• Latest
ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!

ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಇಲ್ಲಿ ಕಲಿತವರಿಗೆ ಖಚಿತ ಉದ್ಯೋಗ!

uknews9.comby uknews9.com
in ವಾಣಿಜ್ಯ
ADVERTISEMENT

ಬಗೆ ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯಲ್ಲಾಪುರದ ರಂಗ ಸಹ್ಯಾದ್ರಿ ಟ್ರಸ್ಟ್ ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುತ್ತಿದೆ. ತರಬೇತಿಪಡೆದವರಿಗೆ ಉದ್ಯೋಗ ಒದಗಿಸಿಕೊಡುವ ಜೊತೆ ಸ್ವ ಉದ್ಯೋಗ ಮಾಡುವವರಿಗೂ ಈ ಸಂಸ್ಥೆ ಬೆನ್ನೆಲುಬಾಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ರಂಗ ಸಹ್ಯಾದ್ರಿ ಟ್ರಸ್ಟಿನ ಅಂಗಸ0ಸ್ಥೆ `ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆ’ ಕಾರ್ಯನಿರ್ವಹಿಸುತ್ತಿದೆ. ಓದು-ಬರಹ ಬರದವರಿಗೆ ಸಹ ಇಲ್ಲಿ ಕೌಶಲ್ಯ ತರಬೇತಿ ನೀಡಿ, ಅವರವರ ಕುಟುಂಬ ನಡೆಸಲು ಅಗತ್ಯವಿರುವಷ್ಟು ಆದಾಯ ಕಲ್ಪಿಸುತ್ತದೆ. ಅರ್ದಕ್ಕೆ ಓದು ನಿಲ್ಲಿಸಿದವರಿಗೆ ಸಹ ಇಲ್ಲಿ ಕಲಿಕೆಗೆ ಸಾಕಷ್ಟು ಅವಕಾಶಗಳಿದೆ.

ADVERTISEMENT

ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆಯಲ್ಲಿ ಸದ್ಯ 6 ತಿಂಗಳ ತರಬೇತಿಯನ್ನು ಸಂಯೋಜಿಸಲಾಗಿದೆ. ಈ ಆರು ತಿಂಗಳ ತರಬೇತಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಂಸ್ಥೆಯೇ ಉದ್ಯೋಗ ಕೊಡಿಸುತ್ತದೆ. ವಿದ್ಯುತ್ ಉಪಕರಣಗಳ ಬಗ್ಗೆ ತರಬೇತಿ ನೀಡುವುದು ಈ ಸಂಸ್ಥೆಯ ಮುಖ್ಯ ಕೆಲಸ. ಅದರಲ್ಲಿಯೂ ಮುಖ್ಯವಾಗಿ ಇಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಬೇರೆ ಬೇರೆ ಊರಿನಿಂದ ಬರುವವರಿಗೆ ಸಂಸ್ಥೆಯೇ ಹಾಸ್ಟೇಲ್ ವ್ಯವಸ್ಥೆಯನ್ನು ಮಾಡುತ್ತಿದೆ. 2016ರಲ್ಲಿ ಶುರುವಾದ ಈ ಸಂಸ್ಥೆ ಈವರೆಗೆ ನೂರಾರು ಜನರಿಗೆ ಉದ್ಯೋಗದ ದಾರಿ ತೋರಿದೆ.

ಇಲ್ಲಿ ತರಬೇತಿ ಮುಗಿಸಿದವರಿಗೆ ಕನಿಷ್ಟ 24 ಸಾವಿರ ರೂ ವೇತನದ ಉದ್ಯೋಗವನ್ನು ದೊರಕಿಸಿಕೊಡಲಾಗುತ್ತದೆ. ಇನ್ನೂ ಬೇರೆ ಬೇರೆ ಊರುಗಳಿಗೆ ತೆರಳಿ ಉದ್ಯೋಗ ಮಾಡಲು ಮನಸ್ಸಿಲ್ಲದವರಿಗೆ ಸಂಸ್ಥೆಯ ಮೂಲಕವೇ ಸ್ವ ಉದ್ಯೋಗದ ಮಾರ್ಗದರ್ಶನ ನೀಡಲಾಗುತ್ತದೆ. ಊರಿನಲ್ಲಿಯೇ ಉಳಿದು ಟಿವಿ, ಫ್ಯಾನು, ಪ್ರಿಜ್, ಎಸಿ, ಮಿಕ್ಸರ್-ಗ್ರಾಂಡರ್ ದುರಸ್ತಿ ನಡೆಸುವವರಿಗೆ ಈ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ.

ಪ್ರತಿಯೊಬ್ಬರ ಮನೆಯಲ್ಲಿಯೂ ವಿದ್ಯುತ್ ಸಾಮಗ್ರಿಗಳ ಬಳಕೆಯಲ್ಲಿದ್ದು, ಅದರ ದುರಸ್ತಿ ಸೇವೆಯ ಮೂಲಕ ಬದುಕು ಕಟ್ಟಿಕೊಳ್ಳುವವರಿಗಾಗಿ ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆ ಶ್ರಮಿಸುತ್ತಿದೆ. ವಿದ್ಯುತ್ ಉಪಕರಣಗಳ ಸುರಕ್ಷಿತ ಬಳಕೆ ವಿಧಾನಗಳೊಂದಿಗೆ ಅವುಗಳ ದುರಸ್ತಿ ಮಾಡುವ ಬಗ್ಗೆ ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆ ಮಾಹಿತಿ ನೀಡಿದೆ. ಉದ್ಯೋಗವಿಲ್ಲದೇ ಸಮಸ್ಯೆಯಲ್ಲಿದ್ದ ನನಗೆ ಈ ತರಬೇತಿ ಪಡೆದಿದ್ದರಿಂದ ಯೋಗ್ಯ ಬದುಕು ನನ್ನದಾಗಿದೆ’ ಎಂದು ಕಿರವತ್ತಿಯ ಶಬ್ಬಿರ್ ವಂತಿ ಅನಿಸಿಕೆ ಹಂಚಿಕೊoಡಿದ್ದಾರೆ.

ಸದ್ಯ ಕೆನರಾ ರಿಫ್ರಿಜರೇಷನ್ ಎಸಿ ಟೆಕ್ನಿಶಿಯನ್ ಮತ್ತು ಎಲೆಕ್ಟ್ರಿಕಲ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುವವರಿಗಾಗಿ ಪ್ರವೇಶಾತಿ ಶುರುವಾಗಿದೆ. ಪ್ರತಿ ದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ತರಬೇತಿ ನೀಡಲಾಗುತ್ತದೆ.

ಪ್ರವೇಶಾತಿಗೆ ಜೂನ್ 5 ಕೊನೆಯ ದಿನವಾಗಿದ್ದು, ನಿಮ್ಮ ಪ್ರವೇಶ ಕಾಯ್ದಿರಿಸಲು ಇಲ್ಲಿ ಫೋನ್ ಮಾಡಿ: 7795762900 ಅಥವಾ 8088822907

#Sponsored

ADVERTISEMENT

Discussion about this post

Previous Post

2025 ಸೆಪ್ಟೆಂಬರ್ 22ರ ದಿನ ಭವಿಷ್ಯ

Next Post

ಕರೊನಾ ವೇಳೆ ಕಂಪನಿ ಕಟ್ಟಿದ ಕಥೆ: ಕನಸಿನ ಉದ್ಯೋಗಕ್ಕೆ ಯಶಸ್ಸಿನ ದಾರಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋