ಆಳಂದಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ದೂರು ಬರದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ ಬಗ್ಗೆ ಬಿಜೆಪಿ ಮುಖಂಡ ರಾಮು ನಾಯ್ಕ ಆಕ್ಷೇಪಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿಯೂ ಸರ್ಕಾರ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಿದ್ದು, ಅನೇಕ ಪ್ರಕರಣಗಳು ಹಳ್ಳ ಹಿಡಿದಾಗ ಇಂಥ ಸಾಹಸದ ಅಗತ್ಯವೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಆಳಂದ ಕ್ಷೇತ್ರದ ಬಿ ಆರ್ ಪಾಟೀಲ ಅವರು ತಿರುಗಿ ಬಿದ್ದಿದ್ದಾರೆ. ಈ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿ ತನಿಖೆಗೆ ಮುಂದಾಗಿದ್ದಾರೆ’ ಎಂದು ರಾಮು ನಾಯ್ಕ ಅವರು ದೂರಿದ್ದಾರೆ. `ಚಿನ್ನಸ್ವಾಮಿ ಮೈದಾನದ ಐಪಿಎಲ್ ದುರಂತ, ವಾಲ್ಮೀಕಿ ಹಗರಣ, ಮೂಡಾ ಹಗರಣ ಎಲ್ಲವೂ ತಣ್ಣಗಾಗಿದೆ. 2020ರ ಕೆಜೆಹಳ್ಳಿ, ಡಿಜೆ ಹಳ್ಳಿ ಗಲಭೆ, 2022ರ ಹುಬ್ಬಳ್ಳಿ ಗಲಭೆ, 2023ರ ಶಿವಮೊಗ್ಗ ಗಲಭೆ ಸೇರಿ ಅನೇಕ ಪ್ರಕರಣಗಳು ಮುಚ್ಚಿ ಹೋಗಿವೆ. ದಾವಣಗೆರೆ ದಾಂಧಲೆ, ಮದ್ದೂರು ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ, ಭದ್ರಾವತಿ ಈದ್ ಮೆರವಣಿಗೆಯಲ್ಲಿ ಪಾಕ್ ಧ್ವಜಗಳ ಹಾರಾಟ ಎಲ್ಲವೂ ರಾಜ್ಯ ಸರ್ಕಾರಕ್ಕೆ ಸಾಮಾನ್ಯ ಸಂಗತಿಯಾಗಿ ಕಾಣುತ್ತಿವೆ. ಮೊದಲು ಈ ಎಲ್ಲಾ ಪ್ರಕರಣಗಳಿಗೆ ನ್ಯಾಯ ಕೊಡಿಸಲಿ’ ಎಂದವರು ಆಗ್ರಹಿಸಿದ್ದಾರೆ.
`ಆಳಂದಾ ಚುನಾವಣೆ ಮುಗಿದು ಎರಡು ವರ್ಷವಾಗಿದೆ. ಇದೀಗ ಅಕ್ರಮದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಮೊದಲು ಏಕೆ ಮೌನವಾಗಿದ್ದರು?’ ಎಂದು ರಾಮು ನಾಯ್ಕ ಅವರು ಪ್ರಶ್ನಿಸಿದ್ದಾರೆ. `ಕಾಂಗ್ರೆಸ್ ಅಭ್ಯರ್ಥಿ ಬಿ ಆರ್ ಪಾಟೀಲ ಅವರೇ ಅಲ್ಲಿ ಗೆದ್ದಿದ್ದರೂ ಇದೀಗ ಚುನಾವಣಾ ಅಕ್ರಮದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ತನಿಖೆ ತಮ್ಮ ವಿರುದ್ಧ ತಿರುಗಿಬಿದ್ದ ಶಾಸಕರ ಬಾಯಿ ಮುಚ್ಚಿಸುವ ಪಿತೂರಿ’ ಎಂದಿದ್ದಾರೆ.
Discussion about this post