿರುವುದು ಹಾಗೂ ವೀಳ್ಯದೆಲೆ ಕೊಯ್ಯಲು ಹೋಗಿ ಅವರು ಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿತು. ಈ ಹಿನ್ನಲೆ ಚಂದ್ರಶೇಖರ ಗಾಂವ್ಕರ್ ಅವರು ತಂದೆ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
Discussion about this post