ಕಾರವಾರ ಕಾಡಿನಲ್ಲಿ 20 ದಿನದ ಹಿಂದೆ ಕೊಲೆ ನಡೆದಿದ್ದು, ಪೊಲೀಸರು ಆ ಪ್ರಕರಣ ಬೇದಿಸಿದ್ದಾರೆ. ಚಿತ್ತಾಕುಲ ಪಿಎಸ್ಐ ಆಗಿ ಅಧಿಕಾರವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪಿಎಸ್ಐ ಪರಶುರಾಮ ಮಿರ್ಚಗಿ ಕೊಲೆ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.
ಬೀದರದ ಇಸ್ಮಾಯಲ್ ವಹಿದ್ ಧಪೆದಾರ್ ಎಂಬಾತರು ತಮ್ಮ ಪತ್ನಿ ಪರ್ವೀನ್ (45) ಅವರನ್ನು ಕಾರವಾರದ ಹಳಗಾ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಊಟದಲ್ಲಿ ವಿಷ ಬೆರೆಸಿದ್ದರು. ಅದಾದ ನಂತರ ಪರ್ವೀನ್ ಅವರು ತಲೆ ಸುತ್ತಿ ಬಿದ್ದಿದ್ದು, ಇಸ್ಮಾಯಲ್ ಧಪೆದಾರ್ ಜೊತೆ ಅವರ ಸ್ನೇಹಿತ ಅಜುಮುದ್ದೀನ್ ಹಾಗೂ ಇನ್ನಿಬ್ಬರು ಅವರನ್ನು ಕಾರಿನಲ್ಲಿ ತುಂಬಿದ್ದರು. ಅದಾದ ನಂತರ ಫರ್ವೀನ್ ಅವರನ್ನು ಕೊಲೆ ಮಾಡಿ ಕಾರಿನಿಂದ ಕಾಡಿಗೆ ಎಸೆದಿದ್ದರು.
ಅದಾದ ನಂತರ ಇಸ್ಮಾಯಲ್ ಪತ್ನಿ ಕಾಣೆಯಾಗಿರುವ ಬಗ್ಗೆ ಪೊಲೀಸ್ ದೂರು ನೀಡಿದರು. 20 ದಿನಗಳ ನಂತರ ಮಹಿಳೆಯೊಬ್ಬರ ಶವ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಪೊಲೀಸರು ಅದರ ಬೆನ್ನತ್ತಿದರು. ಪತ್ನಿ ಕಾಣೆಯಾಗಿರುವ ಬಗ್ಗೆ ಹೇಳಿದ್ದ ಇಸ್ಮಾಯಲ್ ಅವರನ್ನು ಸ್ಥಳಕ್ಕೆ ಕರೆಯಿಸಿದರು. ತನಿಖೆ ನಡೆಸಿದಾಗ ಸಾವನಪ್ಪಿದ ಮಹಿಳೆಗೆ 6 ಮಕ್ಕಳಿರುವುದು ಗೊತ್ತಾಯಿತು. ಅವರೆಲ್ಲರೂ ಮದುವೆಯಾಗಿ ಬೇರೆ ಬೇರೆ ಕಡೆ ವಾಸಿಸುತ್ತಿದ್ದರು. ಇನ್ನು ಹೆಚ್ಚಿನ ತನಿಖೆ ನಡೆಸಿದಾಗ ಇಸ್ಮಾಯಲ್ ಧಪೆದಾರ್ ಹಾಗೂ ಪರ್ವೀನ್ ನಡುವೆ ವೈಮನಸ್ಸು ಮೂಡಿರುವುದು ಪೊಲೀಸರ ಅರಿವಿಗೆ ಬಂದಿತು. ಇಸ್ಮಾಯಲ್ ಧಪೆದಾರ್ ಪತ್ನಿಯ ಮೇಲೆ ಸಾಕಷ್ಟು ಅನುಮಾನ ಹೊಂದಿರುವುದು ಗೊತ್ತಾಯಿತು.
ಪತ್ನಿ ಮೇಲಿನ ಸಂಶಯದಿAದಾಗಿ ಇಸ್ಮಾಯಲ್ ಧಪೆದಾರ್ ಅವರು ಫರ್ವಿನಾ ಅವರನ್ನು ಕೊಲೆ ಮಾಡಿದ್ದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ. ಈ ಹಿನ್ನಲೆ ಪೊಲೀಸರು ಕೊಲೆಗಾರನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಅವರ ಹುಡುಕಾಟ ನಡೆದಿದೆ.
