ಅಂಕೋಲಾ ಅಡ್ಲೂರಿನ ತರಂಗ ಹೊಟೇಲ್ ಬಳಿ ಟ್ಯಾಂಕರ್ ಹಾಗೂ ಬಸ್ಸಿನ ನಡುವೆ ಅಪಘಾತವಾಗಿದೆ. ಈ ಅವಘಡದಲ್ಲಿ ಇಬ್ಬರು ಅಲ್ಲಿಯೇ ಸಾವನಪ್ಪಿದ್ದಾರೆ.
ಗುರುವಾರ ಹುಬ್ಬಳ್ಳಿ ಮಾರ್ಗವಾಗಿ ಟ್ಯಾಂಕರ್ ಚಲಿಸುತ್ತಿತ್ತು. ಇದೇ ವೇಳೆ ಮಕ್ಕಿಗದ್ದೆಯಿಂದ ಅಂಕೋಲಾ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ಸು ಸಂಚರಿಸುತ್ತಿತ್ತು. ಈ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತು.
ಅಪಘಾತದ ರಭಸಕ್ಕೆ ಬಸ್ಸಿನಲ್ಲಿದ್ದ ಅನೇಕರು ಗಾಯಗೊಂಡರು. ಕೇಣಿ ಮೂಲದ ಬಸ್ಸಿನ ಪ್ರಯಾಣಿಕ ಭಾಸ್ಕರ ಪಾಂಡುರoಗ ಗಾಂವ್ಕರ್ ಅವರು ಕೊನೆಯುಸಿರೆಳೆದರು. ಜೊತೆಗೆ ಟ್ಯಾಂಕರ್ ಚಾಲಕ ಸಹ ತಮ್ಮ ವಾಹನದಲ್ಲಿಯೇ ಪ್ರಾಣ ಬಿಟ್ಟರು.
ಒಂದು ವಾಹನವನ್ನು ಮತ್ತೊಂದು ವಾಹನ ಹಿಂದಿಕ್ಕುವ ಅವಸರದಲ್ಲಿ ಈ ಅಪಘಾತ ನಡೆದಿದೆ. ಎರಡು ವಾಹನಗಳು ಜಖಂ ಆಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರು ಸಹ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
Discussion about this post