ಸ್ಮಾರ್ಟ್ ಫೋನ್ ಎಂಬುದು ಇಂದು ಸರ್ವಾಂತರ್ಯಾಮಿ. ಪೇಟೆ-ಪಟ್ಟಣಗಳ ಹೊರತಾಗಿ ಹಳ್ಳಿಗಳ ಮೂಲೆ ಮೂಲೆ ತಲುಪಿ, ಒಳ್ಳೆಯ ಬಟ್ಟೆ ಇಲ್ಲದಿದ್ರೂ ಪರವಾಗಿಲ್ಲ, ಕಿಸೆ ತುಂಬುವಷ್ಟಗಲದ ಸ್ಮಾರ್ಟ್ಫೋನ್ ಬೇಕೇ ಬೇಕು ಎಂಬoತಾಗಿದೆ. ಇರಲಿ. ಬೇಕೇಬೇಕು. ಕಾಲಘಟ್ಟ ಸರಿದಂತೆ ನಾವೂ ಮುಂದಡಿಯಿಡಲೇಬೇಕಲ್ಲ? ಆದರೆ, ಸ್ಮಾರ್ಟ್ ಫೋನ್ ಬಳಕೆಯಲ್ಲಿ ಅದರಲ್ಲೂ ಇಂಟರ್ನೆಟ್ ವಿಚಾರವಾಗಿ ಬಹಳಷ್ಟು ಜನ ಎಡವುತ್ತಿದ್ದಾರೆ, ನಿರ್ಲಕ್ಷವಹಿಸಿ, ಸೂಕ್ತ ತಿಳುವಳಿಕೆಯಿಲ್ಲದೆ ಅನಗತ್ಯ ಸಂಕಷ್ಟಕ್ಕೂ ಸಿಲುಕುತ್ತಿದ್ದಾರೆ.
ಅವರ ಕಥೆ ಹಾಗಿರಲಿ, ಈ ಬಗ್ಗೆ ತಿಳಿವಳಿಕೆ ಹೊಂದಿದ್ದು, ಅತ್ಯಂತ ಜಾಗರೂಕರಾಗಿರುವವರು ಸಹ ಸೈಬರ್ ಅಪರಾಧಗಳಿಗೆ ಬಲಿಯಾಗಬಹುದು. ನಾವು ನಿತ್ಯ ವಾಸ ಮಾಡುವ ಮನೆಯನ್ನು ಹೇಗೆ ಆಗಾಗ ಸ್ವಚ್ಛಗೊಳಿಸಿ ಒಪ್ಪ ಓರಣವಾಗಿಟ್ಟುಕೊಳ್ಳುತ್ತೇವೋ, ಹಾಗೆಯೇ ಸ್ಮಾರ್ಟ್ ಫೋನ್ ವಿಚಾರದಲ್ಲೂ ಡಿಜಿಟಲ್ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡ ಅಷ್ಟೇ ಮುಖ್ಯ. `ಅಯ್ಯೋ, ನಮ್ದೇನಿದೆ ಸಾರ್, ಸಾದಾ ಸೀದಾ ಜೀವ್ನ ನಮ್ದು, ನಮ್ಮ ಮೊಬೈಲ್‌ಗೆ ಯಾವ ಸೈಬರ್ ಕಳ್ಳ ಗಾಳ ಹಾಕ್ತಾನೆ ಬಿಡಿ’ ಎನ್ನಬೇಡಿ. ಸೈಬರ್ ಕ್ರಿಮಿಗಳ ದೃಷ್ಟಿಯಲ್ಲಿ ಐಪಿ ಅಡ್ರೆಸ್ ಹೊಂದಿರುವ ಎಲ್ಲ ಮೊಬೈಲ್‌ಗಳೂ ಒಂದೇ. ನಿಮ್ಮ ಬಳಿಯಿರೋದು 4 ಸಾವಿರ ಬೆಲೆಯ ಫೋನಾ ಅಥವಾ 50 ಸಾವಿರ ಬೆಲೆಯ ಫೋನಾ ಎಂಬ ವ್ಯತ್ಯಾಸ ಅವರಿಗೆ ಬೇಕಿಲ್ಲ ನೋಡಿ. ಸರಿ, ಅಲ್ಲೆಲ್ಲಾದರೂ `ಫೋನ್ ಹ್ಯಾಕ್ ಆಗಿತ್ತಂತೆ ಕಣ್ರೀ’ ಎಂಬ ಮಾತು ಕೇಳಿರ್ತೀರಿ. ಇದು ಆಗೋದು ಹೇಗೆ, ಹ್ಯಾಕ್ ಆಗಿರೋದನ್ನ ತಿಳಿಯೋದು ಹೇಗೆ?
ಫಿಶಿಂಗ್: ಸರಳವಾಗಿ, ಗಾಳ ಹಾಕುವ ಈ ತಂತ್ರ ಮೆಸೇಜ್ ಮತ್ತು ಇಮೇಲ್‌ಗಳ ಮೂಲಕ ನಡೆಯುತ್ತದೆ. ದುರುದ್ದೇಶಪೂರಿತ ಲಿಂಕ್‌ಗಳನ್ನು ಕಳಿಸಿ ನಿಮ್ಮನ್ನು ಸ್ಮಾರ್ಟ್ಫೋನ್ ಮೂಲಕ ಹಿಡಿದುಬಿಡುವ ಕೆಲಸವೇ ಫಿಶಿಂಗ್. ಫೋನ್‌ನ್ನು ತಮ್ಮ ನಿಯಂತ್ರಣಕ್ಕೆ ಪಡೆಯುವ, ಹಿಡನ್ ಅಪ್ಲಿಕೇಶನ್‌ಗಳನ್ನು ಸ್ಥಾಪಿಸುವ ಗುರಿಯನ್ನೂ ಇದು ಹೊಂದಿರಬಹುದು. ಒಟ್ಟಿನಲ್ಲಿ ನಿಮ್ಮ ಫೋನ್‌ಗ ಐಪಿ ಅಡ್ರೆಸ್ ಪಡೆಯುವ ಹುನ್ನಾರ ಇಲ್ಲಿ ನಡೆಯುತ್ತದೆ.
ಟ್ರಾಕಿಂಗ್ ಅಪ್ಲಿಕೇಶನನ್: ನಿಮ್ಮ ಫೋನಿನ ಡೇಟಾವನ್ನು ಸಂಗ್ರಹಿಸಲು ಹ್ಯಾಕರ್‌ಗಳು ಸ್ಪೆವೇರ್ ಅಪ್ಲಿಕೇಶನ್‌ಗಳನ್ನು ನಿಮ್ಮ ಅರಿವಿಗೆ ಬಾರದಂತೆಯೇ ಸ್ಥಾಪಿಸಿಬಿಡಬಹುದು. ಆ ಮೂಲಕ ನಿಮ್ಮ ಫೋನ್‌ನ ಸಂಪೂರ್ಣ ಜಾತಕ ಹ್ಯಾಕರ್‌ಗಳ ಕೈಸೇರಿಬಿಡುತ್ತದೆ.
ಪಬ್ಲಿಕ್ ವೈ-ಫೈ: ಒಂದುವೇಳೆ ಬಿಟ್ಟಿಯಾಗಿ ಸಿಗುತ್ತದೆಂದು ಪಬ್ಲಿಕ್ ವೈ-ಫೈಗೆ ಸಂಪರ್ಕಿಸಿದಾಗಲೂ ಅಪಾಯಕ್ಕೊಳಗಾಗುವ ಸಾಧ್ಯತೆಯಿದೆ. ತನ್ಮೂಲಕ ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಬಹುದು. ಇದಕ್ಕಾಗಿ ಬಳಕೆದಾರರ ಒಪ್ಪಿಗೆಯ ಅಗತ್ಯವೂ ಇಲ್ಲ.
ಪಾಪ್ ಅಪ್: ಮೊಬೈಲ್ ಬಳಸುವಾಗ ಕಾಣಿಸಿಕೊಳ್ಳುವ ಪಾಪ್ ಅಪ್‌ಗಳೂ ಅಷ್ಟೇ ಅಪಾಯಕಾರಿ. ವಾಣಿಜ್ಯ ಉದ್ದೇಶಗಳಿಗಾಗಿ ನಿಮ್ಮ ಕೆಲವು ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವ ದಾರಿಯಿದು. ಈ ಪಾಪ್-ಅಪ್‌ಗಳನ್ನು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗೆ ಕಳುಹಿಸುತ್ತವೆ. ಎಷ್ಟೋ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕೂ ಇದೇ ಉತ್ತರ! ಎಲ್ಲಾ ಪಾಪ್-ಅಪ್‌ಗಳೂ ಹೀಗಿರುತ್ತವೆ ಎಂದಲ್ಲ. ಆದರೆ, ಸೋಂಕಿನ ಲಕ್ಷಣವಂತೂ ಹೌದು.
ಇವೆಲ್ಲವುಗಳೊಂದಿಗೆ, ಮುಖ್ಯವಾಗಿ ಬ್ರೌಸರ್ ಬಳಸುವಾಗ ಎಚ್ಚರವಾಗಿರಿ. ನಿಮ್ಮ ಆಸಕ್ತಿ, ಅಭಿರುಚಿಗಳನ್ನು ದೂರದಲ್ಲೆಲ್ಲೋ ಕುಳಿತ ಆಗಂತುಕರು ಅರಿತುಬಿಡಬಹುದು. ಇಲ್ಲದ ಕಿರಿಕಿರಿ ಸೃಷ್ಟಿಯಾಗುವುದೇ ಇಲ್ಲಿಂದ ಎಂಬುದೂ ಗಮನಕ್ಕಿರಲಿ. ಬಹುತೇಕ ಫೋನ್‌ಗಳು ಹ್ಯಾಕ್ ಆಗುವುದು, ಇಲ್ಲದ ಸಮಸ್ಯೆಗಳು ಸೃಷ್ಟಿಯಾಗುವುದು ಎಲ್ಲಿಂದ ಗೊತ್ತೇ? `ಪೋಲಿ ಚಿತ್ರ’ಗಳ ವೀಕ್ಷಣೆಯಿಂದ! ಇಂಥ ವಿಷಯಗಳನ್ನು ಹುಡುಕುವುದು, ಡೌನ್ಲೋಡ್ ಮಾಡಿಕೊಳ್ಳುವುದು ಎಷ್ಟು ಅಪಾಯಕಾರಿ ಎಂಬುದು ಹೆಚ್ಚಿನವರಿಗೆ ಅರಿವಿಲ್ಲ.
ನಿಮ್ಮ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊoಡ ಹ್ಯಾಕರ್‌ಗಳು ಇಂಥ ಕೆಲಸಕ್ಕೆ ಮುಂದಾಗಿಬಿಡುತ್ತಾರೆ. ಇಂಥ ನೀಲಿ ಚಿತ್ರಗಳ ಫೈಲ್‌ಗಳೊಂದಿಗೇ ಹಿಡನ್ ಅಪ್ಲಿಕೇಶನ್‌ಗಳೂ ನಿಮ್ಮ ಫೋನ್‌ಗೆ ಬಂದು ಯಾವುದೋ ಮೂಲೆಯಲ್ಲಿ ಕುಳಿತುಬಿಡುತ್ತವೆ. ಏನೋ ಅನುಮಾನ ಬಂದು ನಿಮ್ಮ ಸ್ಮಾರ್ಟ್ಫೋನನ್ನು ಫ್ಯಾಕ್ಟರಿ ರಿಸೆಟ್ ಮಾಡಿದರೂ ಕೂಡ ಹೊರಹೋಗದಷ್ಟು ಪ್ರಬಲ ಹಿಡನ್ ಅಪ್ಲಿಕೇಶನ್‌ಗಳೂ ಇವೆಯೆಂದರೆ ನಂಬಲೇಬೇಕು.
ಹ್ಯಾಕ್ ಆಗಿರುವ ಲಕ್ಷಣಗಳೇನು?
* ನೀವು ಯಾವತ್ತಿನಂತೆ ಮೊಬೈಲ್ ಇಂಟರ್ನೆಟ್ ಬಳಸುತ್ತಿದ್ದರೂ ಕೂಡ ಕಡಿಮೆ ಸಮಯದಲ್ಲಿಯೇ ಡೇಟಾ ಮುಗಿಯುತ್ತಿರುವುದು ಹಿಡನ್ ಅಪ್ಲಿಕೇಶನ್‌ಗಳ ಕರಾಮತ್ತು ಆಗಿರಬಹುದು. ಅಂದರೆ, ನಿಮ್ಮರಿವಿಗೆ ಬಾರದಂತೆಯೇ ನಿಮ್ಮ ಫೋನ್‌ನ ಮೇಲೆ ಕಣ್ಣಿಟ್ಟು, ಫೋನ್‌ನ ಡೇಟಾ ಟ್ರಾನ್ಸ್ಫರ್ ಮಾಡುವ ಕೆಲಸ ನಡೆಯುತ್ತಿರಬಹುದು.
* ಬಹಳ ಕಡಿಮೆ ಸಮಯದಲ್ಲಿ ಫೋನ್‌ನ ಬ್ಯಾಟರಿ ಮುಗಿಯುತ್ತಿದ್ದರೆ ನಿರ್ಲಕ್ಷಿಸಬೇಡಿ. ಹೀಗಾಗುತ್ತಿದೆಯೆಂದಾದರೆ, ಯಾವುದಾದರೂ ಫೋನ್ ಮಾಲ್‌ವೇರ್ ಸೋಂಕಿಗೆ ಗುರಿಯಾಗಿರುವ ಲಕ್ಷಣವೂ ಹೌದು.
* ಅತೀ ಬಳಕೆಯಿಂದ ಸ್ಮಾರ್ಟ್ಫೋನ್ ಬಿಸಿಯಾಗುವುದು ಸಾಮಾನ್ಯ. ಆದರೆ, ಕಡಿಮೆ ಮಳಕೆ ಮಾಡಿದಾಗಲೂ ಫೋನ್ ಬಿಸಿಯಾಗುತ್ತಿದೆಯಾ? ಹ್ಯಾಕರ್ ನಿಮ್ಮ ಬಹಳಷ್ಟು ಡೇಟಾವನ್ನು ಅವನ ಸರ್ವರ್‌ಗೆ ವರ್ಗಾಯಿಸುವ ಲಕ್ಷಣವೂ ಇದಾಗಿರಬಹುದು.
* ಬ್ರೌಸ್ ಮಾಡುವಾಗ ಕೆಲವೊಮ್ಮೆ ನೀವು ಯಾವುದೋ ಲಿಂಕ್ ಒತ್ತಿದರೆ ಇನ್ಯಾವುದೋ ಸೈಟ್ ತಲುಪುತ್ತಿದೆಯೆಂದಾರೆ ಎಚ್ಚರವಾಗಿ. ಸೈಬರ್ ಕ್ರಿಮಿಗಳು ನಿಮ್ಮ ಫೋನ್‌ನ ದಾರಿ ತಪ್ಪಿಸುತ್ತಿದ್ದಾರೆ.
ತಕ್ಷಣ ಮಾಡಬೇಕಾದ ಕಾರ್ಯವೇನು?
* ಅನಗತ್ಯ, ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳನ್ನು ಆಗಾಗ ಗುಡಿಸಿ ಸ್ವಚ್ಛ ಮಾಡುತ್ತಿರಿ. ಬ್ಯಾಂಕಿoಗ್, ಸೋಶಿಯಲ್ ಮೀಡಿಯಾದಂತಹ ಅತ್ಯಂತ ಗೌಪ್ಯ, ಅಪ್ಲಿಕೇಶನ್‌ಗಳಂತೂ ಇದ್ದೇ ಇರುತ್ತವೆ. ನಮ್ಮನ್ನು ಬೆತ್ತಲೆಗೊಳಿಸಲು ಇವೆರಡೇ ಸಾಕು.
* ನಿಮಗೆ ಗೊತ್ತೇ ಇರದ ನಂಬರ್‌ಗಳಿoದ ವಾಟ್ಸಾಪ್ ಮೆಸೇಜ್ ಮಾಡಿ ಕಿರಿಕಿರಿ ಹುಟ್ಟಿಸಬಹುದು. ನಿಮ್ಮ ಒಪ್ಪಿಗೆಯೇ ಇಲ್ಲದೆ ನಿಮ್ಮ ಖಾತೆಗಳ ಪಾಸ್‌ವರ್ಡ್ ಬದಲಿಸಿಬಿಡುತ್ತಾರೆ. ಅದಕ್ಕಿಂತ ಮುನ್ನ ನೀವೇ ಆ ಕೆಲಸ ಮಾಡಿಬಿಡಿ. ವಾಟ್ಸಪ್, ಫೇಸ್‌ಬುಕ್ ಇತ್ಯಾದಿ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ, ಮತ್ತೊಮ್ಮೆ ಡೌನ್‌ಲೋಡ್ ಮಾಡಿ ಲಾಗಿನ್ ಆಗಿ, ಪಾಸ್‌ವರ್ಡ್ ಕೂಡ ಬದಲಿಸಿ.
* ನೀವು ಹೊಸ ಫೋನ್ ಖರೀದಿಸಿದಾಗ ಕೆಲವು ಅಪ್ಲಿಕೇಶನ್‌ಗಳು ಮೊದಲೇ ಇನ್ಸಾಲ್ ಆಗಿರುತ್ತವೆಯಲ್ಲ? ನೀವು ಎಂದಿಗೂ ಬಳಸದ, ಅನಗತ್ಯ, ಡೌನ್ಲೋಡ್ ಮಾಡಿದ ನೆನಪಿಲ್ಲದ ಕೆಲವು ಅಪ್ಲಿಕೇಶನ್‌ಗಳ ಬಗ್ಗೆಯೂ ಜಾಗರೂಕರಾಗಿರಿ. ನಿಮ್ಮ ಉಪಯೋಗಕ್ಕೆ ಬಾರದವನ್ನು ತೆಗೆದುಹಾಕಿಬಿಡಿ.
Discussion about this post