ಯೂಟೂಬ್ ಮೂಲಕ ಕಾಮಿಡಿ ವಿಡಿಯೋ ಹರಿಬಿಡುವ ಕ್ವಾಜಾ ಬಂದೇನ್ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರು ಮುಂಡಗೋಡಿನ ವಿಳಾಸ ನೀಡಿ ಮದುವೆ ಆಗಿದ್ದಾರೆ. ಮುಸ್ಲಿಂ ಸಮುದಾಯದ ಅವರು ಮುಂಡಗೋಡು ನೋಂದಣಾಧಿಕಾರಿ ಕಚೇರಿಯಲ್ಲಿ ಹಿಂದು ಹುಡುಗಿಯನ್ನು ವರಿಸಿದ್ದಾರೆ. ಜಾಲತಾಣದಲ್ಲಿ ಈ ವಿಷಯ ವೈರಲ್ ಆಗಿದ್ದು, ಹಿಂದು ಸಂಘಟನೆಯವರು ಲವ್ ಜಿಹಾದ್ ನಡೆದ ಬಗ್ಗೆ ಆರೋಪಿಸಿದ್ದಾರೆ.
ಕ್ವಾಜಾ ಬಂದೇನ್ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರು `ಮುಕಳೆಪ್ಪಾ ಕಾಮಿಡಿ’ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದಿದ್ದಾರೆ. `ಹಿಂದು ಯುವತಿಯರನ್ನು ಬಳಸಿಕೊಂಡು ಹಿಂದುತ್ವವನ್ನು ಟೀಕಿಸಿ ಅವರು ಅವರು ಕಾಮಿಡಿ ಮಾಡುತ್ತಾರೆ’ ಎಂಬ ಆರೋಪವೂ ಇದೆ. ಸದ್ಯ ಕ್ವಾಜಾ ಬಂದೇನ್ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರು ಧಾರವಾಡದ ಗಾಯತ್ರಿ ಎಂಬಾತರನ್ನು ಮದುವೆ ಆಗಿದ್ದಾರೆ. ಆದರೆ, ಅವರು ಮುಂಡಗೋಡಿನ ವಿಳಾಸ ನೀಡಿ ಮದುವೆ ಆಗಿದ್ದು, ಮುಂಡಗೋಡು ನೋಂದಣಾಧಿಕಾರಿ ಕಚೇರಿಯಲ್ಲಿ ಅವರ ವಿವಾಹ ನೋಂದಣಿಯಾಗಿದೆ.
ವಿವಾಹ ನೋಂದಣಿ ವೇಳೆ ಕ್ವಾಜಾ ಬಂದೇನ್ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರು ಮುಂಡಗೋಡಿನ ಗಾಂಧೀನಗರದ ವಿಳಾಸ ಕೊಟ್ಟಿದ್ದಾರೆ. ಮುಂಡಗೋಡಿನ ಆ ವಿಳಾಸದಲ್ಲಿ ಅವರ ದೂರದ ಸಂಬoಧಿ ಇದ್ದು, ಅದೇ ತಮ್ಮ ಮನೆ ಎಂದು ಬಿಂಬಿಸಿದ್ದಾರೆ. ಸ್ವಂತ ಊರು ಅಥವಾ ಹುಡುಗಿಯ ಊರಿನಲ್ಲಿ ವಿವಾಹವಾದರೆ ಗಲಾಟೆ ಆಗುವ ಸಾಧ್ಯತೆ ಹಿನ್ನಲೆ ಅವರು ಮುಂಡಗೋಡಿಗೆ ಬಂದು ಮದುವೆ ಆಗಿರುವ ಬಗ್ಗೆ ಅಂದಾಜಿಸಲಾಗಿದೆ. ಮದುವೆ ಆದ ಕೆಲ ದಿನಗಳ ನಂತರ ಅವರು ತಮ್ಮ ಯೂಟೂಬಿನಲ್ಲಿ ಮದುವೆ ಚಿತ್ರಗಳನ್ನು ಹಂಚಿಕೊoಡಿದ್ದಾರೆ.
ಸದ್ಯ ಮುಕೆಳೆಪ್ಪಾ ಕಾಮಿಡಿ ವಿರುದ್ಧ ಬಜರಂಗದಳ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. `ಮುಕಳೆಪ್ಪ ಅವರು ಸುಳ್ಳು ದಾಖಲೆ ನೀಡಿ ಹಿಂದು ಯುವತಿಯನ್ನ ಮದುವೆಗಿದ್ದಾರೆ’ ಎಂದವರು ದೂರಿದ್ದಾರೆ. `ಮೊದಲಿನಿಂದಲೂ ಹಿಂದು ಯುವತಿಯರನ್ನು ಗುರಿಯಾಗಿರಿಸಿಕೊಂಡು ಅವರ ಜೊತೆ ಮುಕೆಳೆಪ್ಪಾ ಕಾಮಿಡಿ ವಿಡಿಯೋ ಮಾಡುತ್ತಿದ್ದು, ಹಿಂದು ಧರ್ಮಕ್ಕೆ ಅವಮಾನ ಮಾಡುವ ರೀತಿ ವರ್ತಿಸುತ್ತಿದ್ದರು. ಇದೀಗ ಲವ್ ಜಿಹಾದ್ ಮೂಲಕ ಹಿಂದು ಯುವತಿಯನ್ನು ಮದುವೆ ಆಗಿದ್ದಾರೆ’ ಎಂದು ದೂರಿದ್ದಾರೆ. ಧಾರವಾಡ ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ.
Discussion about this post