ಅಂಕೋಲಾ ಹಾಗೂ ಹೊನ್ನಾವರದಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ಮರಳು ತೆಗೆಯಲಾಗುತ್ತಿದ್ದು, ಅಕ್ರಮ ದಂಧೆ ನಡೆಸುವವರು ಸರ್ಕಾರಕ್ಕೂ ರಾಜಧನ ಪಾವತಿಸದೇ ವಂಚಿಸುತ್ತಿದ್ದಾರೆ.
ಹೊನ್ನಾವರ ಮಂಕಿ ಬಳಿಯ ಹೊಸಕಟ್ಟಾದ ರಾಜೇಶ ಗೌಡ ಹಾಗೂ ಅದೇ ಊರಿನ ನವೀನ ಗೌಡ ಸೇರಿ ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದಾರೆ. ತಮ್ಮ ಸ್ವಂತ ಲಾಭಕ್ಕಾಗಿ ಅವರು ನದಿಯಿಂದ ಮರಳು ಕದ್ದು ಸಾಗಿಸುತ್ತಿದ್ದಾರೆ. ಅವರಿಬ್ಬರು ಸೇರಿ ಕಾಸರಕೋಡು ಟೊಂಕಾ ಪ್ರದೇಶದ ನಾಗರಾಜ ಖಾರ್ವಿ ಅವರ ಮನೆಗೆ ಮರಳು ಪೂರೈಕೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಅವರು ದಾಳಿ ನಡೆಸಿದ್ದು, ಮರಳನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಮರಳು ಸಾಗಾಟದ ವಾಹನ ಹಾಗೂ ಇನ್ನಿತರ ಪರಿಕ್ಕರಗಳನ್ನು ಜಪ್ತು ಮಾಡಿದ್ದಾರೆ. ಈ ವೇಳೆ ಆರೋಪಿತರಿಬ್ಬರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.
ಅಂಕೋಲಾದ ಅಗಸೂರಿನ ಪಾಂಡುರoಗ ನಾಯ್ಕ ಅವರು ಮರಳು ಕಳ್ಳತನ ಮಾಡಿ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಅವರು ಲಾರಿಯಲ್ಲಿ ಮರಳು ಸಾಗಾಟ ಮಾಡುತ್ತಿದ್ದಾಗ ಅಂಕೋಲಾ ಪಿಎಸ್‌ಐ ಗುರುನಾಥ ಹಾದಿಮನಿ ಅವರು ಅದನ್ನು ತಡೆದಿದ್ದಾರೆ. ಸೆ 18ರ ಸಂಜೆ ಕೋಡ್ಸಣಿ ಕ್ರಾಸಿನ ಬಳಿ ಪಾಂಡುರoಗ ನಾಯ್ಕ ಅವರು ಸಿಕ್ಕಿಬಿದ್ದಿದ್ದು, ಮರಳನ್ನು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Discussion about this post