ಮೇಷ ರಾಶಿ: ನಿಮ್ಮ ಕೆಲಸದ ಒತ್ತಡ ಹೆಚ್ಚಾಗಲಿದೆ. ಅದಕ್ಕೆ ತಕ್ಕ ಪ್ರತಿಫಲವೂ ಸಿಗಲಿದೆ. ಈ ದಿನ ನೀವು ಯಾರಿಂದಲೂ ಸಾಲಪಡೆಯದಿರುವುದು ಒಳಿತು. ಆದಾಯ ವೃದ್ಧಿಗಾಗಿ ಬೇರೆ ದಾರಿಗಳನ್ನು ಹುಡುಕಿ.
ವೃಷಭ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರಿಕೆವಹಿಸುವುದು ಉತ್ತಮ. ನಿಯಮಿತ ಆಹಾರ ಸೇವನೆ ನಿಮಗೆ ಉಪಕಾರಿ ಆಗಲಿದೆ. ಹಣಕಾಸು ವಿಷಯದಲ್ಲಿ ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ.
ಮಿಥುನ ರಾಶಿ: ನಿಮ್ಮ ನಡೆ-ನುಡಿ ನೇರವಾಗಿರಲಿ. ಗೊಂದಲಗಳಿಗೆ ಅವಕಾಶ ಕೊಡಬೇಡಿ. ನಿಮ್ಮ ನಿರ್ಧಾರಗಳು ಸ್ಪಷ್ಠವಾಗಿದ್ದರೆ ಒಳಿತು.
ಕರ್ಕ ರಾಶಿ: ಕೌಟುಂಬಿಕ ಕಲಹಗಳು ದೂರವಾಗಿ ಸಮಾಧಾನ ಸಿಗಲಿದೆ. ಹಳೆಯ ಕೆಲಸಗಳು ಶೀಘ್ರದಲ್ಲಿ ಮುಗಿಯುವ ಲಕ್ಷಣವಿದೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಕ್ರಿಯಾಶೀಲತೆಯನ್ನು ರೂಢಿಸಿಕೊಳ್ಳಿ.
ಸಿಂಹ ರಾಶಿ: ನಿಮ್ಮ ಉದ್ಯೋಗ ಹಾಗೂ ವ್ಯವಹಾರ ಅಭಿವೃದ್ಧಿ ಆಗುವ ಮುನ್ಸೂಚನೆ ಸಿಗಲಿದೆ. ಆರ್ಥಿಕ ವ್ಯವಹಾರ ಹೆಚ್ಚಳ ಆಗಲಿದೆ. ಉತ್ತಮವಾದ ಹೂಡಿಕೆ ಭವಿಷ್ಯದಲ್ಲಿ ನೆರವಿಗೆ ಬರಲಿದೆ.
ಕನ್ಯಾ ರಾಶಿ: ನಿಮ್ಮ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ನಿಮ್ಮನ್ನು ಅನೇಕ ದಿನಗಳಿಂದ ಕಾಡುವ ಚಿಂತೆಗೆ ಪರಿಹಾರ ಸಿಗಲಿದೆ. ನಿರಂತರ ಕೆಲಸ ಫಲ ಕೊಡಲಿದೆ.
ತುಲಾ ರಾಶಿ: ನಿಮ್ಮ ಆರ್ಥಿಕ ವಿಷಯಗಳ ಬಗ್ಗೆ ಒಮ್ಮೆ ವಿಮರ್ಶೆ ಮಾಡಿಕೊಳ್ಳಿ. ಹೊಸ ಹೊಸ ಅವಕಾಶಗಳನ್ನು ಸರಿಯಾಗಿ ಹುಡುಕಿ. ಸಾಧನೆ ಮಾಡಲು ಇನ್ನು ಸಾಕಷ್ಟು ಪ್ರಯತ್ನ ಅಗತ್ಯವಿದೆ.
ವೃಶ್ಚಿಕ ರಾಶಿ: ನಿಮ್ಮ ಉದ್ದಿಮೆಯನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಲು ಯೋಜನೆ ರೂಪಿಸಿ. ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ. ಬೆಂಬಲಿಗರ ಸಹಕಾರವನ್ನು ಸ್ಮರಿಸಿ
ಧನು ರಾಶಿ: ಬಾಕಿಯಿರುವ ಕೆಲಸಗಳನ್ನು ಇಂದು ಮಾಡಿ ಮುಗಿಸಲು ಪ್ರಯತ್ನಿಸಿ. ನಿಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ತೆರೆಯುವ ಸಾಧ್ಯತೆಗಳಿವೆ. ಅವಕಾಶಗಳನ್ನು ಒಪ್ಪಿಕೊಂಡು ಮುನ್ನಡೆಯಿರಿ.
ಮಕರ ರಾಶಿ: ಕೆಲಸದ ವಿಷಯದಲ್ಲಿ ಬದಲಾವಣೆ ಆಗಲಿದೆ. ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಕುಟುಂಬದವರ ಜೊತೆ ಕಾಲ ಕಳೆಯಿರಿ.
ಕುಂಭ ರಾಶಿ: ನಿಮ್ಮ ಆಪ್ತರು ನಿಮಗೆ ಆಸರೆ ಆಗಲಿದ್ದಾರೆ. ಹೊಸ ಬಗೆಯ ಯೋಜನೆಗಳನ್ನು ರೂಪಿಸಲು ಉತ್ತಮ ಸಮಯ. ಕೆಲಸ ಮಾಡುವ ಸ್ಥಳದಲ್ಲಿ ಗೌರವ ಸಿಗಲಿದೆ.
ಮೀನ ರಾಶಿ: ನಿಮ್ಮ ಸಂಪರ್ಕವೇ ನಿಮಗೆ ಶಕ್ತಿ. ನಿಮ್ಮ ಬಲ ಹೆಚ್ಚಿಸಿಕೊಂಡು ಆರ್ಥಿಕ ಹೂಡಿಕೆ ಬಗ್ಗೆ ಯೋಚಿಸಿ. ಕುಟುಂಬದವರ ಜೊತೆ ಮಾತನಾಡಿ, ಆಸಕ್ತಿಯ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
Discussion about this post