• Latest
50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!

50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

50 ರೂಪಾಯಿಗೆ ಶಾಲಾ ಮಕ್ಕಳ ಪ್ರವಾಸ!

uknews9.comby uknews9.com
in ವಾಣಿಜ್ಯ
ADVERTISEMENT

ಡಿಸೆಂಬರ್ ಬಂದರೆ ಶಾಲಾ ಮಕ್ಕಳಿಗೆ ಪ್ರವಾಸದ ಕಾಲ. ಈ ಬಾರಿ ಪ್ರವಾಸಕ್ಕೆ ಎಲ್ಲಿ ಹೋಗುವುದು? ಎಂದು ಯೋಜಿಸುತ್ತಿರುವವರಿಗೆ ಯಲ್ಲಾಪುರದ ಯುಕೆ ನೇಜರ್ ಸ್ಟೇ ಒಂದು ದಿನದ ಅವಕಾಶವನ್ನು ಕಲ್ಪಿಸಿದೆ. ಪೃಕೃತಿಯ ಜೊತೆ ಆಟ-ಪಾಠಗಳೊಂದಿಗೆ ಇಡೀ ದಿನ ಕಳೆಯಲು ಇಚ್ಚಿಸುವವರಿಗೆ ನೇಚರ್ ಸ್ಟೇ ಸಿಬ್ಬಂದಿ ಸ್ವಾಗತಿಸಲು ಸಜ್ಜಾಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಯಲ್ಲಾಪುರದ ಚಂದ್ಗುಳಿ ಗಂಟೆ ಗಣಪತಿ ದೇವಾಲಯ ಬಳಿಯಿರುವ ಯುಕೆ ನೇಚರ್ ಸ್ಟೇ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ರೆಸಾರ್ಟಗಳಲ್ಲಿ ಒಂದು. ಹಳ್ಳದ ಪಕ್ಕದಲ್ಲಿರುವ ಈ ಭೂಮಿಯಲ್ಲಿ ಬಗೆ ಬಗೆಯ ಗಿಡ-ಮರಗಳಿವೆ. ಪರಿಸರ ಪಾಠದ ಜೊತೆ ಆಟೋಟಗಳಿಗೆ ಈ ಪ್ರದೇಶ ಅತ್ಯಂತ ಯೋಗ್ಯ ಸ್ಥಳ. ಸುಸಜ್ಜಿತವಾದ ಕೊಠಡಿ, ವಿಶಾಲವಾದ ಈಜುಕೊಳ, ಅಡಿಕೆ ಗಿಡಗಳ ಸಾಲುಗಳೊಂದಿಗೆ ಎಲ್ಲಾ ರೀತಿಯಲ್ಲಿಯೂ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಈ ರೆಸಾರ್ಟ ಪ್ರಸಿದ್ದಿ ಪಡೆದಿದೆ.

ADVERTISEMENT

50 ರೂಪಾಯಿಗೆ ಆಸ್ರಿಗೆ-ಆಟ-ಓಟ! 
ಅತ್ಯಂತ ಕಡಿಮೆ ದರದಲ್ಲಿ ಮಕ್ಕಳ ಪ್ರವಾಸಕ್ಕೆ ಕರೆದೊಯ್ಯಬೇಕು ಎನ್ನುವ ಶಾಲೆಯವರಿಗೆ ಇಲ್ಲಿನವರು ವಿಶೇಷ ಆತಿಥ್ಯವನ್ನು ಕಲ್ಪಿಸಿದ್ದಾರೆ. ಪ್ರತಿಯೊಬ್ಬರಿಗೆ 50 ರೂ ದರದಲ್ಲಿ ಉದ್ಯಾನವನಕ್ಕಿಂತಲೂ ಭಿನ್ನವಾದ ಅನುಭವವನ್ನು ಈ ರೆಸಾರ್ಟಿನವರು ಮಾಡಿಕೊಡಲಿದ್ದಾರೆ. ಹುಡುಗ ಹಾಗೂ ಹುಡುಗಿಯರಿಗೆ ಪ್ರತ್ಯೇಕವಾದ ಕೋಣೆ, ಶೌಚಾಲಯ, ಬ್ಯಾಗುಗಳನ್ನು ಇಡಲು ಹಾಗೂ ಬಟ್ಟೆ ಬದಲಾಯಿಸಲು ಕೊಠಡಿ ವ್ಯವಸ್ಥೆಯನ್ನು ಇದೇ ಹಣದಲ್ಲಿ ಮಾಡಿಕೊಡುತ್ತಿದ್ದಾರೆ. ಆಗಮಿಸುವ ಪ್ರತಿಯೊಬ್ಬರಿಗೂ ರೆಸಾರ್ಟ ಕಡೆಯಿಂದ `ವೆಲ್ ಕಂ ಡ್ರಿಂಕ್’ ಕೊಡಲಾಗುತ್ತದೆ.

50 ರೂ ಪಾವತಿಸಿ ಯುಕೆ ನೇಚರ್ ಸ್ಟೇ’ಗೆ ಬರುವ ಪುಠಾಣಿ ಅತಿಥಿಗಳಿಗೆ ರೈನ್ ಡಾನ್ಸ, ಈಜುಕೊಳದ ಬಳಕೆಗೆ ಅವಕಾಶ ಸಿಗಲಿದೆ. ಲೈಫ್ ಜಾಕೇಟ್ ಜೊತೆ ಅಗತ್ಯ ಮಾರ್ಗದರ್ಶಿಗಳ ನೇತ್ರತ್ವದಲ್ಲಿ ಜಲ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತದೆ. ಇದರೊಂದಿಗೆ ಲಗೋರಿ, ಕಬ್ಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ, ಸೇರಿ ದೇಶೀಯ ಆಟಗಳನ್ನು ಆಡಿಸಲಾಗುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ಕ್ರಿಕೇಟ್, ಶಟಲ್, ವಾಲಿ ಬಾಲ್ ಆಟಗಳಿಗೂ ಅವಕಾಶವಿದೆ.

ಅಗತ್ಯವಿದ್ದವರಿಗೆ ಊಟ-ಟ್ರಕ್ಕಿಂಗ್-ಸಾಹಸ ಚಟುವಟಿಕೆ 
`ನೇಚರ್ ವಾಕ್’ ಆಸಕ್ತಿ ಇದ್ದವರಿಗೆ ಕಾಡು-ಹಳ್ಳಗಳ ನಡಿಗೆ ಮಾಡಿಸಿ ಪೃಕೃತಿ ಶಿಬಿರದ ಪಾಠ ಮಾಡಲಾಗುತ್ತದೆ. ಅಪರೂಪದ ಗಿಡ ಮೂಲಿಕೆ ಹಾಗೂ ಅವುಗಳ ಉಪಯೋಗದ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ಪಕ್ಷಿ ವೀಕ್ಷಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ.

ಮಧ್ಯಾಹ್ನದ ಊಟಕ್ಕೆ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರುವುದು ಉತ್ತಮ. ಅದಾಗಿಯೂ ಊಟ ತರಲು ಮರೆತವರಿಗೆ ಯುಕೆ ನೇಚರ್ ಸ್ಟೇ ರೆಸಾರ್ಟಿನಲ್ಲಿ ಉತ್ತಮ ಹೊಟೇಲ್ ಇದೆ. ಮುಂಚಿತವಾಗಿ ತಿಳಿಸಿ ಪ್ರತ್ಯೇಕ ಹಣ ಪಾವತಿಸುವವರಿಗೆ ಊಟ ಬಡಿಸಲಾಗುತ್ತದೆ. ಅಲ್ಲಿ ವಿವಿಧ ಬಗೆಯ ಸಾಹಸ ಚಟುವಟಿಕೆಗಳಿಗೆ ಸಹ ಅವಕಾಶವಿದ್ದು, ಅಲ್ಲಿ ತೆರಳಿದ ನಂತರವೂ ಅದರ ಶುಲ್ಕ ಪಾವತಿಸಿ ಬಳಸಬಹುದಾಗಿದೆ.

ನಿಮ್ಮ ಶಾಲೆಯ ಮಕ್ಕಳನ್ನು ಇಲ್ಲಿಗೆ ಕರೆ ತರಲು ಫೋನ್ ಮಾಡಿ. ಫೋನ್ ತಾಗದೇ ಇದ್ದರೆ ವಾಟ್ಸಪ್ ಮಾಡಿ: 9449567673.

ಬರುವ ದಾರಿ ಗೊತ್ತಾಗದಿದ್ದರೆ ಗೂಗಲ್ ಲೊಕೇಶನ್ ಬಳಸಿ: Google location

#Sponsored

ADVERTISEMENT

Discussion about this post

Previous Post

ಸೇವೆ ಜೊತೆ ಸಂಬಳ | ತರಬೇತಿಯೊಂದಿಗೆ ಉದ್ಯೋಗ: ಇಲ್ಲಿ ಕನಿಷ್ಟ ವೇತನವೇ 25 ಸಾವಿರ ರೂ!

Next Post

ಮನೆ ಮನೆಯಲ್ಲಿಯೂ ಮನೆ ಮಾತಾಗಿರುವ ಕೆ ಎಸ್ ಫುಡ್ ಪ್ರೊಡೆಕ್ಟ್

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋