ಭಟ್ಕಳವನ್ನು ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಒಡ್ಡಿದ್ದ ದೆಹಲಿಯ ನಿತಿನ್ ರ್ಮಾ ಖಾಲೀದ್ ಅವರನ್ನು ಪೊಲೀಸರು ಕೇರಳಕ್ಕೆ ಕರೆದೊಯ್ದಿದ್ದಾರೆ. ಸ್ಥಳ ಮಹಜರು ಪ್ರಕ್ರಿಯೆಗಾಗಿ ಆರೋಪಿಯನ್ನು ಅಲ್ಲಿಗೆ ಕರೆದೊಯ್ಯಲಾಗಿದೆ.
ನಿತಿನ್ ರ್ಮಾ ಖಾಲೀದ್ ವಿರುದ್ಧ ಒಟ್ಟು 16 ಅಪರಾಧ ಪ್ರಕರಣಗಳಿವೆ. ಸೆ ೧೦ರಂದು ಭಟ್ಕಳ ಸ್ಪೋಟಿಸುವುದಾಗಿ ಇಮೇಲ್ ಬೆದರಿಕೆ ಬಂದಿದ್ದು, ಪೊಲೀಸರು ಅದರ ಜಾಡು ಹಿಡಿದಿದ್ದರು. ಆಗ, ನಿತಿನ್ ರ್ಮಾ ಖಾಲೀದ್ ಸಿಕ್ಕಿಬಿದ್ದಿದ್ದರು. ನಿತಿನ್ ರ್ಮಾ ಖಾಲೀದ್ ಅವರು ದೆಹಲಿಯ ಪಟೇಲ್ ನಗರದ ನಿವಾಸಿಯಾಗಿದ್ದಾರೆ.
ತಮಿಳುನಾಡು ಮೂಲದ ಕಣ್ಣನ್ ಗುರುಸ್ವಾಮಿ ಎಂಬಾತರ ಮೊಬೈಲಿನಿಂದ ನಿತಿನ್ ರ್ಮಾ ಖಾಲೀದ್ ಬಾಂಬ್ ಬೆದರಿಕೆ ಹಾಕಿದ್ದು ಖಚಿತವಾಗಿದೆ. ತಮಿಳುನಾಡಿಗೆ ತೆರಳಿ ಪೊಲೀಸರು ವಿಚಾರಣೆ ನಡೆಸಿದಾಗ ಬಾಂಬ್ ಬೆದರಿಕೆ ಹಾಕಿದ ಆರೋಪಿಯ ಬಗ್ಗೆ ಗೊತ್ತಾಗಿದ್ದು, ಕೇರಳದ ಮೂನಾರಿನಿಂದ ನಿತಿನ್ ರ್ಮಾ ಖಾಲೀದ್ ಬೆದರಿಕೆ ಒಡ್ಡಿದ ಹಿನ್ನಲೆ ಅಲ್ಲಿಗೆ ಕರೆದೊಯ್ಯಲಾಗಿದೆ.
ಮೈಸೂರು ಜೈಲಿನಲ್ಲಿದ್ದ ಆರೋಪಿಯನ್ನು ಬಾಡಿ ವಾರಂಟ್ ಮೂಲಕ ಭಟ್ಕಳ ಪೊಲೀಸರು ಕರೆ ತಂದಿದ್ದರು. ಆರೋಪಿ ವಿರುದ್ಧ ಕೇರಳದಲ್ಲಿ 6, ದೆಹಲಿಯಲ್ಲಿ 1. ಮಧ್ಯಪ್ರದೇಶದಲ್ಲಿ 1, ಪುದುಚೇರಿಯಲ್ಲಿ 2, ಉತ್ತರಾಖಂಡ್ದಲ್ಲಿ 1, ಒಡಿಸ್ಸಾದಲ್ಲಿ 1, ಆಂಧ್ರ ಪ್ರದೇಶದಲ್ಲಿ 1 ಹಾಗೂ ರ್ನಾಟಕದಲ್ಲಿ 3 ಪ್ರಕರಣಗಳಿವೆ.
