ಕಾರವಾರ ನಗರದಲ್ಲಿ ಹೂವು – ಹಣ್ಣು ಮಾರಾಟ ಮಾಡುವ ಮಹಿಳೆಯರ ನಡುವೆ ಜಗಳ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು.
ಮಂಗಳವಾರ ಬೆಳಿಗ್ಗೆ ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಹೂವು ಮತ್ತು ಹಣ್ಣಿನ ಅಂಗಡಿಗಳನ್ನ ನಗರಸಭೆ ತೆರವುಗೊಳಿಸಲು ಮುಂದಾಯಿತು. ಪ್ರತಿಭಟನೆ-ಎಚ್ಚರಿಕೆ ನಂತರವೂ ನಗರಸಭೆ ಮಹಿಳೆಯರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಅಂಗಡಿಕಾರರು ಸಿಟ್ಟಾದರು.
ಇದೇ ವಿಷಯವಾಗಿ ಸಿದ್ದಿವಿನಾಯಕ ದೇವಾಲಯದ ಪಕ್ಕದ ರಸ್ತೆಯಲ್ಲಿನ ವ್ಯಾಪಾರ ವಿಚಾರದಲ್ಲಿ ಮಹಿಳೆಯರ ನಡುವೆ ಗಲಾಟೆ ನಡೆಯಿತು. ಅದು ಹೊಡೆದಾಟದ ಸ್ವರೂಪವನ್ನುಪಡೆಯಿತು.
ನಗರಸಭೆ ವಿರುದ್ಧ ಮಹಿಳೆಯರು ಆಕ್ರೋಶವ್ಯಕ್ತಪಡಿಸಿದರು. ತಮ್ಮ ತಳ್ಳುಗಾಡಿಗಳನ್ನು ರಸ್ತೆ ಮೇಲಿರಿಸಿ ಪ್ರತಿಭಟಿಸಿದರು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದ್ದು, ಪೊಲೀಸರು ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದರು.
ಆದರೆ, ಅಂಗಡಿಕಾರರು ಪ್ರತಿಭಟನೆ ಹಿಂಪಡೆಯಲಿಲ್ಲ. ಈ ವೇಳೆ ಪೊಲೀಸರು ಹಾಗೂ ಮಹಿಳೆಯರ ನಡುವೆ ವಾಗ್ವಾದ ನಡೆದಿದ್ದು, ಅದೂ ಮಹಿಳೆಯರ ನಡುವಿನ ಹೊಡೆದಾಟಕ್ಕೂ ಕಾರಣವಾಯಿತು.
Discussion about this post