ಕನ್ನಡಪರ ಚಟುವಟಿಕೆಗಳಿಗೆ ಹೊಸ ಹುರುಪು ನೀಡುತ್ತಿರುವ ಕರ್ನಾಟಕ ರಣಧೀರರ ವೇದಿಕೆ ಅಂಕೋಲಾದಲ್ಲಿ ಜಿಲ್ಲಾ ಘಟಕ ಹೊಂದಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯ ಇನ್ನಷ್ಟು ತಾಲೂಕುಗಳಿಗೆ ವಿಸ್ತರಿಸಿದೆ.
ಕುಮಟಾ ಹಾಗೂ ಭಟ್ಕಳ ತಾಲೂಕು ಘಟಕಗಳಿಗೆ ಭಾನುವಾರ ಚಾಲನೆ ಸಿಕ್ಕಿದೆ. ಕರಾವಳಿ ಭಾಗದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ ಈ ದಿನ ಮಿರ್ಜಾನಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಈ ಘಟಕಗಳ ಉದ್ಘಾಟನಾ ಕಾರ್ಯ ನಡೆದಿದೆ. ವೇದಿಕೆಯ ರಾಜ್ಯಾಧ್ಯಕ್ಷ ಶಂಕರ್ ಗೌಡ ಕೆ ಆರ್ ಅವರು ಈ ಘಟಕಗಳನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕರ್ನಾಟಕ ರಣಧೀರರ ವೇದಿಕೆಯು ಕೇವಲ ಹೋರಾಟಗಳಿಗೆ ಸೀಮಿತವಾಗಿಲ್ಲ. ಈ ಸಂಘಟನೆ ನಾಡಿನ ನೆಲ, ಜಲ, ಭಾಷೆಯ ಅಸ್ಮಿತೆಯನ್ನು ಕಾಪಾಡುವ ಕಾಪಾಡುವ ಧ್ವನಿಯಾಗಿದೆ’ ಎಂದವರು ವಿವರಿಸಿದರು. `ಸಂಘಟನೆ ಪದಾಧಿಕಾರಿಗಳು ನೊಂದವರ ಧ್ವನಿಯಾಗಿರಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಘಟನೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸೂರಜ ಪಾಂಡುರAಗ ನಾಯ್ಕ ಮಾತನಾಡಿ `ಜಿಲ್ಲೆಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ನಮ್ಮ ಗುರಿಗೆ ಮತ್ತಷ್ಟು ಬಲ ಬಂದಿದೆ. ಕುಮಟಾ ಮತ್ತು ಭಟ್ಕಳದಂತಹ ಪ್ರಮುಖ ತಾಲೂಕುಗಳಲ್ಲಿ ಸಮರ್ಥ ನಾಯಕತ್ವವನ್ನು ರೂಪಿಸುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ’ ಎಂದರು.
ಕುಮಟಾ ತಾಲೂಕು ಅಧ್ಯಕ್ಷರಾಗಿ ಸಮೀರ್ ಅಹಮದ್ ಮಹಮ್ಮದ್ ಗೌಸ್ ಮಿರ್ಜಾನಕರ್ ಹಾಗೂ ಭಟ್ಕಳ ತಾಲೂಕು ಅಧ್ಯಕ್ಷರಾಗಿ ಮಂಜುನಾಥ್ ಶನಿಯಾರ ನಾಯ್ಕ ಜವಾಬ್ದಾರಿವಹಿಸಿಕೊಂಡರು. ಸಂಘಟನೆಯ ರಾಜ್ಯ ಪದಾಧಿಕಾರಿಗಳಾದ ಭೈರವ್, ಮೂರ್ತಿ, ಮಹೇಶ್ ಗೌಡ ಜಿ, ಪ್ರವೀಣ್ ಗೌಡ, ಶಿವರಾಜ್ ಗೌಡ ಹಾಗೂ ಲೋಕೇಶ್ ಎಸ್ ಭಾಗವಹಿಸಿದ್ದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ವಿಷ್ಣು ನಾಯ್ಕ ಹಾಗೂ ಜಿಲ್ಲಾ ಉಪಾಧ್ಯಕ್ಷ ಕಿರಣ ಚಂದ್ರಹಾಸ್ ಗಾವಂಕರ ಕಾರ್ಯಕ್ರಮದಲ್ಲಿದ್ದರು.
Discussion about this post