ಶಿರಸಿಯ ಮಹೇಶ ಹೆಗಡೆ ಅವರು ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ರಾಜು ನಾಯ್ಕ ಅವರು ಕಮಿಷನ್ ನೀಡುವುದಾಗಿ ಹೇಳಿದ ಕಾರಣ ಕಾನೂನುಬಾಹಿರ ಕೆಲಸ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಶಿರಸಿ ಇಟಗುಳಿ ಬಳಿಯ ನಿರ್ನಳ್ಳಿಯಲ್ಲಿ ಮಹೇಶ ಕೇಶವ ಹೆಗಡೆ ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಶಿರಸಿ ಗಣೇಶ ನಗರದ ರಾಜು ನಾಯ್ಕ ಅವರು ಮಹೇಶ ಹೆಗಡೆ ಅವರಿಗೆ ಬೇಗ ದುಡ್ಡು ಮಾಡುವ ದಾರಿ ತಿಳಿಸುವುದಾಗಿ ಹೇಳಿದರು. ಹಣದ ಹಪಾಹಪಿತನಕ್ಕೆ ಒಳಗಾದ ಮಹೇಶ ಹೆಗಡೆ ಅವರು ರಾಜು ನಾಯ್ಕ ಅವರು ಸೂಚಿಸಿದ ಪ್ರಕಾರ ಮಟ್ಕಾ ಹಣ ಸಂಗ್ರಹಿಸಲು ಶುರು ಮಾಡಿದರು. ಹುತ್ಗಾರ್ ಮಾಣಿಗದ್ದೆ ಕ್ರಾಸಿನ ಬಳಿಯ ಕಚ್ಚಾ ರಸ್ತೆಯಲ್ಲಿ ನಿಂತು ಜೂಜಾಡಿಸುತ್ತಿದ್ದ ಮಹೇಶ ಹೆಗಡೆ ಅವರ ಮೇಲೆ ಪೊಲೀಸರು ದಾಳಿ ನಡೆಸಿದರು.
ಸೆ 19ರ ರಾತ್ರಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಂತೋಷಕುಮಾರ ಎಂ ಅವರು ವಿಚಾರಣೆ ನಡೆಸಿದಾಗ ಮಹೇಶ ಹೆಗಡೆ `ತನ್ನದೇನು ತಪ್ಪಿಲ್ಲ.. ತನ್ನದೇನು ತಪ್ಪಿಲ್ಲ’ ಎಂದರು. ಕೊನೆಗೆ ಮಟ್ಕಾ ಬುಕ್ಕಿಯಾದ ರಾಜು ನಾಯ್ಕ ಅವರ ಹೆಸರು ಬಾಯ್ಬಿಟ್ಟರು. ಮಹೇಶ ಹೆಗಡೆ ಅವರು ಆ ದಿನ ಸಂಗ್ರಹಿಸಿದ್ದ 670ರೂ ಹಣವನ್ನು ಪೊಲೀಸರು ವಶಕ್ಕೆಪಡೆದರು. ಮಹೇಶ ಹೆಗಡೆ ಅವರ ಜೊತೆ ರಾಜು ನಾಯ್ಕ ಅವರ ಹೆಸರನ್ನು ಸೇರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post