ಉತ್ತರ ಕನ್ನಡ ಜಿಲ್ಲೆಯ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಭಂಡಾರಿ ಸಮುದಾಯದವರನ್ನು ಸರ್ಕಾರ ಸವಿತಾ ಸಮಾಜಕ್ಕೆ ಸೇರಿಸಿದೆ. ಹೆಸರಿನ ಜೊತೆ ದೇಶಭಂಡಾರಿ ಎಂಬ ಪದನಾಮ ಹೊಂದಿದವರನ್ನು ಮಾತ್ರ ಸರ್ಕಾರ ಆ ಸಮುದಾಯಕ್ಕೆ ಸೇರಿಸಿದ್ದರಿಂದ ನಿಜವಾಗಿಯೂ ಭಂಡಾರಿ ಸಮುದಾಯದವರ ಸಂಖ್ಯೆ ಏಳು ಸಾವಿರಕ್ಕೆ ಇಳಿಕೆಯಾಗಿದೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಂಕಣಿ ಮಾತನಾಡುವ ಭಂಡಾರಿ ಸಮುದಾಯದವರು ವಾಸವಾಗಿದ್ದಾರೆ. ಇದೇ ಸಮುದಾಯದ ಕೆಲವರು ಕಾರವಾರ ಸೇರಿ ಕೆಲ ಭಾಗದಲ್ಲಿ ದೇಶಭಂಡಾರಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಕುಮಟಾ, ಶಿರಸಿ, ಹೊನ್ನಾವರ ಭಾಗದಲ್ಲಿ ಭಂಡಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸರ್ಕಾರ ಭಂಡಾರಿ ಸಮುದಾಯದವರನ್ನು ದೇಶಭಂಡಾರಿ ಸಮುದಾಯದ ಲೆಕ್ಕಾಚಾರದಲ್ಲಿ ಸೇರಿಸಿಲ್ಲ. ಹೀಗಾಗಿ ಸರ್ಕಾರದ ಲೆಕ್ಕಾಚಾರದ ಪ್ರಕಾರ ಈ ಸಮುದಾಯದವರು ಬರೇ ಏಳು ಸಾವಿರ ಜನ ಮಾತ್ರ ಇದ್ದಾರೆ!
ಭಂಡಾರಿ ಹಾಗೂ ದೇಶಭಂಡಾರಿ ಎರಡು ಒಂದೇ ಸಮುದಾಯವಾಗಿದ್ದು ಸರ್ಕಾರ ಅನಗತ್ಯವಾಗಿ ಅವರಿಬ್ಬರನ್ನು ಪ್ರತ್ಯೆಕವಾಗಿ ತೋರಿಸಿದೆ. ಸರ್ಕಾರ ಈಚೆಗೆ ಆರ್ಯ ಈಡಿಗ ಬಿಲ್ಲವ ಮಾಡಿದ ಸಮುದಾಯದವರು ಕುಲ ಅಧ್ಯಯನ ಸಮಿತಿ ಮಾಡಿದ್ದು, ಆ ಪಟ್ಟಿಯಲ್ಲಿರುವ 26 ಸಮುದಾಯದಲ್ಲಿ ದೇಶಭಂಡಾರಿ ಇದೆ. ಆದರೆ, ಆ ಪಟ್ಟಿಯಲ್ಲಿ ಭಂಡಾರಿ ಸಮುದಾಯದವರಿಗೆ ಸ್ಥಾನ ಸಿಕ್ಕಿಲ್ಲ. ಸರ್ಕಾರ ರಚಿಸಿದ ಆರ್ಯ ಈಡಿಗ ಬಿಲ್ಲವ ಸಮಾಜದ ಕುಲ ಅಧ್ಯಯನ ಸಮಿತಿಯೂ ಕುಲ ಕಸುಬಿನ ಆಧಾರದಲ್ಲಿ ಜಾತಿ ಲೆಕ್ಕಾಚಾರ ಮಾಡಿದ್ದು, ಆ ವೇಳೆ ಅನೇಕ ತಪ್ಪುಗಳಾಗಿವೆ.
ಈ ಎಲ್ಲಾ ಹಿನ್ನಲೆ ಭಂಡಾರಿ ಹಾಗೂ ದೇಶಭಂಡಾರಿ ಸಮುದಾಯದವರು ಒಂದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರನ್ನು ಭೇಟಿ ಆಗಿದ್ದಾರೆ. `ಭಂಡಾರಿ ಹಾಗೂ ದೇಶಭಂಡಾರಿ ಸಮುದಾಯ ಬೇರೆ ಬೇರೆ ಅಲ್ಲ. ಹೀಗಾಗಿ ಈ ಎರಡು ಹೆಸರಿನವರಿಗೆ ಒಂದೇ ಸಂಖ್ಯೆ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜ ಉನ್ನತಿ ಸಂಘದ ಜಿಲ್ಲಾಧ್ಯಕ್ಷ ಅರುಣ ಮಣಕೀಕರ, ಕಾರ್ಯದರ್ಶಿ ನಾಗರಾಜ ಭಂಡಾರಿ, ಪ್ರಮುಖರಾದ ಶಂಕರ ದೇಶಭಂಡಾರಿ, ಸದಾನಂದ ಮಾಜ್ರೇಂಕರ್, ಜಗದೀಶ ದೇಶಭಂಡಾರಿ ,ಶ್ರೀಕಾಂತ ದೇಶಭಂಡಾರಿ, ಬಾಬು ಭಂಡಾರಿ ಹಳದೀಪುರ ಇನ್ನಿತರರು ಈ ಬಗ್ಗೆ ಚರ್ಚಿಸಿದರು.
Discussion about this post