ಯಲ್ಲಾಪುರ ಪಟ್ಟಣದಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಭಾನುವಾರ ಯಲ್ಲಾಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಪ್ರಯಾಣಿಕರಿದ್ದ ಬಸ್ಸು ಸಂಚರಿಸುತ್ತಿತ್ತು. ಸಂತೆ ಮುಗಿಸಿ ಮನೆ ಕಡೆ ಮರಳುತ್ತಿದ್ದವನಿಗೆ ಬಸ್ಸು ಗುದ್ದಿತು. ಬಸ್ಸು ವೇಗವಾಗಿದ್ದು, ಬೈಕನ್ನು ತಳ್ಳಿಕೊಂಡು ಅನತಿ ದೂರದವರೆಗೆ ಸಂಚರಿಸಿತು. ಬಸ್ಸಿನ ಚಕ್ರಕ್ಕೆ ಬೈಕು ಸಿಲುಕಿದ್ದು, ಜಖಂ ಆಯಿತು.
ಪಟ್ಟಣದ ಟಿಎಂಎಸ್ ಪೆಟ್ರೋಲ್ ಬಂಕಿನ ಬಳಿ ಈ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಬೈಕಿನ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಆ ಬೈಕು ಉಳವಿಯ ಚಂದ್ರಶೇಖರ ಗೌಡ ಎಂಬಾತರ ಹೆಸರಿನಲ್ಲಿದೆ. ಸಾವನಪ್ಪಿದವರ ಬಗ್ಗೆ ಕುಟುಂಬದವರು ದೃಢಪಡಿಸಬೇಕಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕನ ವಿಚಾರಣೆ ಮುಂದುವರೆದಿದೆ. ಬಸ್ಸು ಚಾಲಕನ ಅತಿ ವೇಗ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
`ಹೆಲ್ಮೆಟ್ ಧರಿಸಿ.. ಸುರಕ್ಷತಾ ಕ್ರಮ ಅನುಸರಿಸಿ’
Discussion about this post