ಕಾರವಾರದ ಕಣಸಗೇರಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಡಳಿತ ಆಸಕ್ತಿವಹಿಸಿದ್ದು, ಇದಕ್ಕೆ ಆ ಭಾಗದ ಜನರ ವಿರೋಧವ್ಯಕ್ತವಾಗಿದೆ. ವಿರೋಧದ ನಡುವೆಯೂ ಕಸ ವಿಲೇವಾರಿ ಘಟಕ ಸ್ಥಾಪಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
`ಚಿತ್ತಾಕುಲ ಪಂಚಾಯತ್ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆ ಸರಿಯಾಗಿಲ್ಲ. ತ್ಯಾಜ್ಯ ಘಟಕದಿಂದ ಅಲ್ಲಿನ ಮಕ್ಕಳು ಅಸ್ವಸ್ಥರಾಗಿದ್ದು, ಅದೇ ಮಾದರಿಯಲ್ಲಿ ಕಣಸಗಿರಿಯಲ್ಲಿ ಕಸದ ಘಟಕ ಬೇಡ’ ಎಂದು ಜನ ಒತ್ತಾಯಿಸಿದ್ದಾರೆ. `ಚಿತ್ತಾಕುಲ ಕಸದ ಘಟಕವನ್ನು ಕಣಸಗಿರಿಗೆ ತರುವ ಪ್ರಯತ್ನ ನಡೆದಿದ್ದು, ಅದಕ್ಕೂ ವಿರೋಧವಿದೆ’ ಎಂದಿದ್ದಾರೆ.
`ಈ ಊರಿಗೆ ಕಸ ವಿಲೇವಾರಿ ಘಟಕ ಬಂದರೆ ನೂರಾರು ಜನ ಸಮಸ್ಯೆ ಅನುಭವಿಸಲಿದ್ದಾರೆ. ಮನುಷ್ಯರ ಜೊತೆ ವನ್ಯಜೀವಿಗಳಿಗೂ ಸಮಸ್ಯೆ ಆಗಲಿದೆ. ಪರಿಸರ, ಮಾನವ ಜೀವಕ್ಕೆ ಕುತ್ತು ತರುವ ಈ ಯೋಜನೆ ಇಲ್ಲಿ ಬೇಡ’ ಎಂದು ಹೇಳಿದ್ದಾರೆ.
Discussion about this post